ITBP SI Recruitment 2022: ಐಟಿ ಬಾರ್ಡರ್ ಪೊಲೀಸ್​ ನೇಮಕಾತಿ: ಆರಂಭಿಕ ವೇತನ 35 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Jul 07, 2022 | 6:41 PM

ITBP SI Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡೋ ಟಿಬೆಟಿಯನ್​ ಬಾರ್ಡರ್ ಪೊಲೀಸ್​ನ ಅಧಿಕೃತ ವೆಬ್​ಸೈಟ್ itbpolice.nic.in  ಮೂಲಕ ಅರ್ಜಿ ಸಲ್ಲಿಸಬಹುದು.

ITBP SI Recruitment 2022: ಐಟಿ ಬಾರ್ಡರ್ ಪೊಲೀಸ್​ ನೇಮಕಾತಿ: ಆರಂಭಿಕ ವೇತನ 35 ಸಾವಿರ ರೂ.
ITBP SI Recruitment 2022
Follow us on

ITBP SI Recruitment 2022: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್​ನಲ್ಲಿನ (ITBP) ಸಬ್ ಇನ್ಸ್‌ಪೆಕ್ಟರ್ (SI) ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡೋ ಟಿಬೆಟಿಯನ್​ ಬಾರ್ಡರ್ ಪೊಲೀಸ್​ನ ಅಧಿಕೃತ ವೆಬ್​ಸೈಟ್ itbpolice.nic.in  ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 37

ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಶೈಕ್ಷಣಿಕ ಅರ್ಹತೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಸೂಚನೆಯನ್ನು ಪರಿಶೀಲಿಸಿ.

ಇದನ್ನೂ ಓದಿ
ರಾಜ್ಯ ಬೀಜ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 42 ಸಾವಿರ ರೂ.
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
Indian Navy recruitment 2022: ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ಆಯ್ಕೆ ಪ್ರಕ್ರಿಯೆ:

  • ದೈಹಿಕ ದಕ್ಷತೆ ಪರೀಕ್ಷೆ (PET)
  • ದೈಹಿಕ ಗುಣಮಟ್ಟದ ಪರೀಕ್ಷೆ (PST)
  • ಲಿಖಿತ ಪರೀಕ್ಷಾ ದಾಖಲೆ
  • ವಿವರವಾದ ವೈದ್ಯಕೀಯ ಪರೀಕ್ಷೆ (DME)
  • ವೈದ್ಯಕೀಯ ಪರೀಕ್ಷೆಯ ವಿಮರ್ಶೆ (RME)

ವಯೋಮಿತಿ:
ಅರ್ಜಿದಾರರ ವಯಸ್ಸು 20 ರಿಂದ 25 ವರ್ಷದೊಳಗಿರಬೇಕು. ಸರ್ಕಾರಿ ನಿಯಮಾವಳಿ ಪ್ರಕಾರ SC/ST/OBC/PWD/PH ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಈ ಬಗ್ಗೆಗಿನ ಹೆಚ್ಚಿನ ಮಾಹಿತಿ ಅಧಿಸೂಚನೆಯ ಮೂಲಕ ಪರಿಶೀಲಿಸಬಹುದು.

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 100/-
SC/ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 35 ಸಾವಿರದಿಂದ 1.12 ಲಕ್ಷದವರೆಗೆ ವೇತನ ಸಿಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್​ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ- ಜುಲೈ 16, 2022.
ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 14, 2022

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

 

Published On - 6:10 pm, Thu, 7 July 22