AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ‘ಅಣ್ಣಾತೆ’ ತಂಡವನ್ನು ಸೇರಿಕೊಂಡ ಮತ್ತೊಬ್ಬ ಸ್ಟಾರ್ ನಟ; ರಜಿನಿ ಎದುರು ತೊಡೆ ತಟ್ಟಲು ರೆಡಿ

Rajinikanth: ‘ಅಣ್ಣಾತೆ’ ತಂಡವನ್ನು ಸೇರಿಕೊಂಡ ಮತ್ತೊಬ್ಬ ಸ್ಟಾರ್ ನಟ; ರಜಿನಿ ಎದುರು ತೊಡೆ ತಟ್ಟಲು ರೆಡಿ

TV9 Web
| Edited By: |

Updated on: Aug 15, 2021 | 10:44 AM

Share

ರಜಿನಿಕಾಂತ್ ನಟನೆಯ ಅಣ್ಣಾತೆ ಚಿತ್ರತಂಡಕ್ಕೆ ನಟ ಅಭಿಮನ್ಯು ಸಿಂಗ್ ಎಂಟ್ರಿಯಾಗಿದೆ. ಈ ಕುರಿತ ವಿಡಿಯೊ ಸ್ಟೋರಿ ಇಲ್ಲಿದೆ.

ಸೂಪರ್​ಸ್ಟಾರ್ ರಜಿನಿಕಾಂತ್ ರಾಜಕೀಯಕ್ಕೆ ಗುಡ್​ಬೈ ಹೇಳಿದ ನಂತರ ಪೂರ್ಣಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಲಕ್ನೋದಲ್ಲಿ ತಲೈವಾ ನಟನೆಯ ‘ಅಣ್ಣಾತೆ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗ ಚಿತ್ರತಂಡದಿಂದ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ಅಣ್ಣಾತೆ ತಂಡಕ್ಕೆ ವಿಲನ್ ಎಂಟ್ರಿಯಾಗಿದೆ. ಟಾಲಿವುಡ್, ಬಾಲಿವುಡ್, ಕಾಲಿವುಡ್​ನಲ್ಲಿ ಸಕ್ರಿಯರಾಗಿರುವ ನಟ ಅಭಿಮನ್ಯು ಸಿಂಗ್ ಅಣ್ಣಾತೆಯಲ್ಲಿ ರಜಿನಿ ಎದುರು ಘರ್ಜಿಸಲಿದ್ದಾರೆ.‘ಅಣ್ಣಾತೆ’ ಚಿತ್ರವನ್ನು ಸನ್ ಪಿಚ್ಚರ್ಸ್ ಬ್ಯಾನರ್​ನಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಕತೆ ಹಾಗೂ ನಿರ್ದೇಶನ ಮಾಡುತ್ತಿರುವವರು ಶಿವ. ಚಿತ್ರಕ್ಕೆ ಡಿ.ಇಮ್ಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ನಯನತಾರಾ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಗೋಪಿಚಂದ್ ಮೊದಲಾದ ಖ್ಯಾತನಾಮರು ನಟಿಸುತ್ತಿದ್ದಾರೆ. ಈಗ ಅವರೊಂದಿಗೆ ಅಭಿಮನ್ಯು ಸೇರಿದ್ದಾರೆ. ಈಗ  ನಿರ್ಧಾರವಾಗಿರುವಂತೆ ಅಣ್ಣಾತೆ ಚಿತ್ರ ನವೆಂಬರ್ 4ರಂದು ಬಿಡುಗಡೆಯಾಗಲಿದೆ. ಆದರೆ ಕೊರೊನಾ ನಿಯಮಾವಳಿಗಳು ಹಾಗೂ ಚಿತ್ರಮಂದಿರದ  ಲಭ್ಯತೆಯ ಕಾರಣದಿಂದ ಕಡೆಯ ಕ್ಷಣದಲ್ಲಿ ನಿರ್ಧಾರ ಬದಲಾದರೂ ಆಗಬಹುದು ಎನ್ನಲಾಗಿದೆ.

ಇದನ್ನೂ ನೋಡಿ:

ಸ್ವಾತಂತ್ರ್ಯ ಪೂರ್ವದ ಕತೆಗೆ ಒಂದಾಗಲಿದ್ದಾರೆ ಕುಮಾರಸ್ವಾಮಿ, ಎಸ್.ನಾರಾಯಣ್; ಹೀರೋ ಆಗಲಿದ್ದಾರಾ ಕಮಲ್ ಹಾಸನ್?

Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ

(Abhimanyu Singh joins the cast of Annathe team)