ಪ್ರಮುಖ ಚಿತ್ರೋತ್ಸವಗಳಲ್ಲಿ ಒಂದಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ (Bengaluru International Film Festival) 15ನೇ ಆವೃತ್ತಿ ಪೂರ್ಣಗೊಂಡಿದೆ. ಇಂದು (ಮಾರ್ಚ್ 7) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಮಾರೋಪ ಸಮಾರಂಭ ನಡೆದಿದೆ. ಈ ಬಾರಿಯ ಸಿನಿಮೋತ್ಸವದಲ್ಲಿ (15th BIFFES) ನೂರಾರು ಸಿನಿಮಾಗಳು ಪ್ರದರ್ಶನಗೊಂಡಿವೆ. ವಿವಿಧ ವಿಭಾಗಗಳಲ್ಲಿ ಸಿನಿಮಾಗಳು ಸ್ಪರ್ಧಿಸಿವೆ. ಅವುಗಳ ಪೈಕಿ ಪ್ರಶಸ್ತಿ (15th BIFFES Awards) ಪಡೆದ ಸಿನಿಮಾಗಳ ಬಗ್ಗೆ ವಿವರ ಇಲ್ಲಿದೆ. ಹಿರಿಯ ನಿರ್ದೇಶಕ ಎಂಎಸ್ ಸತ್ಯು ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ನೀಡಲಾಗಿದೆ. ಕನ್ನಡ ಚಲನಚಿತ್ರ ಸ್ಪರ್ಧೆ, ಭಾರತೀಯ ಚಲನಚಿತ್ರ ಸ್ಪರ್ಧೆ, ಏಷ್ಯನ್ ಚಲನಚಿತ್ರ ಸ್ಪರ್ಧೆ ಮುಂತಾದ ವಿಭಾಗಗಳಲ್ಲಿ ಹಲವು ಸಿನಿಮಾಗಳು ಪ್ರಶಸ್ತಿ ಪಡೆದಿವೆ.
ಮೊದಲ ಅತ್ಯುತ್ತಮ ಸಿನಿಮಾ: ನಿರ್ವಾಣ (ನಿರ್ದೇಶನ: ಅಮರ್ ಎಲ್. ನಿರ್ಮಾಣ: ಕೆ ಮಂಜು ಅವಿನಾಶ್ ಶೆಟ್ಟಿ)
ಎರಡನೇ ಅತ್ಯುತ್ತಮ ಸಿನಿಮಾ: ಕಂದೀಲು. (ನಿರ್ದೇಶನ, ನಿರ್ಮಾಣ: ಕೆ. ಯಶೋದಾ ಪ್ರಕಾಶ್)
ಮೂರನೇ ಅತ್ಯುತ್ತಮ ಸಿನಿಮಾ: ಆಲ್ಇಂಡಿಯಾ ರೇಡಿಯೋ (ನಿರ್ದೇಶನ: ರಾಮಸ್ವಾಮಿ. ನಿರ್ಮಾಣ: ದೇವಗಂಗಾ ಪ್ರೇಮ್ಸ್)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಕ್ಷೇತ್ರಪತಿ (ನಿರ್ದೇಶನ: ಶ್ರೀಕಾಂತ್ ಕಟಗಿ. ನಿರ್ಮಾಣ: ಅಶ್ರಗ ಕ್ರಿಯೇಷನ್ಸ್)
ನೆಟ್ಪ್ಯಾಕ್ ತೀರ್ಪುಗಾರರ ಪ್ರಶಸ್ತಿ: ಸ್ವಾತಿ ಮುತ್ತಿನ ಮಳೆ ಹನಿಯೇ (ನಿರ್ದೇಶನ: ರಾಜ್ ಬಿ. ಶೆಟ್ಟಿ. ನಿರ್ಮಾಣ: ರಮ್ಯ)
ಇದನ್ನೂ ಓದಿ: ವಿಧಾನಸೌಧದಲ್ಲಿ ಸಾಧು ಕೋಕಿಲ ಮಾತು ಕೇಳಿ ಗಾಬರಿಯಾದ ಮಂಡಳಿ ಅಧ್ಯಕ್ಷರು; ಅಂಥದ್ದೇನಾಯ್ತು?
ಮೊದಲ ಅತ್ಯುತ್ತಮ ಸಿನಿಮಾ: ಶ್ಯಾಮ್ಚಿ ಆಯಿ (ನಿರ್ದೇಶನ: ಸುಜಯ್ ದಹಕೆ. ನಿರ್ಮಾಣ: ಪುಣೆ ಫಿಲ್ಮ್ ಕಂಪನಿ)
ಎರಡನೇ ಅತ್ಯುತ್ತಮ ಸಿನಿಮಾ: ಅಯೋಥಿ (ನಿರ್ದೇಶನ: ಮಂದಿರಾ ಮೂರ್ತಿ. ನಿರ್ಮಾಣ: ಆರ್. ರವೀಂದ್ರನ್)
ಮೂರನೇ ಅತ್ಯುತ್ತಮ ಸಿನಿಮಾ: ಛಾವೆರ್ (ನಿರ್ದೇಶನ: ತನು ಪಾಪಚ್ಚನ್. ನಿರ್ಮಾಣ: ಅರುಣ್ ನಾರಾಯಣ ಪ್ರೊಡಕ್ಷನ್ಸ್)
ಫಿಪ್ರೆಸ್ಕಿ ಪ್ರಶಸ್ತಿ: ಶ್ಯಾಮ್ಚಿ ಆಯಿ (ನಿರ್ದೇಶನ: ಸುಜಯ್ ದಹಕೆ. ನಿರ್ಮಾಣ: ಪುಣೆ ಫಿಲ್ಮ್ ಕಂಪನಿ)
ಮೊದಲ ಅತ್ಯುತ್ತಮ ಸಿನಿಮಾ: ಇನ್ಶಾಅಲ್ಲಾ ಎ ಬಾಯ್ (ನಿರ್ದೇಶನ: ಅಮ್ದಜ್ ಅಲ್ ರಶೀದ್. ನಿರ್ಮಾಣ: ಇಮೇಜಿನೇರಿಯಂ ಫಿಲ್ಮ್ಸ್, ಜಾರ್ಜಸ್ ಫಿಲ್ಮ್ಸ್)
ಎರಡನೇ ಅತ್ಯುತ್ತಮ ಸಿನಿಮಾ: ಸ್ಥಳ್ (ನಿರ್ದೇಶನ: ಜಯಂತ್ ದಿಗಂಬರ್ ಸೋಮಾಲ್ಕರ್. ನಿರ್ಮಾಣ: ಧುನ್)
ಮೂರನೇ ಅತ್ಯುತ್ತಮ ಸಿನಿಮಾ: ಸಂಡೇ (ನಿರ್ದೇಶನ: ಶೋಕಿರ್ ಕೊಲಿಕೊಬ್. ನಿರ್ಮಾಣ: ಫಿರ್ದವಾಸ್ ಅಬ್ದುಕೊಲಿಕೊವ್)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಮಿಥ್ಯ (ನಿರ್ದೇಶನ: ಸುಮಂತ್ ಭಟ್. ನಿರ್ಮಾಣ: ಪರಂವಾ ಪಿಕ್ಚರ್ಸ್)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.