AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನುಷ್​ ಪುತ್ರನನ್ನು ಹುಡುಕಿಕೊಂಡು ಬಂದ ಪೊಲೀಸರು; ರಜನಿ ಮೊಮ್ಮಗ ಯಾತ್ರಾ ಮಾಡಿದ ತಪ್ಪು ಏನು?

ವೈರಲ್ ವಿಡಿಯೋದಲ್ಲಿ ಯಾತ್ರಾ ಅವರು ಮಾಸ್ಕ್​ ಧರಿಸಿದ್ದರು. ಹಾಗಾಗಿ ಅವರ ಗುರುತು ಪತ್ತೆಗಾಗಿ ಪೊಲೀಸರು ಐಶ್ವರ್ಯಾ ರಜನಿಕಾಂತ್​ ನಿವಾಸಕ್ಕೆ ಬಂದಿದ್ದಾರೆ. ‘ಹೌದು, ಇದು ನಮ್ಮ ಮಗ’ ಎಂದು ಐಶ್ವರ್ಯಾ ಒಪ್ಪಿಕೊಂಡಿದ್ದಾರೆ. ಆ ಬಳಿಕ ಪೊಲೀಸರು ದಂಡ ಹಾಕಿದ್ದಾರೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಧನುಷ್​ ಪುತ್ರನನ್ನು ಹುಡುಕಿಕೊಂಡು ಬಂದ ಪೊಲೀಸರು; ರಜನಿ ಮೊಮ್ಮಗ ಯಾತ್ರಾ ಮಾಡಿದ ತಪ್ಪು ಏನು?
ಧನುಶ್​, ಯಾತ್ರಾ ರಾಜ
ಮದನ್​ ಕುಮಾರ್​
|

Updated on: Nov 20, 2023 | 12:53 PM

Share

ಮಾಜಿ ದಂಪತಿಯಾದ ಧನುಷ್​​ (Dhanush) ಮತ್ತು ಐಶ್ವರ್ಯಾ ರಜನಿಕಾಂತ್​ (Aishwarya Rajinikanth) ಅವರ ಪುತ್ರ ಯಾತ್ರಾ ರಾಜ ಈಗ ಸುದ್ದಿಯಲ್ಲಿದ್ದಾರೆ. ಅವರನ್ನು ಹುಡುಕಿಕೊಂಡು ಪೊಲೀಸರು ಬಂದಿದ್ದಾರೆ. ಯಾತ್ರಾ ಕಾನೂನು ಉಲ್ಲಂಘನೆ ಮಾಡಿರುವುದು ಖಚಿತವಾದ ಬಳಿಕ ಅವರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟಕ್ಕೂ ಯಾತ್ರಾ ರಾಜ (Yatra Raja) ಮಾಡಿದ ತಪ್ಪು ಏನು? ಲೈಸೆನ್ಸ್​ ಇಲ್ಲದೇ ಬೈಕ್​ ಓಡಿಸಿರುವುದು. ಹೌದು, ಯಾತ್ರಾಗೆ ಈಗಿನ್ನೂ 17 ವರ್ಷ ವಯಸ್ಸು. ದ್ವಿಚಕ್ರ ವಾಹನ ಚಾಲನೆಗೆ ಪರವಾನಗಿ ಪಡೆಯಲು 18 ವರ್ಷ ವಯಸ್ಸು ಆಗಿರಬೇಕು. ನಿಯಮ ಉಲ್ಲಂಘನೆ ಮಾಡಿರುವ ಯಾತ್ರಾಗೆ ಪೊಲೀಸರು ದಂಡ ಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ವಿವಾದ ಶುರುವಾಗಿದ್ದು ಹೇಗೆ?

ಸೆಲೆಬ್ರಿಟಿಗಳ ಮಕ್ಕಳಿಗೆ ಐಷಾರಾಮಿ ಬೈಕ್​ ಮತ್ತು ಕಾರಿನ ಬಗ್ಗೆ ಆಸಕ್ತಿ ಇರುತ್ತದೆ. ಅದೇ ರೀತಿ ಧನುಷ್​​ ಪುತ್ರ ಯಾತ್ರಾ ಕೂಡ ಬೈಕ್​ ಬಗ್ಗೆ ಕ್ರೇಜ್​ ಹೊಂದಿದ್ದಾರೆ. ಇತ್ತೀಚೆಗೆ ಅವರು ಸೂಪರ್​ಬೈಕ್​ ಓಡಿಸಿದ ವಿಡಿಯೋ ವೈರಲ್​ ಆಗಿತ್ತು. ಅವರಿಗೆ ಇನ್ನೋರ್ವ ವ್ಯಕ್ತಿ ಬೈಕ್​ ಕಲಿಸಿಕೊಡುತ್ತಿದ್ದರು. ಈ ಸಂದರ್ಭದಲ್ಲಿ ಯಾತ್ರಾ ಹೆಲ್ಮೆಟ್​ ಧರಿಸಿರಲಿಲ್ಲ. ವೈರಲ್​ ಆದ ಈ ವಿಡಿಯೋ ನೋಡಿದ ಪೊಲೀಸರು ವಿಚಾರಣೆ ಕೈಗೊಂಡರು.

ಇದನ್ನೂ ಓದಿ: ಇಳೆಯರಾಜ ಬಯೋಪಿಕ್​ನಲ್ಲಿ ಧನುಷ್​ ನಟನೆ; ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ

ಮನೆಗೆ ಬಂದ ಪೊಲೀಸರು:

ವೈರಲ್ ವಿಡಿಯೋದಲ್ಲಿ ಯಾತ್ರಾ ಅವರು ಮಾಸ್ಕ್​ ಧರಿಸಿದ್ದರು. ಹಾಗಾಗಿ ಅವರ ಗುರುತು ಪತ್ತೆಗಾಗಿ ಪೊಲೀಸರು ಐಶ್ವರ್ಯಾ ರಜನಿಕಾಂತ್​ ನಿವಾಸಕ್ಕೆ ಬಂದಿದ್ದಾರೆ. ‘ಹೌದು, ಇದು ನಮ್ಮ ಮಗ’ ಎಂದು ಐಶ್ವರ್ಯಾ ಒಪ್ಪಿಕೊಂಡಿದ್ದಾರೆ. ಆ ಬಳಿಕ ಪೊಲೀಸರು ದಂಡ ಹಾಕಿದ್ದಾರೆ ಎಂದು ವರದಿ ಆಗಿದೆ. ಸೆಲೆಬ್ರಿಟಿಗಳ ಮಕ್ಕಳು ತಪ್ಪು ಮಾಡಿದಾಗ ಪೊಲೀಸರು ಸುಮ್ಮನೆ ಬಿಡಬಾರದು ಎಂದು ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ ಕೇಳಿಬಂದಿತ್ತು. ತಕ್ಷಣಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ತಮಿಳು ಸ್ಟಾರ್ ನಟ ಧನುಶ್​ಗೆ ನಿರ್ಮಾಪಕರ ಸಂಘದಿಂದ ನೊಟೀಸ್: ಬ್ಯಾನ್ ಮಾಡುವ ಎಚ್ಚರಿಕೆ

ರಜನಿಕಾಂತ್​ ಪುತ್ರಿ ಐಶ್ವರ್ಯಾ ಜೊತೆ ಧನುಷ್​​ ಅವರು 2004ರಲ್ಲಿ ಮದುವೆ ಆಗಿದ್ದರು. ಇವರಿಗೆ ಯಾತ್ರಾ ರಾಜ ಮತ್ತು ಲಿಂಗ ರಾಜ ಎಂಬಿಬ್ಬರು ಗಂಡು ಮಕ್ಕಳು ಜನಿಸಿದರು. 2022ರಲ್ಲಿ ಐಶ್ವರ್ಯಾ ಹಾಗೂ ಧನುಷ್​​ ವಿಚ್ಛೇದನ ಪಡೆದರು. ಇಬ್ಬರೂ ಕೂಡ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕಿಯಾಗಿ ಐಶ್ವರ್ಯಾ ರಜನಿಕಾಂತ್​ ಗುರುತಿಸಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಲಾಲ್​ ಸಲಾಂ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.