DHFWS Kolar Recruitment 2025: ಕೋಲಾರದಲ್ಲಿ ವೈದ್ಯಕೀಯ ಅಧಿಕಾರಿ ಹುದ್ದೆಗೆ ನೇರ ಸಂದರ್ಶನ
ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ವೈದ್ಯಕೀಯ ಅಧಿಕಾರಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಏಪ್ರಿಲ್ 25 ರಂದು ಬೆಳಿಗ್ಗೆ 11 ಗಂಟೆಗೆ ವಾಕ್-ಇನ್ ಇಂಟರ್ವ್ಯೂ ನಡೆಯಲಿದೆ. MBBS, ಡಿಪ್ಲೊಮಾ ಅಥವಾ MD ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯೋಮಿತಿ 45 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.

ಕೋಲಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಅಧಿಸೂಚನೆಯ ಮೂಲಕ ವೈದ್ಯಕೀಯ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವಿಶೇಷವಾಗಿ ಕೋಲಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 25 ರಂದು ಬೆಳಿಗ್ಗೆ 11:00 ಗಂಟೆಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು.
DHFWS ಹುದ್ದೆಯ ಅಧಿಸೂಚನೆ:
- ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೋಲಾರ ( DHFWS )
- ಹುದ್ದೆಗಳ ಸಂಖ್ಯೆ: 01
- ಉದ್ಯೋಗ ಸ್ಥಳ: ಕೋಲಾರ – ಕರ್ನಾಟಕ
- ಹುದ್ದೆ ಹೆಸರು: ವೈದ್ಯಕೀಯ ಅಧಿಕಾರಿ
- ಸಂಬಳ: ತಿಂಗಳಿಗೆ ರೂ.45000/-
ಅರ್ಹತಾ ವಿವರಗಳು:
- ಶೈಕ್ಷಣಿಕ ಅರ್ಹತೆ: DHFWS ಕೋಲಾರ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ MBBS , ಡಿಪ್ಲೊಮಾ, MD ಪೂರ್ಣಗೊಳಿಸಿರಬೇಕು.
- ವಯೋಮಿತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೋಲಾರ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು.
- ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ ಮತ್ತು ಸಂದರ್ಶನ
ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗುವುದು ಹೇಗೆ? ಎನ್‌ಡಿಎ ಪರೀಕ್ಷೆ, ತರಬೇತಿ, ಅರ್ಹತೆ ಬಗ್ಗೆ ಇಲ್ಲಿದೆ ಮಾಹಿತಿ
ವೈದ್ಯಕೀಯ ಅಧಿಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಏಪ್ರಿಲ್ 25 ರಂದು ಬೆಳಿಗ್ಗೆ 11:00 ಗಂಟೆಗೆ ಹಾಜರಾಗಬೇಕು.
ಸಂದರ್ಶನದ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ , ಡಿಐಎನ್‌ಸಿ ಹಾಲ್, ಕೆಎನ್ ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ, ಕೋಲಾರ, ಕರ್ನಾಟಕ
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ