ಹೊಸ ಚಿತ್ರಕ್ಕಾಗಿ ನಟ ಚಿರಂಜೀವಿ ಭರ್ಜರಿ ವರ್ಕೌಟ್; ವಿಡಿಯೋ ವೈರಲ್

2023ರಲ್ಲಿ ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಚಿತ್ರ ರಿಲೀಸ್ ಆಯಿತು. ಆದರೆ, ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬರಲಿಲ್ಲ. ಈ ಸಿನಿಮಾ ಸಾಧಾರಣ ಗಳಿಕೆ ಮಾಡಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಈಗ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಕ್ಕಾಗಿ ವರ್ಕೌಟ್ ಮಾಡುತ್ತಿದ್ದಾರೆ.

ಹೊಸ ಚಿತ್ರಕ್ಕಾಗಿ ನಟ ಚಿರಂಜೀವಿ ಭರ್ಜರಿ ವರ್ಕೌಟ್; ವಿಡಿಯೋ ವೈರಲ್
ಚಿರಂಜೀವಿ
Follow us
ರಾಜೇಶ್ ದುಗ್ಗುಮನೆ
|

Updated on:Feb 01, 2024 | 11:22 AM

ನಟ ಚಿರಂಜೀವಿ (Chiranjeevi) ಅವರಿಗೆ ಈಗ 68 ವರ್ಷ ವಯಸ್ಸು. ಅವರು ಈಗಲೂ ಆ್ಯಕ್ಷನ್ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಚಿರಂಜೀವಿ ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ಅವರು ವರ್ಕೌಟ್ ಮಾಡಲು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಈಗ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಭರ್ಜರಿ ವರ್ಕೌಟ್ ಮಾಡುತ್ತಿರುವುದು ಕಂಡು ಬಂದಿದೆ. ಅವರು ಇಷ್ಟೆಲ್ಲ ರೆಡಿ ಆಗುತ್ತಿರುವುದು ‘ವಿಶ್ವಂಬರ’ ಚಿತ್ರಕ್ಕಾಗಿ. ಈ ಫ್ಯಾಂಟಸಿ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ.

2023ರಲ್ಲಿ ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾ ರಿಲೀಸ್ ಆಯಿತು. ಆದರೆ, ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬರಲಿಲ್ಲ. ಈ ಚಿತ್ರ ಸಾಧಾರಣ ಗಳಿಕೆ ಮಾಡಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಸೋಲನ್ನು ಮರೆತು ಚಿರಂಜೀವಿ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ವಸಿಷ್ಠ ನಿರ್ದೇಶನದ ಈ ಚಿತ್ರ ಚಿರಂಜೀವಿ ಅವರ 156ನೇ ಸಿನಿಮಾ ಅನ್ನೋದು ವಿಶೇಷ.

ಚಿರಂಜೀವಿ ಮಾಡಿರೋ ಟ್ವೀಟ್​..

ಫ್ಯಾಂಟಸಿ ಸಿನಿಮಾ ಆಗಿರುವುದರಿಂದ ಪಾತ್ರ ಕೂಡ ಬೇರೆ ರೀತಿಯಲ್ಲೇ ಇರಲಿದೆ. ಅವರು ಹೊಸ ಅವತಾರ ತಾಳಲು ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಚಿರಂಜೀವಿ ಅವರು ಸಖತ್ ವರ್ಕೌಟ್ ಮಾಡುತ್ತಿದ್ದಾರೆ.  ನವೆಂಬರ್ 2023ರಲ್ಲಿ ಈ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದ ಬಜೆಟ್ 150 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿಚಾರವನ್ನು ತಂಡ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ರಾಮನಾಗಿ ಮಹೇಶ್​ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್​’ ಪ್ಲ್ಯಾನ್​

ಇದಲ್ಲದೆ, ಬೋಯಪತಿ ಶ್ರೀನು ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲೂ ಚಿರಂಜೀವಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆಯೂ ನಿರೀಕ್ಷೆ ಮೂಡಿದೆ. ಇತ್ತೀಚೆಗೆ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ ಅವಾರ್ಡ್ ಸಿಕ್ಕಿದೆ. ಇದರಿಂದ ಅವರು ಖುಷಿಯಾಗಿದ್ದಾರೆ. ಸಿನಿಮಾ ರಂಗಕ್ಕೆ ಚಿರಂಜೀವಿ ನೀಡಿದ ಕೊಡುಗೆ ಆಧರಿಸಿ ಈ ಅವಾರ್ಡ್ ನೀಡಲಾಗಿದೆ. ಇದನ್ನು ಅವರ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:05 am, Thu, 1 February 24