ತಮಿಳು ಸ್ಟಾರ್ ನಟ ಧನುಶ್​ಗೆ ನಿರ್ಮಾಪಕರ ಸಂಘದಿಂದ ನೊಟೀಸ್: ಬ್ಯಾನ್ ಮಾಡುವ ಎಚ್ಚರಿಕೆ

Dhanush: ನಟ ಧನುಶ್​ಗೆ ತಮಿಳು ನಿರ್ಮಾಪಕರ ಸಂಘ ನೊಟೀಸ್ ನೀಡಿದ್ದು ನಿಷೇಧದ ಎಚ್ಚರಿಕೆ ನೀಡಿದೆ ಎನ್ನಲಾಗುತ್ತಿದೆ. ಕಾರಣವೇನು?

ತಮಿಳು ಸ್ಟಾರ್ ನಟ ಧನುಶ್​ಗೆ ನಿರ್ಮಾಪಕರ ಸಂಘದಿಂದ ನೊಟೀಸ್: ಬ್ಯಾನ್ ಮಾಡುವ ಎಚ್ಚರಿಕೆ
ಧನುಶ್
Follow us
ಮಂಜುನಾಥ ಸಿ.
|

Updated on: Jul 02, 2023 | 3:36 PM

ನಟ ಧನುಶ್ (Dhanush), ದಕ್ಷಿಣ ಭಾರತದ ಪ್ರತಿಭಾವಂತ ನಟ. ಯಾವುದೇ ರೀತಿಯ ಪಾತ್ರವಾದರೂ ಲೀಲಾಜಾಲವಾಗಿ ನಿರ್ವಹಿಸಬಲ್ಲ ನಟ ಧನುಶ್. ಬಾಲಿವುಡ್​ನಲ್ಲೂ (Bollywood) ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಧನುಶ್​ ಹಾಲಿವುಡ್​ನಲ್ಲೂ (Hollywood) ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾನಲ್ಲಿ ಹಾಲಿವುಡ್ ಸ್ಟಾರ್ ನಟರೊಡನೆ ನಟಿಸಿ ಬಂದಿದ್ದಾರೆ. ಆದರೆ ಇದೀಗ ಹಠಾತ್ತನೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಧನುಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ನೊಟೀಸ್ ಜಾರಿ ಮಾಡಿದೆ. ತಮಿಳು ಚಿತ್ರರಂಗದಿಂದ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಸ್ಟಾರ್ ನಟ ಧನುಶ್ ಅವರಿಗೆ ತಮಿಳು ಚಿತ್ರರಂಗದ ನಿರ್ಮಾಪಕ ಸಂಘವು ನೊಟೀಸ್ ನೀಡಿದ್ದು ಧನುಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ನಟ ಧನುಶ್ ಮಾತ್ರವೇ ಅಲ್ಲದೆ ಇತರೆ ಕೆಲವು ಜನಪ್ರಿಯ ತಮಿಳು ನಟರಿಗೂ ನೊಟೀಸ್ ನೀಡಲಾಗಿದೆ ಎನ್ನಲಾಗುತ್ತಿದೆ. ನಟ ಧನುಶ್ ನಿರ್ಮಾಪಕರೊಬ್ಬರಿಗೆ ಮುಂಗಡ ಹಣ ಪಡೆದು ಈಗ ಸಿನಿಮಾದಲ್ಲಿ ನಟಿಸಲು ಸೂಕ್ತ ಡೇಟ್ಸ್ ನೀಡುತ್ತಿಲ್ಲವಂತೆ ಮಾತ್ರವಲ್ಲದೆ ಸಬೂಬುಗಳನ್ನು ಹೇಳುತ್ತಿದ್ದಾರಂತೆ. ಇದೇ ಕಾರಣಕ್ಕೆ ಧನುಶ್​ಗೆ ನೊಟೀಸ್ ನೀಡಿದೆ ನಿರ್ಮಾಪಕ ಸಂಘ.

ನಟ ಧನುಶ್, ತಮಿಳಿನ ಶ್ರೀ ತೆನಂದಾಲ್ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಒಂದಕ್ಕಾಗಿ ಮುಂಗಡ ಪಡೆದಿದ್ದರು. ಆದರೆ ಆ ಸಿನಿಮಾದಲ್ಲಿ ಈ ವರೆಗೆ ನಟಿಸಿಲ್ಲ. ಹಾಗಾಗಿ ತೆನಂದಾಲ್ ನಿರ್ಮಾಣ ಸಂಸ್ಥೆಯು ತಮಿಳು ಫಿಲಂ ಪ್ರೊಡ್ಯೂಸರ್ಸ್ ಕೌನ್ಸಿಲ್​ಗೆ (ಟಿಎಫ್​ಪಿಸಿ) ದೂರು ನೀಡಿತ್ತು. ಹಾಗಾಗಿ ಈಗ ಟಿಎಫ್​ಪಿಸಿಯು ಧನುಶ್​ಗೆ ನೊಟೀಸ್ ಜಾರಿ ಮಾಡಿದ್ದು, ನಿರ್ಮಾಪಕರ ಸಂಘದಿಂದ ನಿಷೇಧ ಹೇರುವ ಎಚ್ಚರಿಕೆಯನ್ನು ಸಹ ನೀಡಿದೆ.

ಇದನ್ನೂ ಓದಿ:ಶಂಕರನಾಗಿ ಮತ್ತೆ ಬಾಲಿವುಡ್​ಗೆ ಕಾಲಿಟ್ಟ ಧನುಶ್, ಟೀಸರ್ ನೋಡಿ ಅತ್ಯದ್ಭುತ ಎಂದ ಅಭಿಮಾನಿಗಳು

ಧನುಶ್ ಮಾತ್ರವೇ ಅಲ್ಲದೆ ತಮಿಳಿನ ಇತರೆ ನಟರಾದ ಸಿಲಂಬರಸನ್ ಅಲಿಯಾಸ್ ಸಿಂಭು. ಎಸ್​ಜೆ ಸೂರ್ಯ, ವಿಶಾಲ್ ಹಾಸ್ಯನಟ ಯೋಗಿಬಾಬು ಅವರುಗಳಿಗೂ ನಿರ್ಮಾಪಕರ ಸಂಘ ನೊಟೀಸ್ ನೀಡಿದ್ದು ಅಶಿಸ್ತಿನ ಕಾರಣದಿಂದ ನಿಷೇಧ ಹೇರುವ ಎಚ್ಚರಿಕೆಯನ್ನು ನೀಡಿದೆ. ಪಡೆದ ಮುಂಗಡಕ್ಕೆ ಸಿನಿಮಾ ಮಾಡಿ ಕೊಡಿ ಇಲ್ಲವಾ ಬಡ್ಡಿ ಸಮೇತ ಮುಂಗಡ ಹಣ ವಾಪಸ್ ಮಾಡಿ ಎಂದು ನಿರ್ಮಾಪಕರ ಸಂಘ ನಟರಿಗೆ ಷರತ್ತು ಹಾಕಿದೆ.

ಕೆಲವು ದಿನಗಳ ಹಿಂದಷ್ಟೆ ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕರ ಸಂಘವು ಇಬ್ಬರು ಜನಪ್ರಿಯ ನಟರ ಮೇಲೆ ನಿಷೇಧ ಹೇರಿತ್ತು. ಒಬ್ಬ ನಟ ಕ್ಷಮೆ ಕೇಳಿದ ಬಳಿಕ ಆತನ ಮೇಲಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಇನ್ನೊಬ್ಬ ನಟನ ಮೇಲಿನ ನಿಷೇಧ ಜಾರಿಯಲ್ಲಿದೆ. ಈಗ ಅದೇ ಮಾದರಿಯನ್ನು ತಮಿಳು ಚಿತ್ರರಂಗದ ನಿರ್ಮಾಪಕರ ಸಂಘವೂ ಮಾಡ ಹೊರಟಿದೆ.

ನಟ ಧನುಶ್, ತಮಿಳಿನ ಅತ್ಯಂತ ವೃತ್ತಿಪರ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆದರೆ ಮುಂಗಡ ಪಡೆದು ಸಿನಿಮಾದಲ್ಲಿ ಏಕೆ ನಟಿಸಿಲ್ಲ ಎಂಬುದು ತಿಳಿದು ಬಂದಿಲ್ಲ. ಧನುಶ್ ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅದಾದ ಬಳಿಕ ಬಾಲಿವುಡ್ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದಾರೆ. ಆ ಬಳಿಕ ಆಯರತ್ತಿಲ್ ಒರುವನ್ ಸಿನಿಮಾದಲ್ಲಿ ಧನುಶ್ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ