KSRLPS Recruitment 2024 :ಸೂಪರ್‌ವೈಸರ್, ಬ್ಲಾಕ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ಕ್ಲಸ್ಟರ್ ಸೂಪರ್‌ವೈಸರ್, ಮ್ಯಾನೇಜರ್ ಸೇರಿದಂತೆ ಒಟ್ಟು 39 ಹುದ್ದೆಗಳು ಖಾಲಿಯಿದ್ದು, ಅಭ್ಯರ್ಥಿಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಹಾವೇರಿ, ಯಾದಗಿರಿಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಕುರಿತಾದ ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯೂ ಆರಂಭಗೊಂಡಿದೆ. ಕರ್ನಾಟಕ ಸರ್ಕಾರದಡಿ ಹಾವೇರಿ ಹಾಗೂ ಯಾದಗಿರಿಯಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗ ಆಕಾಂಕ್ಷಿಗಳು ಕ್ಲಸ್ಟರ್ ಸೂಪರ್‌ವೈಸರ್, ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಈ ತಿಂಗಳ ಡಿಸೆಂಬರ್ 16 ರೊಳಗಾಗಿ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
* ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ
* ಹುದ್ದೆಗಳು : ಕ್ಲಸ್ಟರ್ ಮೇಲ್ವಿಚಾರಕರು, ಡಿಇಒ/ ಎಂಐಎಸ್ ಸಂಯೋಜಕರು, ಬ್ಲಾಕ್ ಮ್ಯಾನೇಜರ್, ಜಿಲ್ಲಾ ವ್ಯವಸ್ಥಾಪಕರು,
ಜಿಲ್ಲಾ ಎಂಐಎಸ್ ಸಹಾಯಕ ಮತ್ತು ಡಿಇಒ, ಕಚೇರಿ ಸಹಾಯಕ ಹಾಗೂ ತಾಲೂಕು ಕಾರ್ಯಕ್ರಮ ನಿರ್ವಾಹಕ.
* ಹುದ್ದೆಗಳ ಸಂಖ್ಯೆ: 39
* ಉದ್ಯೋಗ ಸ್ಥಳ: ಹಾವೇರಿ, ಯಾದಗಿರಿ
ಶೈಕ್ಷಣಿಕ ಅರ್ಹತೆಗಳು, ವಯೋಮಿತಿ ಹಾಗೂ ವೇತನ ಶ್ರೇಣಿ
* KSRLPS ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳ ಅನುಸಾರವಾಗಿ ಕ್ಲಸ್ಟರ್ ಮೇಲ್ವಿಚಾರಕ, ಕಚೇರಿ ಸಹಾಯಕ, ಜಿಲ್ಲಾ ಎಂಐಎಸ್ ಸಹಾಯಕ ಮತ್ತು ಡಿಇಒ ಹುದ್ದೆಗೆ ಪದವಿ ಪೂರ್ಣಗೊಳಿಸಿರಬೇಕು.
* ಡಿಇಒ / ಎಂಐಎಸ್ ಸಂಯೋಜಕರು, ಬ್ಲಾಕ್ ಮ್ಯಾನೇಜರ್ ಹುದ್ದೆಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
* ಜಿಲ್ಲಾ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ ಹಾಗೂ ತಾಲೂಕು ಕಾರ್ಯಕ್ರಮ ನಿರ್ವಾಹಕ ಹುದ್ದೆಗೆ ಸ್ನಾತಕೋತ್ತರ / ಡಿಪ್ಲೋಮಾ ಪದವಿ ಪಡೆದಿರಬೇಕು.
* ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘವು ವೇತನ ಶ್ರೇಣಿ, ವಯೋಮಿತಿಗಳ ಕುರಿತಂತೆ ಸ್ವತಃ ನಿರ್ಧಾರ ತೆಗೆದುಕೊಳ್ಳುತ್ತದೆ.
ಅರ್ಜಿ ಶುಲ್ಕ
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ
* ಸಂದರ್ಶನ
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-12-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 – 12 -2024
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ