Indian Army Recruitment 2022: ಭಾರತೀಯ ಸೇನೆಯ ಪಯೋನೀರ್ ಕಾರ್ಪ್ಸ್ ತರಬೇತಿ ಕೇಂದ್ರ, ಬೆಂಗಳೂರು ಗ್ರೂಪ್ ಸಿ ಸಿವಿಲಿಯನ್ ವರ್ಗದ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಗ್ರೂಪ್ ಸಿ ನಾಗರಿಕ ವರ್ಗದ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ನಮೂನೆಯು ನೇಮಕಾತಿ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 21 ದಿನಗಳೊಳಗೆ (ಏಪ್ರಿಲ್ 3 ರಿಂದ) ನಿಗದಿತ ವಿಳಾಸಕ್ಕೆ ತಲುಪಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಗ್ರೂಪ್ ಸಿ ವರ್ಗದ ಅಡಿಯಲ್ಲಿ, ಬಾಣಸಿಗ, ಸಲಕರಣೆ ದುರಸ್ತಿ, ಮೆಸೆಂಜರ್ ಮತ್ತು ಹೌಸ್ ಕೀಪರ್ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
Indian Army Recruitment 2022: ಹುದ್ದೆಗಳ ವಿವರಗಳು:
ಸಲಕರಣೆ ದುರಸ್ತಿ – 1 ಹುದ್ದೆ
ಬಾಣಸಿಗ – 1 ಹುದ್ದೆ
ಮೆಸೆಂಜರ್ – 1 ಹುದ್ದೆ
ಹೌಸ್ ಕೀಪರ್ – 1 ಹುದ್ದೆ
Indian Army Recruitment 2022: ಶೈಕ್ಷಣಿಕ ಅರ್ಹತೆ
ಸಲಕರಣೆ ದುರಸ್ತಿ – 10ನೇ ತರಗತಿ ಪಾಸಾಗಿರಬೇಕು. ಎಲ್ಲಾ ರೀತಿಯ ಕ್ಯಾನ್ವಾಸ್, ಜವಳಿ ಮತ್ತು ಚರ್ಮವನ್ನು ಸರಿಪಡಿಸಲು ಮತ್ತು ಉಪಕರಣಗಳು ಮತ್ತು ಬೂಟುಗಳನ್ನು ಬದಲಾಯಿಸಲು ಶಕ್ತರಾಗಿರಬೇಕು.
ಬಾಣಸಿಗ – 10ನೇ ತೇರ್ಗಡೆಯಾಗಿರಬೇಕು. ಭಾರತೀಯರ ಅಡುಗೆಯಲ್ಲಿ ಪ್ರವೀಣರಾಗಿರಬೇಕು.
ಮೆಸೆಂಜರ್ – 10 ನೇ ತೇರ್ಗಡೆಯಾಗಿರಬೇಕು. ಸಂಬಂಧಿತ ವಿಷಯದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.
ಹೌಸ್ ಕೀಪರ್ – 10 ನೇ ತರಗತಿ ಪಾಸಾಗಿರಬೇಕು. ಜೊತೆಗೆ ಒಂದು ವರ್ಷದ ಅನುಭವ ಹೊಂದಿರಬೇಕು.
Indian Army Recruitment 2022: ವೇತನ:
ಸಲಕರಣೆ ದುರಸ್ತಿ – ರೂ. 18000 ರಿಂದ ರೂ. 56900/
ಬಾಣಸಿಗ – ರೂ. 19900 ರಿಂದ ರೂ. 63200/-
ಮೆಸೆಂಜರ್ – ರೂ. 18000 ರಿಂದ ರೂ. 56900/-
ಹೌಸ್ ಕೀಪರ್ – ರೂ. 18000 ರಿಂದ ರೂ. 56900/-
Indian Army Recruitment 2022: ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
Indian Army Recruitment 2022: ಅರ್ಜಿ ಸಲ್ಲಿಸುವುದು ಹೇಗೆ?
ಈ ನೇಮಕಾತಿಗಾಗಿ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಅದಕ್ಕಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಡೌನ್ಲೋಡ್ ಮಾಡಬೇಕು. ಅಲ್ಲದೆ ಈ ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
Indian Army Recruitment 2022: ಅರ್ಜಿ ಕಳುಹಿಸಬೇಕಾದ ವಿಳಾಸ:
The Commandant,
Pioneer Corps Training Centre,
Post: Banaswadi, Bangalore-560033
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು