RRR ಚಿತ್ರದ ಬಿಡುಗಡೆಯ ಬಗ್ಗೆ ಕೇಳಿಬರುತ್ತಿದೆ ಅಚ್ಚರಿಯ ಸುದ್ದಿ; ಏನದು? ಇಲ್ಲಿದೆ ಮಾಹಿತಿ

| Updated By: shivaprasad.hs

Updated on: Oct 01, 2021 | 6:01 PM

ರಾಜಮೌಳಿ ನಿರ್ದೇಶನದ, ಜ್ಯೂನಿಯರ್ ಎನ್​ಟಿಆರ್ ಹಾಗೂ ರಾಮ್ ಚರಣ್ ನಟಿಸುತ್ತಿರುವ ‘ಆರ್​ಆರ್​ಆರ್​’ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಟಾಲಿವುಡ್​ ಅಂಗಳದಿಂದ ಹೊಸ ಸುದ್ದಿಯೊಂದು ಕೇಳಿಬಂದಿದ್ದು, ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಏನಿದು ಸುದ್ದಿ? ಇಲ್ಲಿದೆ ಮಾಹಿತಿ.

RRR ಚಿತ್ರದ ಬಿಡುಗಡೆಯ ಬಗ್ಗೆ ಕೇಳಿಬರುತ್ತಿದೆ ಅಚ್ಚರಿಯ ಸುದ್ದಿ; ಏನದು? ಇಲ್ಲಿದೆ ಮಾಹಿತಿ
ರಾಮ್​ ಚರಣ್​, ಜ್ಯೂ. ಎನ್​ಟಿಆರ್​
Follow us on

ಪ್ರಸ್ತುತ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸದ್ದು ಜೋರಾಗಿದೆ. ಸ್ಯಾಂಡಲ್​ವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರಗಳು ತಮ್ಮ ಕಂಟೆಂಟ್ ಮುಖಾಂತರ ಇಡೀ ಭಾರತವನ್ನು ತಲುಪುತ್ತಿವೆ. ಜೊತೆಗೆ ಇದಕ್ಕೆ ಪ್ರೇಕ್ಷಕ ವರ್ಗವೂ ದೊಡ್ಡದಿದೆ. ಇಂತಹ ಸಿನಿಮಾಗಳ ಪಟ್ಟಿಯಲ್ಲಿ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಚಿತ್ರವೂ ಇದೆ. ಆದರೆ ಕೊರೊನಾ ಕಾರಣದಿಂದ ಚಿತ್ರಕ್ಕೆ ಹಿನ್ನೆಡೆಯಾಗಿತ್ತು. ಇತ್ತೀಚೆಗೆ ಅಕ್ಟೋಬರ್​​ನಲ್ಲಿ ಚಿತ್ರದ ಬಿಡುಗಡೆ ಎಂದು ಘೋಷಿಸಿದ್ದನ್ನು ಅನಿರ್ದಿಷ್ಟಾವಧಿಗೆ ಚಿತ್ರತಂಡ ಮುಂದೂಡಿತ್ತು. ಇದೀಗ ಟಾಲಿವುಡ್ ಅಂಗಳದಿಂದ ಅಚ್ಚರಿಯ ಸುದ್ದಿಯೊಂದು ಕೇಳಿಬಂದಿದೆ.

ಚಿತ್ರವು ಆರಂಭದಲ್ಲಿ ದಸರಾ ಹಬ್ಬಕ್ಕೆ ಉಡುಗೊರೆಯಾಗಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಬಂದಿತ್ತು. ನಂತರ ಅದನ್ನು ಚಿತ್ರ ತಂಡ ಮುಂದೂಡಲು ನಿರ್ಧರಿಸಿತು. ಕೆಲವು ದಿನಗಳ ನಂತರ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಕೇಳಿ ಬಂತು. ಆದರೆ ಅದಕ್ಕೆ ಸ್ಪಷ್ಟನೆ ಸಿಕ್ಕುವ ಮುನ್ನವೇ ಹೊಸ ಸುದ್ದಿ ಬಂದಿದೆ. ಚಿತ್ರವು ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಟಾಲಿವುಡ್​ನಿಂದ ಜೋರಾಗಿಯೇ ಕೇಳಿಬರುತ್ತಿದೆ.

ಆದರೆ ಈ ಹಿಂದೆ ‘ಆರ್​ಆರ್​ಆರ್​’ ಚಿತ್ರತಂಡ ಘೋಷಿಸಿದಂತೆ ಬಿಡುಗಡೆಯ ಮುಂದಿನ ದಿನಾಂಕ ಇನ್ನೂ ಅಧಿಕೃತವಾಗಿಲ್ಲ. ಈ ಚಿತ್ರವು ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂಬ ವಾದವನ್ನು ಅಭಿಮಾನಿಗಳಲ್ಲೇ ಹಲವರು ಒಪ್ಪಲು ತಯಾರಿಲ್ಲ. ಇದಕ್ಕೆ ಕಾರಣ ಭೀಮಲಾ ನಾಯಕ್, ಸರ್ಕಾರು ವಾರಿ ಪಾಟ, ರಾಧೇಶ್ಯಾಮ್, ಆಚಾರ್ಯ, ಅಖಂಡ ಮೊದಲಾದ ಚಿತ್ರಗಳು ಈಗಾಗಲೇ ಸಂಕ್ರಾಂತಿಯನ್ನು ಗುರಿಯಾಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗುತ್ತಿವೆ. ಈ ಎಲ್ಲಾ ಬಿಗ್ ಬಜೆಟ್ ಸಿನಿಮಾಗಳ ನಡುವೆ ‘ಆರ್‌ಆರ್‌ಆರ್’ ಕೂಡ ಬರುತ್ತದೆಯೇ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಆದ್ದರಿಂದಲೇ ಚಿತ್ರವು ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗಾಗಲೇ ಚಿತ್ರದ ಟೀಸರ್‌ಗಳು ಬಿಡುಗಡೆಯಾಗಿದ್ದು, ದೋಸ್ತಿ ಹಾಡಿಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಚಿತ್ರೀಕರಣ ಆರಂಭವಾಗಿ ಸುಮಾರು ಮೂರು ವರ್ಷಗಳಾಗಿವೆ. ಇಷ್ಟು ವರ್ಷದಿಂದ ಜ್ಯೂನಿಯರ್ ಎನ್​ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಈಗ ಕೇಳಿ ಬರುತ್ತಿರುವ ಸಂಕ್ರಾಂತಿಗೆ ಬಿಡುಗಡೆಯಾಗುವ ಸುದ್ದಿ ನಿಜವೇ ಆಗಿದ್ದಲ್ಲಿ, ಹೊಸ ವರ್ಷದ ಆರಂಭದಲ್ಲಿ ತೆಲುಗಿನಲ್ಲಿ ಸಾಲು ಸಾಲಾಗಿ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗಲಿವೆ. ಆದ್ದರಿಂದಲೇ ಅಭಿಮಾನಿಗಳು ಚಿತ್ರತಂಡದ ಅಧಿಕೃತ ಘೋಷಣೆಗೆ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:

ನ.2ರಂದು ‘ಜೈ ಭೀಮ್​’ ಸಿನಿಮಾ ರಿಲೀಸ್​; ಮತ್ತೆ ಓಟಿಟಿ ಮೇಲೆ ಭರವಸೆ ಇಟ್ಟ ಸೂರ್ಯ

‘ದುಡ್ಡಿನಿಂದ ಸೌಂದರ್ಯ ಪಡೆಯಬಹುದು’: ಮೌನಿ ರಾಯ್​ ಫೋಟೋ ತೋರಿಸಿ ಸಾಕ್ಷಿ ಸಮೇತ ವಿವರಿಸಿದ ಕಮಾಲ್ ಖಾನ್