AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್ ಹಾಸನ್ ಜೊತೆ ಲಿಪ್​ಲಾಕ್, ನಟಿ ಅಭಿರಾಮಿ ಹೇಳಿದ್ದೇನು?

Kamal Haasan: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿ ಕಮಲ್ ಹಾಸನ್ ನಟಿ ಅಭಿರಾಮಿಗೆ ಲಿಪ್​ಲಾಕ್ ಮಾಡಿರುವ ದೃಶ್ಯವಿದೆ. ಈ ದೃಶ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಹನೆ ವ್ಯಕ್ತವಾಗಿದೆ. ಇದೀಗ ನಟಿ ಅಭಿರಾಮಿ, ಕಮಲ್ ಜೊತೆಗಿನ ಲಿಪ್​ಲಾಕ್ ಬಗ್ಗೆ ಮಾತನಾಡಿದ್ದಾರೆ.

ಕಮಲ್ ಹಾಸನ್ ಜೊತೆ ಲಿಪ್​ಲಾಕ್, ನಟಿ ಅಭಿರಾಮಿ ಹೇಳಿದ್ದೇನು?
Kamal Haasan
ಮಂಜುನಾಥ ಸಿ.
|

Updated on: May 29, 2025 | 12:31 PM

Share

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಕಮಲ್ ಹಾಸನ್ ಹಾಗೂ ಚಿತ್ರತಂಡ ತೊಡಗಿಕೊಂಡಿದೆ. ಸಿನಿಮಾದ ಪ್ರಚಾರ ಆರಂಭಿಸಿದಾಗಿನಿಂದಲೂ ಚಿತ್ರತಂಡದ ಅದೃಷ್ಟವೇ ಕೈಕೊಟ್ಟಂತಿದೆ. ಒಂದರ ಹಿಂದೊಂದು ವಿವಾದಗಳು ಸಿನಿಮಾದ ಬೆನ್ನು ಬಿದ್ದಿವೆ. ಕಮಲ್ ಹಾಸನ್ ಕನ್ನಡದ ಬಗ್ಗೆ ಆಡಿದ ಮಾತು ತೀವ್ರ ವಿವಾದ ಎಬ್ಬಿಸಿವೆ. ಅದಕ್ಕೂ ಮುನ್ನ, ಟ್ರೈಲರ್​ನಲ್ಲಿ ಕಮಲ್ ಹಾಸನ್ ಹಾಗೂ ನಟಿ ಅಭಿರಾಮಿ ನಡುವಿನ ಲಿಪ್​ಲಾಕ್ ದೃಶ್ಯ ವಿವಾದ ಎಬ್ಬಿಸಿತ್ತು. 70ರ ವಯಸ್ಸಿನ ಕಮಲ್, ತನಗಿಂತಲೂ ಬಹಳ ಕಿರಿಯ ನಟಿಯೊಟ್ಟಿಗೆ ಲಿಪ್​ಲಾಕ್ ಮಾಡಿರುವ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.

‘ಥಗ್ ಲೈಫ್’ ಸಿನಿಮಾದ ಟ್ರೈಲರ್​ನಲ್ಲಿ ನಟಿ ಅಭಿರಾಮಿ ಹಾಗೂ ಕಮಲ್ ನಡುವೆ ಚುಂಬನ ದೃಶ್ಯದ ಒಂದು ದೃಶ್ಯವಿದೆ. ಟ್ರೈಲರ್​ನಲ್ಲಿ ಸೆಕೆಂಡ್​ಗೂ ಮುಂಚೆಯೇ ದೃಶ್ಯ ಕಟ್ ಆಗುತ್ತದೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಎದ್ದಿದೆ. ಇದೀಗ ನಟಿ ಅಭಿರಾಮಿ, ಕಮಲ್ ಜೊತೆಗಿನ ಚುಂಬನದ ದೃಶ್ಯದ ಬಗ್ಗೆ ಮಾತನಾಡಿದ್ದಾರೆ.

ನನ್ನ ಹಾಗೂ ಕಮಲ್ ನಡುವೆ ಮೂರು ಸೆಕೆಂಡ್​ಗಳ ಮುತ್ತಿನ ದೃಶ್ಯ ಸಿನಿಮಾದಲ್ಲಿದೆ. ಟ್ರೈಲರ್​ನಲ್ಲಿ ಒಂದು ಸೆಕೆಂಡ್ ಸಹ ತೋರಿಸಲಾಗಿಲ್ಲ. ಟ್ರೈಲರ್​ನಲ್ಲಿ ಕೇವಲ ಅದೊಂದು ಚುಂಬನದ ದೃಶ್ಯವಾಗಿ ಮಾತ್ರವೇ ಕಾಣುತ್ತಿದೆ. ಆದರೆ ಆ ದೃಶ್ಯಕ್ಕೆ ಕಾರಣ ಏನು? ಅದರ ಹಿನ್ನೆಲೆ ಏನು ಎಂಬುದು ಸಿನಿಮಾ ನೋಡಿದ ಬಳಿಕವೇ ತಿಳಿಯಲಿದೆ. ಸಿನಿಮಾ ನೋಡಿದವರಿಗೆ ಆ ಚುಂಬನದ ದೃಶ್ಯ ಏಕಿದೆ ಎಂಬುದು ತಿಳಿಯಲಿದೆ. ಸಿನಿಮಾ ನೋಡಿದವರಿಗೆ ಆ ದೃಶ್ಯದ ಅವಶ್ಯಕತೆ ಖಂಡಿತ ಇತ್ತು ಅನಿಸುತ್ತದೆ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ: ವಿವಾದದ ಬಗ್ಗೆ ಕಮಲ್ ಹಾಸನ್ ಸ್ಪಷ್ಟನೆ

ಚುಂಬನದ ದೃಶ್ಯ ವಿವಾದ ಎಬ್ಬಿಸಿರುವ ಬಗ್ಗೆ ಮಾತನಾಡಿರುವ ನಟಿ, ‘ಜನರ ಅಭಿಪ್ರಾಯಗಳನ್ನು ಗಮನಿಸದೇ ಇರುವುದು ಅಸಾಧ್ಯ. ಮಾರ್ಕೆಟಿಂಗ್ ಟೀಮ್​​ನವರು ಆ ದೃಶ್ಯವನ್ನು ಟ್ರೈಲರ್​ನಲ್ಲಿ ಮಾರುಕಟ್ಟೆ ಕಾರಣಕ್ಕೆ ಬಳಸಿದಂತಿದೆ. ಈಗ ಟ್ರೈಲರ್ ನೋಡಿದವರಿಗೆ ಅದೊಂದು ದೃಶ್ಯವೇ ಹೈಲೆಟ್ ಆಗಿ ಕಾಣುತ್ತಿದೆ. ಅಲ್ಲದೆ ಒಬ್ಬ ನಟಿಯಾಗಿ ನಿರ್ದೇಶಕ ಮಣಿರತ್ನಂ ಅವರ ದೂರದರ್ಶಿತ್ವವನ್ನು ಪ್ರಶ್ನೆ ಮಾಡುವುದಾಗಲಿ ಅಥವಾ ಅವರ ಆಯ್ಕೆಯನ್ನು ಪ್ರಶ್ನೆ ಮಾಡುವುದಾಗಲಿ ನನ್ನ ಕೆಲಸ ಅಲ್ಲ’ ಎಂದಿದ್ದಾರೆ.

ಅಭಿರಾಮಿ, ದಕ್ಷಿಣ ಭಾರತದ ಬಲು ಜನಪ್ರಿಯ ನಟಿ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ‘ಲಾಲಿ ಹಾಡು’, ‘ಶ್ರೀರಾಮ್’, ‘ರಕ್ತ ಕಣ್ಣೀರು’, ‘ಚೌಕ’, ‘ದಶರಥ’, ‘ಕೋಟಿಗೊಬ್ಬ 3’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅಂದಹಾಗೆ ಕಮಲ್ ಹಾಸನ್ ಜೊತೆಗೆ ಅಭಿರಾಮಿಯ ಲಿಪ್​ಲಾಕ್ ಇದು ಮೊದಲೇನೂ ಅಲ್ಲ. ಈ ಮುಂಚೆ ಕಮಲ್ ನಟಿಸಿ ನಿರ್ದೇಶನ ಮಾಡಿದ್ದ ‘ವಿರುಮಾಂಡಿ’ ಸಿನಿಮಾನಲ್ಲಿಯೂ ಲಿಪ್​ಲಾಕ್ ದೃಶ್ಯಗಳಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ