Railway Recruitment 2022: ಪಶ್ಚಿಮ ರೈಲ್ವೇಯಲ್ಲಿದೆ ಉದ್ಯೋಗಾವಕಾಶ: ಶೀಘ್ರದಲ್ಲೇ ಅರ್ಜಿ ಸಲ್ಲಿಸಿ
Railway Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ wcr.indianrailways.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
Railway Recruitment 2022: ಭಾರತೀಯ ರೈಲ್ವೇಯಲ್ಲಿ ಉದ್ಯೋಗವನ್ನು ಎದುರು ನೋಡುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಸುವರ್ಣಾವಕಾಶ. ಭಾರತೀಯ ರೈಲ್ವೇ ನೇಮಕಾತಿ ಸೆಲ್ (RRC) ಪಶ್ಚಿಮ ರೈಲ್ವೆಯಲ್ಲಿನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಈ ವಾರದೊಳಗೆ ಅರ್ಜಿ ಸಲ್ಲಿಸಬೇಕಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ wcr.indianrailways.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ- 102
– ಜೆಇ ವರ್ಗ: 52 ಹುದ್ದೆಗಳು
- ಜೆಇ ವರ್ಕ್ಸ್: 11 ಹುದ್ದೆಗಳು
- ಜೆಇ(ಡ್ರಾಯಿಂಗ್ ಡಿಸೈನ್ ಮತ್ತು ಎಸ್ಟಿಮೇಶನ್): 13 ಹುದ್ದೆಗಳು
- 3 JE/TM: 28 ಹುದ್ದೆಗಳು
– ತಂತ್ರಜ್ಞರ ವರ್ಗ: 35 ಖಾಲಿ ಹುದ್ದೆಗಳು
- ತಂತ್ರಜ್ಞ Gr- III Mech (C&W): 10 ಹುದ್ದೆಗಳು
- ತಂತ್ರಜ್ಞ Gr- III (OHE/PSI/TRD): 05 ಹುದ್ದೆಗಳು
- ತಂತ್ರಜ್ಞ Gr- III (ಎಲೆಕ್ಟ್ರಿಕ್-G/OSM/TL): 06 ಹುದ್ದೆಗಳು
- ತಂತ್ರಜ್ಞ Gr- III /TRS: 14 ಹುದ್ದೆಗಳು
– ವಿವಿಧ ವರ್ಗದ ಹುದ್ದೆಗಳು: 15 ಹುದ್ದೆಗಳು
- ಮುಖ್ಯ ಕಾನೂನು ಸಹಾಯಕ: 4 ಹುದ್ದೆಗಳು
- ಸ್ಟಾಫ್ ನರ್ಸ್: 4 ಹುದ್ದೆಗಳು
- ಜೂನಿಯರ್ ಟ್ರಾನ್ಸ್ಲೇಟರ್: 07 ಹುದ್ದೆಗಳು
ಅರ್ಹತಾ ಮಾನದಂಡ: ಮೇಲೆ ತಿಳಿಸಲಾದ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ಹಂಚಿಕೊಂಡಿರುವ ವಿವರವಾದ ಅಧಿಸೂಚನೆಯಿಂದ ಶಿಕ್ಷಣ ಅರ್ಹತೆ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು.
ವಯೋಮಿತಿ: ಈ ಹುದ್ದೆಗಳಿಗೆ 42 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 47 ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 45 ವರ್ಷದವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ನೇಮಕಾತಿ ಪ್ರಕ್ರಿಯೆಯು ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಕೌಶಲ್ಯ ಪರೀಕ್ಷೆ / ಅನುವಾದ ಪರೀಕ್ಷೆ (ಅನ್ವಯವಾಗುವಲ್ಲಿ) ಮತ್ತು ದಾಖಲೆ ಪರಿಶೀಲನೆ/ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 15, 2022
ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಅಭ್ಯರ್ಥಿಗಳು ಪಶ್ಚಿಮ ರೈಲ್ವೆಯ ಅಧಿಕೃತ ವೆಬ್‌ಸೈಟ್ wcr.indianrailways.gov.in ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.