ಚೇತನ್ ಜೊತೆ ಗಣೇಶ್ ಸಿನಿಮಾ: ಆಕ್ಷನ್ನಾ? ಫ್ಯಾಮಿಲಿ ಸೆಂಟಿಮೆಂಟಾ?
Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ ಇಂದು (ಜೂನ್ 02) ಗಣೇಶ್ ಹುಟ್ಟುಹಬ್ಬದಂದು ಕೆಲವು ಹೊಸ ಸಿನಿಮಾಗಳನ್ನು ಘೋಷಿಸಲಾಗಿದೆ. ‘‘ಭರ್ಜರಿ’, ‘ಬಹದ್ದೂರ್’, ‘ಭರಾಟೆ’ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚೇತನ್ ಕುಮಾರ್ ಅವರು ಗಣೇಶ್ ಅವರ ಮುಂದಿನ ಸಿನಿಮಾ ಅನ್ನು ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಹೆಸರು ಇನ್ನಷ್ಟೆ ಘೋಷಿಸಬೇಕಿದೆ.

ಇಂದು (ಜೂನ್ 02) ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ (Ganesh Birthday). ಹುಟ್ಟುಹಬ್ಬದಂದು ಅವರು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಬಹಳ ಸರಳವಾಗಿ ಕುಟುಂಬದವರು ಹಾಗೂ ಚಿತ್ರತಂಡದ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಮಳೆ ಹುಗುಡನ ಹುಟ್ಟುಹಬ್ಬದ ಪ್ರಯುಕ್ತ ಕೆಲ ಹೊಸ ಸಿನಿಮಾಗಳು ಘೋಷಣೆ ಆಗಿವೆ. ‘ಭರ್ಜರಿ’, ‘ಬಹದ್ದೂರ್’, ‘ಭರಾಟೆ’ ರೀತಿಯ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚೇತನ್ ಕುಮಾರ್, ಗೋಲ್ಡನ್ ಸ್ಟಾರ್ ಜೊತೆಗೆ ಕೈ ಜೋಡಿಸಿದ್ದು, ಹೊಸ ಸಿನಿಮಾ ಘೋಷಿಸಿದ್ದಾರೆ. ಪ್ರಸ್ತುತ ಗಣೇಶ್ ಅವರು ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ಚೇತನ್ ಜೊತೆಗಿನ ಸಿನಿಮಾನಲ್ಲಿ ನಟಿಸಲಿದ್ದಾರೆ.
ಗಣೇಶ್ ತಮ್ಮ ರೊಮ್ಯಾಂಟಿಕ್, ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾಗಳಿಂದ ಬಲು ಜನಪ್ರಿಯರು. ಆದರೆ ಚೇತನ್ ಕಮರ್ಶಿಯಲ್, ಮಾಸ್ ಎಲಿಮೆಂಟ್ಗಳು ಹೆಚ್ಚಾಗಿರುವ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಯಾವ ರೀತಿಯ ಸಿನಿಮಾ ಬರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಗಣೇಶ್ ಅವರ ಮ್ಯಾನರಿಸಂಗೆ ತಕ್ಕಂತೆ ಚೇತನ್ ಸಿನಿಮಾ ಮಾಡಲಿದ್ದಾರಂತೆ. ರೋಮ್ಯಾಂಟಿಕ್ ಎಲಿಮೆಂಟ್ಸ್ ಇರಲಿದ್ದು, ಆದರೆ ಚೇತನ್ ಅವರ ಮೇಕಿಂಗ್ ಸ್ಟೈಲ್ ಅಲ್ಲಿಯೇ ಚಿತ್ರದಲ್ಲಿ ಇರಲಿದೆ ಅನ್ನುವ ಸುದ್ದಿ ಇದೆ.
‘ಭುವನಂ ಗಗನಂ’, ‘ಅಯೋಗ್ಯ 2’ ಸಿನಿಮಾ ನಿರ್ಮಾಣ ಮಾಡಿರುವ ಮುನೇಗೌಡ ಅವರು ಗಣೇಶ್-ಚೇತನ್ ಅವರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವು ಗೌಡ ಕೂಡ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಎಸ್ ವಿಜಿ ಫಿಲ್ಮಂ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಸದ್ಯ ಪ್ರೊಡಕ್ಷನ್ 3 ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಇನ್ನು ಮುನೇಗೌಡ ಅವರೇ ಈ ಚಿತ್ರವನ್ನು ಪ್ರೆಸೆಂಟ್ ಮಾಡಲಿದ್ದಾರೆ. ಶೀಘ್ರದಲ್ಲೇ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.
ಇದನ್ನೂ ಓದಿ:Yours Sincerely Raam: ಆಂಜನೇಯನ ವೇಷ ಧರಿಸಿದ ಗೋಲ್ಡನ್ ಸ್ಟಾರ್ ಗಣೇಶ್
ಇನ್ನು ನಟ ಗಣೇಶ್ ಅವರ ಕೈಯಲ್ಲಿ ಈಗಾಗಲೇ ಕೆಲವಾರು ಸಿನಿಮಾಗಳಿವೆ. ‘ಪಿನಾಕಾ’, ಯುವರ್ ಸಿನ್ಸಿಯರ್ಲಿ ರಾಮ್, (Yours Sincerely Raam) ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಡೈರೆಕ್ಟರ್ ಅರಸು ಅಂತಾರೆ ನಿರ್ದೇಶನದ ಚಿತ್ರವನ್ನು ಗಣೇಶ್ ಮಾಡುತ್ತಿದ್ದಾರೆ. ‘ಜಾಂಗೊ ಕೃಷ್ಣಮೂರ್ತಿ’ ಹೆಸರಿನ ಸಿನಿಮಾ ಸಹ ಇಂದೇ ಘೋಷಣೆ ಆಗಿದೆ. ಇವುಗಳ ಜೊತೆಗೆ ಚೇತನ್ ಜೊತೆಗಿನ ಸಿನಿಮಾನಲ್ಲಿಯೂ ಗಣೇಶ್ ನಟನೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ