AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB NTPC Job: ಮಾರ್ಚ್ 2023ರ ಹೊತ್ತಿಗೆ ಆರ್ ಆರ್ ಬಿ ಎನ್ ಟಿ ಪಿಸಿ ಫಲಿತಾಂಶ ಮತ್ತು ನೇಮಕಾತಿ ಪತ್ರಗಳು: ಆರ್ ಆರ್ ಬಿ

ರೇಲ್ವೇಸ್ ನೀಡಿರುವ ಮಾಹಿತಿಯ ಪ್ರಕಾರ 6ನೇ ಹಂತದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 7,124 ಅಭ್ಯರ್ಥಿಗಳ ಫಲಿತಾಂಶವನ್ನು ಸೆಪ್ಟೆಂಬರ್ ನಲ್ಲಿ ಪ್ರಕಟಿಸಲಾಗಿದ್ದು ಅವರ ವೈದ್ಯಕೀಯ ತಪಾಸಣೆ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಜಾರಿಯಲ್ಲಿದೆ.

RRB NTPC Job: ಮಾರ್ಚ್ 2023ರ ಹೊತ್ತಿಗೆ ಆರ್ ಆರ್ ಬಿ ಎನ್ ಟಿ ಪಿಸಿ ಫಲಿತಾಂಶ ಮತ್ತು ನೇಮಕಾತಿ ಪತ್ರಗಳು: ಆರ್ ಆರ್ ಬಿ
ಭಾರತೀಯ ರೈಲ್ವೆ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Nov 18, 2022 | 2:15 PM

Share

ರೇಲ್ವೇ ರಿಕ್ರೂಟ್ ಮೆಂಟ್ ಮಂಡಳಿಯು (Railway Recruitment Boards) ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟೆಗಿರಿಗಾಗಿ (NTPC) ನಡೆಸಿದ ಪರೀಕ್ಷೆಗಳ ಫಲಿತಾಂಶಗಳ ಟೈಮ್ ಲೈನ್ ಅನ್ನು ರೇಲ್ವೇ ಇಲಾಖೆ ಮೊದಲ ಬಾರಿಗೆ ಪ್ರಕಟಿಸಿದೆ. ಮಾರ್ಚ್ 2023ರ ಹೊತ್ತಿಗೆ 35, 281 ಜನ ರೇಲ್ವೇಸ್ ನಲ್ಲಿ ಎನ್ ಟಿ ಪಿ ಸಿ ಅಡಿಯ ನೌಕರಿಗಳಿಗೆ ನೇಮಕಾತಿ ಪತ್ರ ಪಡೆಯಲಿದ್ದಾರೆ. ಇಲಾಖೆಯು ಎನ್ ಟಿ ಪಿ ಸಿ ಹುದ್ದೆಗಳಿಗಾಗಿ ಬೇರೆ ಬೇರೆ ಹಂತಗಳಲ್ಲಿ ಪರೀಕ್ಷೆಗಳನ್ನು (exams) ನಡೆಸುತ್ತದೆ. ಫಲಿತಾಂಶಗಳನ್ನು ಪ್ರಕಟಿಸುವ ಬಗ್ಗೆ ಇಲಾಖೆ ನೀಡಿರುವ ಸೂಚನೆಯು ಎನ್ ಟಿ ಪಿಸಿಯ ವಿವಿಧ ಹಂತಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ವಿವಿಧ ಹಂತಗಳ ಟೈಮ್ ಲೈನ್ ಕೆಳಗಿನಂತಿದೆ.

ಆರ್ ಆರ್ ಬಿ ಎನ್ ಟಿ ಪಿಸಿ ರಿಸಲ್ಟ್ ವೇಳಾಪಟ್ಟಿ

ಹಂತ ಫಲಿತಾಂಶ ಡಾಕ್ಯುಮೆಂಟ್ ಪರಿಶೀಲನೆ ಕೆಲಸಕ್ಕೆ ಸೇರುವ ದಿನ
5ನೇ ಹಂತದ ಫಲಿತಾಂಶ ನವೆಂಬರ್ ಮೂರನೇ ವಾರ ಡಿಸೆಂಬರ್ ಎರಡನೇ ವಾರ ಜನೆವರಿ ಮೂರನೇ ವಾರ
4 ನೇ ಹಂತದ ಫಲಿತಾಂಶ ಜನೆವರಿ ಎರಡನೇ ವಾರ ಫೆಬ್ರುವರಿ ಮೊದಲ ವಾರ ಫೆಬ್ರುವರಿ ನಾಲ್ಕನೇ ವಾರ
3ನೇ ಹಂತದ ಫಲಿತಾಂಶ ಮಾರ್ಚ್ 2023 ಮೊದಲ ವಾರ

ರೇಲ್ವೇಸ್ ನೀಡಿರುವ ಮಾಹಿತಿಯ ಪ್ರಕಾರ 6ನೇ ಹಂತದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 7,124 ಅಭ್ಯರ್ಥಿಗಳ ಫಲಿತಾಂಶವನ್ನು ಸೆಪ್ಟೆಂಬರ್ ನಲ್ಲಿ ಪ್ರಕಟಿಸಲಾಗಿದ್ದು ಅವರ ವೈದ್ಯಕೀಯ ತಪಾಸಣೆ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಜಾರಿಯಲ್ಲಿದೆ. ಒಟ್ಟು 21 ಆರ್ ಆರ್ ಬಿಗಳ ಪೈಕಿ 17 ಫಲಿತಾಂಶಗಳನ್ನು ಪ್ರಕಟಿಸಿವೆ. ಉಳಿದ ಆರ್ ಆರ್ ಬಿ ಗಳು ಇಷ್ಟರಲ್ಲೇ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಅಪ್ಡೇಟ್ ಗಳಿಗಾಗಿ ಆಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಚೆಕ್ ಮಾಡಿಕೊಂಡಿರಬೇಕೆಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ:UPSC Recruitment 2022: 160 ಉಪನ್ಯಾಸಕರು ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆರ್ ಆರ್ ಬಿ ಎನ್ ಟಿ ಪಿಸಿ ರಿಸಲ್ಟ್ ವೇಳಾಪಟ್ಟಿಯನ್ನು ರೇಲ್ವೇಸ್ ಪ್ರಕಟಿಸಿರುವ ಪ್ರಕಾರ 5 ನೇ ಹಂತದ ಫಲಿತಾಂಶಗಳನ್ನು ನವೆಂಬರ್ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದೆ ಮತ್ತು ಡಿಸೆಂಬರ್ ಎರಡನೇ ವಾರದಲ್ಲಿ ಅರ್ಹತೆ ಗಿಟ್ಟಿಸಿದ ಅಭ್ಯರ್ಥಿಗಳ ಡಾಕ್ಯುಮೆಂಟ್ ಪರಿಶೀಲನೆ ಮತ್ತು ಮೆಡಿಕಲ್ ಟೆಸ್ಟ್ ಗಳು ನಡೆಯಲಿದೆ. ಜನೆವರಿ ಮೂರನೇ ವಾರದಲ್ಲಿ ಆಯ್ಕೆಯಾದ ಆಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ನೀಡಲಾಗುವುದು. ಹಂತ 4 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆಬ್ರುವರಿ 4 ನೇ ವಾರದಲ್ಲಿ ಅಪಾಯಿಂಟ್ ಮೆಂಟ್ ಲೆಟರ್ ಗಳನ್ನು ನೀಡಲಾಗುವುದು.

ಮಾರ್ಚ್ 2023 ಹೊತ್ತಿಗೆ ಆರ್ ಆರ್ ಬಿ ಎನ್ ಟಿ ಪಿಸಿ ಆಯ್ಕೆ ಪ್ರಕ್ರಿಯೆ ಕೊನೆಗೊಂಡು ಕೆಟೆಗಿರಿಯ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

ಇದನ್ನೂ ಓದಿ: KPSC Recruitment 2022: ಅರ್ಥಶಾಸ್ತ್ರ ಮತ್ತು ಅಂಕಿಅಂಶಗಳ ನಿರ್ದೇಶನಾಲಯದ 58 ಹುದ್ದೆಗಳಿಗೆ ಅರ್ಜಿ ಆಹ್ವಾನ

‘ನೇಮಕಾತಿ ಪ್ರಕ್ರಿಯೆ ಮೇಲಿನಿಂದ ಕೆಳಗಿನ ಹಂತಗಳನುಸಾರ ಮಾಡಲಾಗುವುದು. ಒಬ್ಬ ಅಭ್ಯರ್ಥಿ ಒಂದು ಹಂತದ ಕೆಟೆಗಿರಿಯಲ್ಲಿ ಮಾತ್ರ ನೌಕರಿ ಪಡೆಯುವ ಉದ್ದೇಶದಿಂದ ಈ ಕ್ರಮವನ್ನು ಅನುಸರಿಸಲಾಗಿದೆ. ಉನ್ನತ ಹಂತದ ಹುದ್ದೆಗೆ ಅರ್ಹನಾದ ಅಭ್ಯರ್ಥಿಯೊಬ್ಬ ಮೆಡಿಕಲ್ ಟೆಸ್ಟ್ ನಲ್ಲಿ ಫೇಲಾದರೆ ಮೆರಿಟ್ ಆಧಾರದಲ್ಲಿ ಅವನನ್ನು ಮೆರಿಟ್ ಆಧಾರದಲ್ಲಿ ಕೆಳಗಿನ ಹಂತದ ಹುದ್ದೆಗಳಿಗೆ ಪರಿಗಣಿಸಲಾಗುವುದು,’ ಎಂದು ರೇಲ್ವೇಸ್ ಅಧಿಕಾರಿಯೊಬ್ಬರು ಹೇಳಿರುವುದನ್ನು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ

ಆರ್ ಆರ್ ಬಿ ಎನ್ ಟಿ ಪಿಸಿ ನೇಮಕಾತಿ ಪ್ರಕ್ರಿಯೆ ಕಂಪ್ಯೂಟರ್-ಆಧಾರಿತ ಟೆಸ್ಟ್, ಟೈಪಿಂಗ್ ಸ್ಕಿಲ್ ಟೆಸ್ಟ್ , ಡಾಕ್ಯೂಮೆಂಟ್ ವೆರಿಫಿಕೇಶನ್ ಮತ್ತು ವೈದ್ಯಕೀಯ ಪರೀಕ್ಷೆ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಸ್ಟೇಶನ್ ಮಾಸ್ಟರ್, ಗೂಡ್ಸ್ ಗಾರ್ಡ್ಸ್, ಕಮರ್ಶಿಯಲ್ ಅಪ್ರೆಂಟಿಸಿಸ್, ಟಿಕೆಟ್ ಕ್ಲರ್ಕ್, ಜ್ಯೂನಿಯರ್ ಅಕೌಂಟ್ ಅಸಿಸ್ಟಂಟ್ಸ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಟೈಮ್ ಕೀಪರ್ಸ್ ಮೊದಲಾದ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಮತ್ತಷ್ಟು ಉದ್ಯೋಗ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್​ ಮಾಡಿ

Published On - 2:14 pm, Fri, 18 November 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?