Sign In

By signing in or creating an account, you agree with Associated Broadcasting Company's Terms & Conditions and Privacy Policy.

384 ಕೆಎಎಸ್ ಹುದ್ದೆಗಳ ಮರು ಪರೀಕ್ಷೆಗೆ ದಿನಾಂಕ ನಿಗದಿ: ಒಂದೇ ದಿನ ಎರಡು ಪೇಪರ್

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್ಸಿ) ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ನಡೆದ ಕೆಎಎಸ್ ಪರೀಕ್ಷೆಯನ್ನು ಭಾಷಾಂತರ ದೋಷದಿಂದಾಗಿ ರದ್ದುಗೊಳಿಸಲಾಗಿತ್ತು. ಇದೀಗ ಡಿಸೆಂಬರ್ 29 ರಂದು ಮರು ಪರೀಕ್ಷೆ ನಡೆಯಲಿದೆ. ಒಟ್ಟು 384 ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆ ನಡೆಯಲಿದ್ದು, ಪೇಪರ್ 1 ಮತ್ತು 2 ಪರೀಕ್ಷೆಗಳು ಒಂದೇ ದಿನ ನಡೆಯಲಿವೆ.

384 ಕೆಎಎಸ್ ಹುದ್ದೆಗಳ ಮರು ಪರೀಕ್ಷೆಗೆ ದಿನಾಂಕ ನಿಗದಿ: ಒಂದೇ ದಿನ ಎರಡು ಪೇಪರ್
384 ಕೆಎಎಸ್ ಹುದ್ದೆಗಳ ಮರು ಪರೀಕ್ಷೆಗೆ ದಿನಾಂಕ ನಿಗದಿ: ಒಂದೇ ದಿನ ಎರಡು ಪೇಪರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 18, 2024 | 8:15 PM

ಬೆಂಗಳೂರು, ಡಿಸೆಂಬರ್​ 18: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು (KPSC) ಗೆಜೆಟೆಡ್ ಪ್ರೊಬೇಷನ್ ಅಡಿಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ 384 ಹುದ್ದೆಗಳ ನೇಮಕಾತಿಗಾಗಿ ಮರು ಪರೀಕ್ಷೆಯನ್ನು ಡಿಸೆಂಬರ್ 29 ರಂದು ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ಪರೀಕ್ಷೆಯನ್ನು ನಡೆಸಲು ಸಜ್ಜಾಗಿದೆ. ಇಂದು ದಿನಾಂಕ ಪ್ರಕಟವಾಗಿದೆ. ವಿವಿಧ ಇಲಾಖೆಗಳಲ್ಲಿ ತಹಸೀಲ್ದಾರ್, ಸಹಾಯಕ ನಿರ್ದೇಶಕರು ಮತ್ತು ಇತರ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಒಂದೇ ದಿನ ಎರಡು ಪರೀಕ್ಷೆ 

ಕನ್ನಡ ಭಾಷಾಂತರ ಎಡವಟ್ಟಿನಿಂದ ಕೆಎಎಸ್ ಪರೀಕ್ಷೆ ರದ್ದುಗೊಂಡಿತ್ತು. ಆದರೆ ಸದ್ಯ ಡಿಸೆಂಬರ್ 29ರಂದು ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ. ಡಿ.29ರಂದು ಒಂದೇ ದಿನ ಪೇಪರ್‌-1, ಪೇಪರ್‌-2 ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್‌-1 ಪರೀಕ್ಷೆ ನಡೆದರೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪೇಪರ್‌-2 ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: NCB Recruitment 2024 : ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲಾಖೆಯಲ್ಲಿ ಕೆಳದರ್ಜೆ ಕ್ಲರ್ಕ್ ಹುದ್ದೆಗಳು ಖಾಲಿ , ಇಂದೇ ಅರ್ಜಿ ಸಲ್ಲಿಸಿ

ಈ ಕೆಪಿಎಸ್​ಸಿ ಒಟ್ಟು ಹುದ್ದೆಗಳ ನೇಮಕಾತಿಗಾಗಿ ಪ್ರಾಥಮಿಕ ಪರೀಕ್ಷೆಗಳನ್ನು ಇದೇ ವರ್ಷ ಆಗಸ್ಟ್​ನಲ್ಲಿ ನಡೆಸಲಾಗಿತ್ತು. ಆದರೆ ಆ ದಿನದ ಪ್ರಶ್ನೆ ಪತ್ರಿಕೆಯನ್ನು ಭಾಷಾಂತರ ಮಾಡಲಾಗಿದೆ ಎಂಬ ಸುದ್ದಿ ಮತ್ತು ಸ್ಕ್ರೀನ್ ಶಾಟ್​​ಗಳನ್ನು ಎಲ್ಲೆಡೆ ಹರಿದಾಡಿದ್ದವು.

ಇದರಿಂದ ಕೆಪಿಎಸ್​ಸಿ ವ್ಯಾಪಕ ಟೀಕೆ ಗುರಿಯಾಗುವಂತಾಗಿತ್ತು. ಬಳಿಕ ಸಿಎಂ ಸಿದ್ದರಾಮಯ್ಯ ಮರು ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರು. ಅದರ ಬೆನ್ನೆಲ್ಲೇ ಮರು ಪರೀಕ್ಷೆಯ ದಿನಾಂಕವನ್ನು ಡಿಸೆಂಬರ್​ 29ರಂದು ನಿಗದಿ ಮಾಡಲಾಗಿತ್ತು.

ಇದನ್ನೂ ಓದಿ: KSRLPS Recruitment 2024 :ಸೂಪರ್​ವೈಸರ್, ಬ್ಲಾಕ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ

ಈ ಬಗ್ಗೆ ಕೆಪಿಎಸ್​ಸಿ ಟ್ವೀಟ್ ಕೂಡ ಮಾಡಿತ್ತು. 2023-24ನೇ ಸಾಲಿನ ಗೆಜ಼ೆಟೆಡ್‌ ಪ್ರೊಬೆಷನರ್ಸ್‌ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿ:29.12.2024ರಂದು ನಡೆಸಲು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

ವರದಿ: ಈರಣ್ಣ ಬಸವ 

ಮತ್ತಷ್ಟು ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:14 pm, Wed, 18 December 24