ಗುಟ್ಟಾಗಿ ಮದುವೆ ಆದ ‘96’ ಸಿನಿಮಾ ಜೋಡಿ? ವೈರಲ್ ಆಯ್ತು ಫೋಟೋ
‘96’ ಸಿನಿಮಾದಿಂದ ಆದಿತ್ಯ ಹಾಗೂ ಗೌರಿ ಜನಮನ್ನಣೆ ಗಳಿಸಿದರು. ಈ ಸಿನಿಮಾದ ಮೂಲಕ ಇಬ್ಬರಿಗೂ ಫ್ಯಾನ್ ಫಾಲೋಯಿಂಗ್ ಸಿಕ್ಕಿದೆ. ಜಾನು ಮತ್ತು ರಾಮ್ ಪಾತ್ರಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಈ ಚಿತ್ರದ ನಂತರ ಗೌರಿಗೆ ಹೆಚ್ಚಿನ ಅವಕಾಶಗಳು ಬಂದವು.
ತಮಿಳಿನ ‘96’ ಚಿತ್ರ (96 Movie) ಭರ್ಜರಿ ಯಶಸ್ಸು ಕಂಡಿತ್ತು. ವಿಜಯ್ ಸೇತುಪತಿ ಮತ್ತು ತ್ರಿಷಾ ಕೃಷ್ಣ ಅಭಿನಯದ ಈ ಚಿತ್ರಕ್ಕೆ ದಕ್ಷಿಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ಗೋವಿಂದ ವಸಂತ್ ಸಂಗೀತ ಸಂಯೋಜನೆಯ ಈ ಚಿತ್ರದ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾದವು. ವಿಜಯ್ ಮತ್ತು ತ್ರಿಷಾ ಅವರ ಬಾಲ್ಯದ ಕಥೆಯೂ ಸಿನಿಮಾದಲ್ಲಿ ಬರುತ್ತದೆ. ವಿಜಯ್ ಪಾತ್ರದಲ್ಲಿ ಆದಿತ್ಯ ಭಾಸ್ಕರ್ ಹಾಗೂ ತ್ರಿಷಾ ಪಾತ್ರದಲ್ಲಿ ಗೌರಿ ಜಿ. ಕಿಶನ್ ಕಾಣಿಸಿಕೊಂಡಿದ್ದರು. ಇಬ್ಬರೂ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
‘96’ ಸಿನಿಮಾದಿಂದ ಆದಿತ್ಯ ಹಾಗೂ ಗೌರಿ ಜನಮನ್ನಣೆ ಗಳಿಸಿದರು. ಈ ಸಿನಿಮಾದ ಮೂಲಕ ಇಬ್ಬರಿಗೂ ಫ್ಯಾನ್ ಫಾಲೋಯಿಂಗ್ ಸಿಕ್ಕಿದೆ. ಜಾನು ಮತ್ತು ರಾಮ್ ಪಾತ್ರಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಈ ಚಿತ್ರದ ನಂತರ ಗೌರಿಗೆ ಹೆಚ್ಚಿನ ಅವಕಾಶಗಳು ಬಂದವು. ಗೌರಿ ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಿತ್ಯ ಕೂಡ ನಾಯಕನಾಗಿ ಯಶಸ್ವಿಯಾಗುವ ಪ್ರಯತ್ನದಲ್ಲಿದ್ದಾರೆ. ತೆಲುಗಿನಲ್ಲೂ ಗೌರಿ ಸಿನಿಮಾ ಮಾಡಿದ್ದಾರೆ.
ಈಗ ಆದಿತ್ಯ ಹಾಗೂ ಗೌರಿ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ. ಇವರ ಮದುವೆ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅವರು ರಹಸ್ಯವಾಗಿ ಮದುವೆಯಾದರು ಎಂಬ ವದಂತಿ ಹುಟ್ಟಿದೆ. ಮದುವೆಯ ಫೋಟೋಗಳನ್ನು ಹಂಚಿಕೊಂಡು ಅವರಿಗೆ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ. ಅಸಲಿಗೆ ಗೌರಿ ಮತ್ತು ಆದಿತ್ಯ ಮದುವೆಯಾಗಿಲ್ಲ. ಇವರಿಬ್ಬರು ಜೊತೆಯಾಗಿ ನಟಿಸಿದ ‘ಹಾಟ್ ಸ್ಪಾಟ್’ ಸಿನಿಮಾದ ಫೋಟೋಗಳು ಇವು. ಈ ಚಿತ್ರ ಮಾರ್ಚ್ 29ರಂದು ಬಿಡುಗಡೆಯಾಗಿದೆ.
ಈ ಸಿನಿಮಾದ ಪ್ರಚಾರದ ವೇಳೆ ಸಿನಿಮಾದಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡುತ್ತಿರುವ ಗೌರಿ, ‘ರಾಮ್ ಮತ್ತು ಜಾನು ಈ ವಿಶ್ವದಲ್ಲಿ ಒಂದಾಗಿದ್ದಾರೆ. ಹಾಟ್ ಸ್ಪಾಟ್ ಬಿಡುಗಡೆಯಾಗಿದೆ’ ಎಂದು ಅವರು ಹೇಳಿದ್ದಾರೆ. ರಾಮ್ ಮತ್ತು ಜಾನು ಫೋಟೋಗಳನ್ನು ಫ್ಯಾನ್ಸ್ ಶೇರ್ ಮಾಡಿ ರಿಯಲ್ ಲೈಫ್‌ನಲ್ಲಿ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ. ಕೆಲವರು ‘ಹಾಟ್ ಸ್ಪಾಟ್’ ಸಿನಿಮಾ ಪ್ರಮೋಷನ್ ಅಷ್ಟೇ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಬ್ಯುಸಿ ಆಗಲಿದ್ದಾರೆ ವಿಜಯ್ ಸೇತುಪತಿ, ಹಲವು ಅವಕಾಶಗಳು
ವಿಜಯ್ ಸೇತುಪತಿ ಮತ್ತು ತ್ರಿಷಾ ಅಭಿನಯದ ‘96’ ಚಿತ್ರ 2018ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಯಿತು. ಪ್ರೇಮ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಸಿ. ಪ್ರೇಮ್ ಕುಮಾರ್ ನಿರ್ದೇಶನ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ