Lal Salaam: ಮೊಯಿದ್ದೀನ್ ಭಾಯ್ ಆಗಿ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಬಂದ ರಜನಿಕಾಂತ್
ಭಾರಿ ನಿರೀಕ್ಷೆ ಮೂಡಿಸಿರುವ ‘ಲಾಲ್ ಸಲಾಂ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಫೆ.9ರಂದು ರಿಲೀಸ್ ಆಗಲಿರುವ ಈ ಚಿತ್ರದಲ್ಲಿ ರಜನಿಕಾಂತ್, ವಿಷ್ಣು ವಿಶಾಲ್, ವಿಕ್ರಾಂತ್, ಕಪಿಲ್ ದೇವ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾಗೆ ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದು, ಟ್ರೇಲರ್ ಮೂಲಕ ಕುತೂಹಲ ಕೆರಳಿಸಲಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರಿಗೆ ವಿಶೇಷವಾದ ಪಾತ್ರವಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಲಾಲ್ ಸಲಾಂ’ ಸಿನಿಮಾ (Lal Salaam Movie) ಈಗಾಗಲೇ ತೆರೆಕಂಡಿರಬೇಕಿತ್ತು. ಈ ಸಿನಿಮಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರತಂಡವು ಕಾರಣಾಂತರಗಳಿಂದ ರಿಲೀಸ್ ದಿನಾಂಕವನ್ನು ಮುಂಡೂಡಿಕೊಂಡಿತ್ತು. ಈಗ ಈ ಸಿನಿಮಾದ ಬಿಡುಗಡೆಗೆ ಸಮಯ ಕೂಡಿಬಂದಿದೆ. ರಜನಿಕಾಂತ್ (Rajinikanth) ಅವರು ‘ಲಾಲ್ ಸಲಾಂ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಫೆಬ್ರವರಿ 9ರಂದು ಈ ಚಿತ್ರ ತೆರೆಕಾಣಲಿದೆ. ಈಗ ಟ್ರೇಲರ್ (Lal Salaam Trailer) ಬಿಡುಗಡೆ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ರಜನಿಕಾಂತ್ ಅವರು ಮೊಯಿದ್ದೀನ್ ಭಾಯ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟ್ರೇಲರ್ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ.
‘ಲಾಲ್ ಸಲಾಂ’ ಸಿನಿಮಾಗೆ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಜೊತೆ ವಿಷ್ಣು ವಿಶಾಲ್, ವಿಕ್ರಾಂತ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಲಾಲ್ ಸಲಾಂ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಟ್ರೇಲರ್ ಬಿಡುಗಡೆ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ರಜನಿಕಾಂತ್ ಸ್ಟೈಲ್ ಕಾಪಿ ಮಾಡಿದ ಮೊಮ್ಮೊಗ; ವಿಡಿಯೋ ವೈರಲ್
ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ‘ಲಾಲ್ ಸಲಾಂ’ ಸಿನಿಮಾ ವಿವರಿಸಲಿದೆ. ಕಥೆಯ ಬಗ್ಗೆ ಸುಳಿವು ನೀಡುವಂತಹ ಅನೇಕ ಡೈಲಾಗ್ಗಳು ಟ್ರೇಲರ್ನಲ್ಲಿವೆ. ‘ಜನರು ಯಾವ ದೇವರ ಮೇಲೆ ನಂಬಿಕೆ ಇಡುತ್ತಾರೆ ಎಂಬುದು ಮುಖ್ಯವಲ್ಲ. ಎಲ್ಲ ದೇವರೂ ಒಂದೇ’ ಎಂಬಿತ್ಯಾದಿ ಡೈಲಾಗ್ಗಳು ಗಮನ ಸೆಳೆಯುತ್ತಿವೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳೂ ಇವೆ.
‘ಲಾಲ್ ಸಲಾಂ’ ಸಿನಿಮಾ ಟ್ರೇಲರ್:
‘ಲಾಲ್ ಸಲಾಂ’ ಚಿತ್ರದಲ್ಲಿ ಕ್ರೀಡೆಯ ಕುರಿತಾದ ಕಥೆ ಕೂಡ ಇದೆ. ಕ್ರಿಕೆಟ್ನ ಕೇಂದ್ರವಾಗಿ ಇಟ್ಟುಕೊಂಡು ಕಥೆ ಹೇಳಿದ್ದಾರೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್. ಹಾಗಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರದ್ದು ಈ ಸಿನಿಮಾದಲ್ಲಿ ಅತಿಥಿ ಪಾತ್ರ. ರಜನಿಕಾಂತ್ ಮತ್ತು ಕಪಿಲ್ ದೇವ್ ಅವರು ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಈ ದೃಶ್ಯಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಲೈಕಾ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ಮೂಡಿಬಂದಿದ್ದು, ಸುಭಾಸ್ಕರನ್ ಅವರು ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ