‘ಪುಷ್ಪ 2’ ಚಿತ್ರದ ಹೈಪ್ ಜೋರಾಗಿದೆ. ಈ ಸಿನಿಮಾಗೆ ವಿಶ್ವಾದ್ಯಂತ ಕ್ರೇಜ್ ಸೃಷ್ಟಿ ಆಗಿದೆ. ಡಿಸೆಂಬರ್ 5ರಂದು ಈ ಸಿನಿಮಾ ವಿಶ್ವ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರಕ್ಕೆ ಅನೇಕ ಸೆಲೆಬ್ರಿಟಿಗಳು ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾಗೆ ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಟಿಕೆಟ್ ಗಿವ್ಅವೇ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ಎಬಿಡಿ ಅವರಿಗೆ ಭಾರತದ ಜೊತೆ ಒಳ್ಳೆಯ ನಂಟಿದೆ. ಇದಕ್ಕೆ ಕಾರಣ ಆಗಿರೋದು ಐಪಿಎಲ್. ಎಬಿಡಿ ಅವರು ಆರ್ಸಿಬಿ ಪರ ಆಡಿದ್ದರು. ಅವರಿಗೆ ಕರ್ನಾಟಕ ಹಾಗೂ ಭಾರತದಲ್ಲಿ ಅಪಾರ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಅವರು 10 ಸಾವಿರ ‘ಪುಷ್ಪ 2’ ಟಿಕೆಟ್ ಗಿವ್ ಅವೇ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ.
ಬೆಟ್ಟಿಂಗ್ ಆ್ಯಪ್ ಒಂದರ ಪ್ರಮೋಷನ್ಗೆ ಈ ಗಿವ್ಅವೇನ ಮಾಡಿದ್ದಾರೆ ಎಬಿಡಿ. ಈ ಆ್ಯಪ್ನಲ್ಲಿ 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಡಿಪೋಸಿಟ್ ಮಾಡಬೇಕು. ಇದರಲ್ಲಿ 100 ರೂಪಾಯಿಗಿಂತ ಹೆಚ್ಚಿನ ಹಣ ಡಿಪೋಸಿಟ್ ಮಾಡಿದ ಮೊದಲ 10 ಸಾವಿರ ಮಂದಿಗೆ ‘ಪುಷ್ಪ 2’ ಟಿಕೆಟ್ ಕೊಡೋದಾಗಿ ಎಬಿಡಿ ಹೇಳಿದ್ದಾರೆ. ಶನಿವಾರ (ಡಿಸೆಂಬರ್ 7) ಈ ಕ್ಯಾಂಪೇನ್ ಪೂರ್ಣಗೊಳ್ಳಲಿದೆ.
ಎಬಿಡಿ ಕೂಡ ‘ಪುಷ್ಪ 2’ ಚಿತ್ರದ ಟಿಕೆಟ್ ಗಿವ್ ಅವೇ ನೀಡಿರೋದು ಅನೇಕರಿಗೆ ಖುಷಿ ಕೊಟ್ಟಿದೆ. ಅವರು ಪ್ರಮೋಟ್ ಮಾಡ್ತಿರೋದು ಬೆಟ್ಟಿಂಗ್ ಆ್ಯಪ್. ಈ ಕಾರಣಕ್ಕೆ ಕೆಲವರು ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಇನ್ನೂ ಕೆಲವರು ‘ಪುಷ್ಪ 2’ ಚಿತ್ರದ ಪ್ರಮೋಷನ್ ಆಯ್ತು ಎಂದು ಸಂತಸ ಹೊರಹಾಕಿದ್ದಾರೆ.
Hey everyone! I have some exciting news for all the movie buffs out there. 🎥💥
The first 10,000 depositors who deposit INR 100 or more on @Wolf7Pay will get tickets to the year’s biggest blockbuster – Pushpa 2! 🔥
Don’t wait – campaign ends this Saturday. Play responsibly and… pic.twitter.com/QRqEOAUGbt
— AB de Villiers (@ABdeVilliers17) December 2, 2024
ಇದನ್ನೂ ಓದಿ: ‘ಪುಷ್ಪ 2’ ಚಿತ್ರಕ್ಕಾಗಿ ಮಗಳನ್ನೇ ದೂರ ಇಟ್ಟ ಅಲ್ಲು ಅರ್ಜುನ್
‘ಪುಷ್ಪ 2’ ಚಿತ್ರ ಡಿಸೆಂಬರ್ 5ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದರು. ಅಲ್ಲು ಅರ್ಜುನ್ ನಟನೆಯ ಈ ಚಿತ್ರಕ್ಕೆ, ಸುಕುಮಾರ್ ನಿರ್ದೇಶನ ಇದೆ. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ನಟಿಸಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.