ವಿಚ್ಛೇದನದ ನಂತರ ಆಮೀರ್ ಖಾನ್ ಹಾಗೂ ಕಿರಣ್ ರಾವ್ ಸೆಟ್​ನಲ್ಲಿ ಮಾಡಿದ ಡಾನ್ಸ್ ವೈರಲ್

| Updated By: Digi Tech Desk

Updated on: Jul 15, 2021 | 11:54 AM

Aamir Khan Kiran Rao Dance: ಆಮೀರ್ ಖಾನ್ ಹಾಗೂ ಕಿರಣ್ ರಾವ್ ತಮ್ಮ ಬೇರ್ಪಡುವಿಕೆಯ ಘೋಷಣೆಯ ಬೆನ್ನಲ್ಲೇ ಲಾಲ್ ಸಿಂಗ್ ಛಡ್ಡಾ ಚಿತ್ರದ ಸೆಟ್​ನಲ್ಲಿ ಡಾನ್ಸ್ ಮಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಲಡಾಖ್​ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಅಲ್ಲಿನ ಸ್ಥಳೀಯರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆಹಾಕಿರುವುದು ಎಲ್ಲರ ಮನಗೆದ್ದಿದೆ.

ವಿಚ್ಛೇದನದ ನಂತರ ಆಮೀರ್ ಖಾನ್ ಹಾಗೂ ಕಿರಣ್ ರಾವ್ ಸೆಟ್​ನಲ್ಲಿ ಮಾಡಿದ ಡಾನ್ಸ್ ವೈರಲ್
ನೃತ್ಯ ಮಾಡುತ್ತಿರುವ ಆಮೀರ್ ಹಾಗೂ ಕಿರಣ್ ರಾವ್
Follow us on

ಆಮೀರ್ ಖಾನ್(Aamir Khan) ಹಾಗೂ ಅವರ ಮಾಜಿ ಪತ್ನಿ ಕಿರಣ್ ರಾವ್(Kiran Rao) ಜೊತೆಯಲ್ಲಿ ನೃತ್ಯ ಮಾಡಿರುವುದು ಎಲ್ಲರ ಮನಸ್ಸನ್ನು ಗೆದ್ದಿದೆ. ಅವರೀರ್ವರೂ ಜೊತೆಯಾಗಿ ನಿರ್ಮಿಸುತ್ತಿರುವ ‘ಲಾಲ್ ಸಿಂಗ್ ಛಡ್ಡಾ’(Laal Singh Chaddha) ಚಿತ್ರದ ಚಿತ್ರೀಕರಣವು ಪ್ರಸ್ತುತ ಲಡಾಖ್​ನಲ್ಲಿ ನಡೆಯುತ್ತಿದೆ. ಚಿತ್ರೀಕರಣದ ಸೆಟ್​ನಲ್ಲಿ ಅವರೀರ್ವರೂ ಅಲ್ಲಿನ ಸಾಂಪ್ರದಾಯಿಕ ದಿರಿಸನ್ನು ಧರಿಸಿ ನೃತ್ಯ ಮಾಡಿದ್ದು ಅಭಿಮಾನಿಗಳ ಮನಸೂರೆಗೊಂಡಿದೆ. ವಿಡಿಯೊದಲ್ಲಿ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಹಾಗೂ ನಾಗ ಚೈತನ್ಯ ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಫಾರೆಸ್ಟ್ ಗಂಪ್ ಚಿತ್ರದ ಅಧಿಕೃತ ರಿಮೇಕ್ ಆಗಿದೆ.

ಇದೀಗ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಆಮೀರ್ ಖಾನ್ ಹಾಗೂ ಕಿರಣ್ ರಾವ್ ಕೆಂಪು ಬಣ್ಣದ ಕಾಶ್ಮೀರದ ಸಾಂಪ್ರದಾಯಿಕ ದಿರಿಸನ್ನು ಧರಿಸಿದ್ದಾರೆ. ಆಮೀರ್ ಕೆಂಪು ಬಣ್ಣದ ದಿರಿಸಿನ ಜೊತೆಗೆ ನೇರಳೆ ಬಣ್ಣದ ಟೊಪ್ಪಿಯನ್ನು ಧರಿಸಿದ್ದಾರೆ. ಕಿರಣ್ ರಾವ್ ಅವರು ಪಿಂಕ್ ಬಣ್ಣದ ದಿರಿಸನ್ನು ಧರಿಸಿ ಹಸಿರು ಬಣ್ಣದ ಟೊಪ್ಪಿಯನ್ನು ಧರಿಸಿದ್ದಾರೆ. ಡಾನ್ಸ್ ಅನ್ನು ಹೇಳಿಕೊಡುವ ಶಿಕ್ಷಕಿಯೊಬ್ಬರನ್ನು ಈರ್ವರೂ ಅನುಸರಿಸಿ ನೃತ್ಯವನ್ನು ಮಾಡಿದ್ದಾರೆ.

ಅದರ ವಿಡಿಯೊ ಇಲ್ಲಿದೆ:

ಇತ್ತೀಚೆಗಷ್ಟೇ ನಟ ನಾಗಚೈತನ್ಯ ಅವರನ್ನು ಸೆಟ್​ಗೆ ಆಹ್ವಾನಿಸಿ ಆಮೀರ್ ಹಾಗೂ ಕಿರಣ್ ಸೆಲ್ಫಿಗೆ ಭರ್ಜರಿ ಪೋಸ್ ನೀಡಿದ್ದರು. ಅದೂ ಸಹ ಅಭಿಮಾನಿಗಳ ಮನಗೆದ್ದಿತ್ತು. ‘ಲಾಲ್ ಸಿಂಗ್ ಛಡ್ಡಾ’ ಚಿತ್ರವು ಹಾಲಿವುಡ್​ನ ಸಾರ್ವಕಾಲಿಕ ಯಶಸ್ವೀ ಚಿತ್ರಗಳಲ್ಲೊಂದಾದ ‘ಫಾರೆಸ್ಟ್ ಗಂಪ್’ ಚಿತ್ರದ ಅಧಿಕೃತ ರಿಮೇಕ್. ಲಾಲ್ ಸಿಂಗ್ ಛಡ್ಡಾನ ಜೀವನವು ಭಾರತದ ಪ್ರಮುಖ ಘಟನೆಗಳಿಗೆ ಹೇಗೆ ಸಂಬಂಧ ಹೊಂದಿರುತ್ತದೆ ಎಂಬುದನ್ನು ತೆಳು ಹಾಸ್ಯದ ಮುಖಾಂತರ ಚಿತ್ರವು ಪ್ರಸ್ತುತಪಡಿಸಲಿದೆ. ದೇಶದ ಸುಮಾರು ನೂರಕ್ಕೂ ಅಧಿಕ ಪ್ರದೇಶಗಳಲ್ಲಿ ಚಿತ್ರೀಕರಣವಾಗುತ್ತಿರುವ ಈ ಚಿತ್ರದಲ್ಲಿ ದೇಶದ ಬಹಳಷ್ಟು ಸ್ಟಾರ್ ನಟರು ಬಣ್ಣ ಹಚ್ಚುತ್ತಿದ್ದಾರೆ.

ಅತುಲ್ ಕುಲಕರ್ಣಿ ಅವರ ಹತ್ತು ವರ್ಷದ ಪರಿಶ್ರಮದಿಂದಾಗಿ ಚಿತ್ರಕತೆ ಸಿದ್ಧವಾಗಿದೆ. ಚಿತ್ರದ ರಿಮೇಕ್​ ಹಕ್ಕುಗಳನ್ನು ಪಡೆಯಲೂ ಅಷ್ಟೇ ಸಮಯ ವ್ಯಯಿಸಲಾಗಿದೆ ಎಂಬ ಮಾಹಿತಿ ಇದೆ. ಈ ಮೊದಲು 2020ರ ಕ್ರಿಸ್​ಮಸ್​ಗೆ ಚಿತ್ರ ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಕರೊನಾ ಕಾರಣದಿಂದಾಗಿ ಅದು ಸುಮಾರು ಒಂದು ವರ್ಷ ಮುಂದೂಡಲ್ಪಟ್ಟಿದೆ. ಆದ್ದರಿಂದ 2021ರ ಕ್ರಿಸ್​ಮಸ್​ಗೆ ಚಿತ್ರ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಮತ್ತೆ ಒಂದಾಗಿ ನಾಗಚೈತನ್ಯ ಜೊತೆ ಸೆಲ್ಫಿಗೆ ಭರ್ಜರಿ ಪೋಸ್ ನೀಡಿದ ಆಮೀರ್ ಖಾನ್, ಕಿರಣ್ ರಾವ್: ಸಂತಸಕ್ಕೆ ಕಾರಣ ಗೊತ್ತಾ?

ಇದನ್ನೂ ಓದಿ: Indrajit Lankesh Press Meet: ಮೈಸೂರು ಪೊಲೀಸ್ ಸ್ಟೇಶನ್​ಗಳು ಸೆಟಲ್ ಮೆಂಟ್ ಸ್ಟೇಷನ್​ಗಳಾಗಿವೆ; ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

Published On - 11:07 am, Thu, 15 July 21