Sign In

By signing in or creating an account, you agree with Associated Broadcasting Company's Terms & Conditions and Privacy Policy.

TRAI Recruitment 2025: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಲ್ಲಿ ನೇಮಕಾತಿ; ಆನ್ಲೈನ್​​ನಲ್ಲಿ ಅರ್ಜಿ ಸಲ್ಲಿಸಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹಿರಿಯ ಸಂಶೋಧನಾ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅರ್ಜಿ ಸಲ್ಲಿಸಲಿ ಮಾರ್ಚ್ 13 ಕೊನೆಯ ದಿನಾಂಕ. 3 ವರ್ಷಗಳ ಡೆಪ್ಯುಟೇಶನ್ ಆಧಾರದ ಮೇಲೆ ನೇಮಕಾತಿ. ಸ್ನಾತಕೋತ್ತರ ಪದವಿ ಮತ್ತು ಸಂಬಂಧಿತ ಅನುಭವ ಅಗತ್ಯ. ವೇತನ ಶ್ರೇಣಿ 11,67,700-2,08,700. ಆಸಕ್ತ ಅಭ್ಯರ್ಥಿಗಳು TRAI ವೆಬ್‌ಸೈಟ್‌ಗೆ ಭೇಟಿ ನೀಡಿ.

TRAI Recruitment 2025: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಲ್ಲಿ  ನೇಮಕಾತಿ; ಆನ್ಲೈನ್​​ನಲ್ಲಿ ಅರ್ಜಿ ಸಲ್ಲಿಸಿ
Trai Recruitment 2025
Follow us
ಅಕ್ಷತಾ ವರ್ಕಾಡಿ
|

Updated on: Mar 11, 2025 | 12:29 PM

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಹಿರಿಯ ಸಂಶೋಧನಾ ಅಧಿಕಾರಿಗಳ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಈ ನೇಮಕಾತಿ ಅಭಿಯಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ 13 ಎಂದು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ತುಂಬಾ ಹತ್ತಿರದಲ್ಲಿದೆ.

ಈ ನೇಮಕಾತಿಯನ್ನು 3 ವರ್ಷಗಳ ಅವಧಿಗೆ ಡೆಪ್ಯುಟೇಶನ್ ಆಧಾರದ ಮೇಲೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ವೇತನ ಶ್ರೇಣಿ (1167,700-2,08,700) ಜೊತೆಗೆ ಡಿಎ, ಎಚ್‌ಆರ್‌ಎ ಮತ್ತು ಇತರ ಭತ್ಯೆಗಳನ್ನು ನೀಡಲಾಗುವುದು.

ಸ್ನಾತಕೋತ್ತರ ಪದವಿ (ವ್ಯವಹಾರ ಆಡಳಿತ, ಅರ್ಥಶಾಸ್ತ್ರ, ವಾಣಿಜ್ಯ, ಎಂಜಿನಿಯರಿಂಗ್, ಕಾನೂನು, ವಿಜ್ಞಾನ ಅಥವಾ ಮಾನವಿಕ) ಅಥವಾ ಸಿಎ/ಐಸಿಡಬ್ಲ್ಯೂಎ ಸದಸ್ಯತ್ವ ಹೊಂದಿರಬೇಕು. ದೂರಸಂಪರ್ಕ ಅಥವಾ ಹಣಕಾಸು ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳನ್ನು ಮೀರಿರಬಾರದು.

ಇದನ್ನೂ ಓದಿ
Image
IFFCO ನಲ್ಲಿ ಪದವೀಧರರಿಗೆ ಉದ್ಯೋಗವಕಾಶ; ತಿಂಗಳಿಗೆ 33,000 ರೂ. ಸಂಬಳ
Image
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
Image
ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; ಡಿಗ್ರಿ ಕಂಪ್ಲೀಟ್ ಆಗಿದ್ರೆ ಸಾಕು
Image
ಜೂ.ಇಂಜಿನಿಯರ್ ಹುದ್ದೆಗೆ ನೇಮಕಾತಿ; ಮಾ. 8 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳನ್ನು ನವದೆಹಲಿಯ TRAI ಪ್ರಧಾನ ಕಚೇರಿಯಲ್ಲಿ ನೇಮಿಸಲಾಗುವುದು.ಆಸಕ್ತ ಅಭ್ಯರ್ಥಿಗಳು TRAI ನ ಅಧಿಕೃತ ವೆಬ್‌ಸೈಟ್‌ಗೆ trai.gov.in ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಇತರ ಅಗತ್ಯ ದಾಖಲೆಗಳೊಂದಿಗೆ ಹಿರಿಯ ಸಂಶೋಧನಾ ಅಧಿಕಾರಿ (ಎ & ಪಿ), ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ವಿಶ್ವ ವ್ಯಾಪಾರ ಕೇಂದ್ರ, 6 ನೇ ಮಹಡಿ, ಟವರ್-ಎಫ್, ನೌರೋಜಿ ನಗರ, ನವದೆಹಲಿ-110029 ಗೆ ಕಳುಹಿಸಬೇಕು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ