ನಟ ಧನುಷ್ (Dhanush) ಹಾಗೂ ರಜನಿಕಾಂತ್ ಮಗಳು ಐಶ್ವರ್ಯಾ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು. ನಂತರ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಡಿವೋರ್ಸ್ ಪಡೆದ ಬಳಿಕ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ಹೇಳಿಕೊಳ್ಳುತ್ತಿಲ್ಲ. ಈಗಲೂ ಅದು ಮುಂದುವರಿದಿದೆ. ರಜನಿಕಾಂತ್ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ‘ಲಾಲ್ ಸಲಾಂ’ ಚಿತ್ರಕ್ಕೆ ಧನುಷ್ ಶುಭಾಶಯ ಕೋರಿದ್ದಾರೆ. ಆದರೆ, ಎಲ್ಲಿಯೂ ಅವರು ಪತ್ನಿಯ ಹೆಸರನ್ನು ಉಲ್ಲೇಖ ಮಾಡಿಲ್ಲ.
ಐಶ್ವರ್ಯಾ ರಜನಿಕಾಂತ್ ‘ಲಾಲ್ ಸಲಾಂ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಒಂದು ಪ್ರಮುಖ ಅತಿಥಿ ಪಾತ್ರ ಮಾಡುತ್ತಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್, ವಿವೇಕ್ ಪ್ರಸನ್ನ, ಕೆಎಸ್ ರವಿ ಕುಮಾರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಟ್ರೇಲರ್ನ ಧನುಷ್ ಹಂಚಿಕೊಂಡು ತಂಡಕ್ಕೆ ಶುಭಕೋರಿದ್ದಾರೆ.
ಇದನ್ನೂ ಓದಿ: ಧನುಷ್ ಪುತ್ರನನ್ನು ಹುಡುಕಿಕೊಂಡು ಬಂದ ಪೊಲೀಸರು; ರಜನಿ ಮೊಮ್ಮಗ ಯಾತ್ರಾ ಮಾಡಿದ ತಪ್ಪು ಏನು?
‘ತಂಡಕ್ಕೆ ನನ್ನ ಶುಭ ಹಾರೈಕೆ. ಒಳ್ಳೆಯದಾಗಲಿ’ ಎಂದಿರುವ ಧನುಷ್, ‘ಸೂಪರ್ಸ್ಟಾರ್’ ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಆದರೆ, ಅವರು ಎಲ್ಲಿಯೂ ಐಶ್ವರ್ಯಾ ಹೆಸರನ್ನು ಉಲ್ಲೇಖ ಮಾಡಿಲ್ಲ. ಅವರನ್ನು ಟ್ಯಾಗ್ ಕೂಡ ಮಾಡಿಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಪತ್ನಿ ಸಿನಿಮಾಗೆ ಶುಭಕೋರಿದ ಮೇಲೆ ಅವರ ಪತ್ನಿಯ ಹೆಸರನ್ನು ಉಲ್ಲೇಖ ಮಾಡಲು ಏನು ಸಮಸ್ಯೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Lal salaam trailer https://t.co/jUlBWLLtTX Best wishes to the team. God bless. #superstar #thalaivar
— Dhanush (@dhanushkraja) February 5, 2024
‘ಲಾಲ್ ಸಲಾಂ’ ಸಿನಿಮಾ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ಹೇಳಲಿದೆ. ಈ ಬಗ್ಗೆ ಟ್ರೇಲರ್ನಲ್ಲಿ ಸುಳಿವು ನೀಡಲಾಗಿದೆ. ‘ಎಲ್ಲ ದೇವರೂ ಒಂದೇ’ ಎನ್ನುವ ಡೈಲಾಗ್ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಇದೆ. ‘ಲಾಲ್ ಸಲಾಂ’ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ನಿರೀಕ್ಷೆ ಬಗ್ಗೆ ಮೂಡಿದೆ. ಟ್ರೇಲರ್ ಬಿಡುಗಡೆ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಫೆಬ್ರವರಿ 9ರಂದು ಈ ಚಿತ್ರ ರಿಲೀಸ್ ಆಗಲಿದೆ. ರೆಹಮಾನ್ ಅವರು ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ