AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanush: ಭಿಕ್ಷುಕನಂತೆ ಬೀದಿ ಬೀದಿ ಸುತ್ತಿದ ಖ್ಯಾತ ನಟ; ಹಿಡಿಶಾಪ ಹಾಕಿದ ಜನರು

ಧನುಷ್ ಅವರು ತಿರುಪತಿಯಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಇದ್ದರು. ಹೀಗಾಗಿ ಪೊಲೀಸರು ದೇವಸ್ಥಾನಕ್ಕೆ ತೆರಳುವ ವಾಹನಗಳನ್ನು ಬೇರೆ ಕಡೆಗೆ ತಿರುಗಿಸುವಂತೆ ಹೇಳುತ್ತಿದ್ದರು. ಇದರಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಜನರು ಹಿಡಿಶಾಪ ಹಾಕಿದ್ದಾರೆ.

Dhanush: ಭಿಕ್ಷುಕನಂತೆ ಬೀದಿ ಬೀದಿ ಸುತ್ತಿದ ಖ್ಯಾತ ನಟ; ಹಿಡಿಶಾಪ ಹಾಕಿದ ಜನರು
ಧನುಷ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 01, 2024 | 12:52 PM

ದಕ್ಷಿಣದ ಖ್ಯಾತ ನಟ ಧನುಷ್ (Dhanush) ಪ್ರಸ್ತುತ ತಿರುಪತಿಯಲ್ಲಿ ತಮ್ಮ ಮುಂಬರುವ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಶೂಟಿಂಗ್ ಸಮಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿರ್ದೇಶಕ ಶೇಖರ್ ಕಮ್ಮುಲ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘D 51’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಚಿತ್ರೀಕರಣಕ್ಕಾಗಿ ಧನುಷ್ ತಿರುಪತಿಯಲ್ಲಿದ್ದರು. ಅವರ ಅವತಾರ ನೋಡಿ ಅವರನ್ನು ಯಾರೂ ಗುರುತಿಸಲು ಸಾಧ್ಯವಾಗಲಿಲ್ಲ. ಧರಿಸಿರುವ ಹಳೆಯ ಬಟ್ಟೆ, ಅತಿಯಾಗಿ ಬೆಳೆದ ಗಡ್ಡದಲ್ಲಿ ಧನುಷ್ ಅವರನ್ನು ಗುರುತಿಸುವುದು ಕಷ್ಟವೇ ಆಗಿತ್ತು. ಶೂಟಿಂಗ್ ಇದ್ದ ಕಾರಣ ದೇವಸ್ಥಾನಕ್ಕೆ ದರ್ಶನಕ್ಕೆ ಬರುವ ಭಕ್ತರು ಪರದಾಡಿದ್ದಾರೆ. ಇದರಿಂದ ಪೊಲೀಸರು ಶೂಟಿಂಗ್​ಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಿದ್ದಾರೆ.

ಮಂಗಳವಾರ ಧನುಷ್ ಅವರು ಅಲಿಪಿರಿ ಘಾಟ್‌ನಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಇದ್ದರು. ಹೀಗಾಗಿ ಪೊಲೀಸರು ಹಾಗೂ ಬೌನ್ಸರ್‌ಗಳು ದೇವಸ್ಥಾನಕ್ಕೆ ತೆರಳುವ ವಾಹನಗಳನ್ನು ಬೇರೆ ಕಡೆಗೆ ತಿರುಗಿಸುವಂತೆ ಹೇಳುತ್ತಿದ್ದರು. ಇದರಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಂತಹ ಜಾಗದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ಏಕೆ ಎಂದು ದರ್ಶನಕ್ಕೆ ಬಂದಿದ್ದ ಕೆಲ ಭಕ್ತರು ಪೊಲೀಸರನ್ನು ಪ್ರಶ್ನಿಸಿದರು. ಕೊನೆಗೆ ಭಕ್ತರೊಬ್ಬರು ಪೊಲೀಸರಿಗೆ ದೂರು ನೀಡಿದ ಬಳಿಕ ಶೂಟಿಂಗ್ ನಿಲ್ಲಿಸಲಾಯಿತು.

ತಿರುಪತಿಯ ತಪ್ಪಲಿನಲ್ಲಿ ಶೂಟಿಂಗ್ ನಡೆಯುತ್ತಿದ್ದರಿಂದ ಬಸ್‌ಗಳು ಹಾಗೂ ಇತರೆ ವಾಹನಗಳ ಮಾರ್ಗವನ್ನು ಬದಲಿಸಲಾಗಿದೆ. ಅಷ್ಟೇ ಅಲ್ಲ, ದೇವಸ್ಥಾನಕ್ಕೆ ಬಂದಿದ್ದ ಕೆಲ ಭಕ್ತರನ್ನು ಚಿತ್ರತಂಡದವರು ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದರಿಂದ ಭಕ್ತರು ಆಕ್ರೋಶಗೊಂಡಿದ್ದಾರೆ.

ಚಿತ್ರೀಕರಣವನ್ನು ಪೊಲೀಸರು ತಡೆದರೂ ತಂಡ ತಾವು ಬಯಸಿದದ್ದನ್ನು ಶೂಟ್​ ಮಾಡಲು ಯಶಸ್ವಿಯಾಗಿದೆ. ಶೂಟಿಂಗ್ ಮುಗಿಸಿ ಧನುಷ್ ಕೂಡ ಬುಧವಾರ (ಜನವರಿ 31) ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಈ ವೇಳೆ ಅವರು ಸಾಂಪ್ರದಾಯಿಕ ಬಿಳಿ ಪಂಚೆ ಮತ್ತು ಶಾಲು ಧರಿಸಿದ್ದರು. ಧನುಷ್ ಅವರ ಚಿತ್ರದಲ್ಲಿ ನಾಗಾರ್ಜುನ ಮತ್ತು ಶೇಖರ್ ಕೂಡ ನಟಿಸಿದ್ದಾರೆ. ಈ ಮೂವರು ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದರಿಂದ ಫ್ಯಾನ್ಸ್ ಖುಷಿಯಾಗಿದ್ದಾರೆ.

ಮಾಫಿಯಾ ಕಥೆಯನ್ನು ಸಿನಿಮಾ ಹೊಂದಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ‘ವಾರಿಸು’ ಸಿನಿಮಾ ಗೆಲುವಿನ ಬಳಿಕ ಅವರು ಮತ್ತೊಮ್ಮೆ ತಮಿಳು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಮೂಡಿದೆ. ಧನುಷ್ ತಮ್ಮ ಪವರ್ ಫುಲ್ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಅವರ ಹೊಸ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

ಧನುಷ್ ಬಗ್ಗೆ ವೈರಲ್ ಆದ ವಿಡಿಯೋ

ಇದನ್ನೂ ಓದಿ:  ಧನುಷ್​ ಪುತ್ರನನ್ನು ಹುಡುಕಿಕೊಂಡು ಬಂದ ಪೊಲೀಸರು; ರಜನಿ ಮೊಮ್ಮಗ ಯಾತ್ರಾ ಮಾಡಿದ ತಪ್ಪು ಏನು?

ಧನುಷ್ ಎರಡು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಾಯಕನಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಅವರು ನಿರ್ಮಾಪಕ, ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ ಕೂಡ. ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 49 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:00 pm, Thu, 1 February 24