ಅಪಘಾತದ ಮಧ್ಯೆಯೂ ಅಭಿಮಾನ ತೋರಲು ಬಂದ ಫ್ಯಾನ್; ಸಿಟ್ಟಾದ ಹೀರೋ ಮಾಡಿದ್ದೇನು ನೋಡಿ

|

Updated on: Sep 12, 2024 | 3:01 PM

ಜೀವ ಅವರು ಕಾರು ಹೈವೇಲಿ ಸಾಗುತ್ತಿತ್ತು. ಈ ವೇಳೆ ಬೈಕ್ ಅಡ್ಡ ಬಂದಿದೆ. ನಂತರ ಕಾರು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಭಿಮಾನಿಯೋರ್ವ ಜೀವ ಅವರನ್ನು ಟಚ್ ಮಾಡಲು ಬಂದಿದ್ದಾರೆ. ಇದರಿಂದ ಜೀವ ಅವರು ಸಿಟ್ಟಾಗಿದ್ದಾರೆ. ‘ನನಗೆ ಅಪಘಾತ ಆಗಿದೆ.

ಅಪಘಾತದ ಮಧ್ಯೆಯೂ ಅಭಿಮಾನ ತೋರಲು ಬಂದ ಫ್ಯಾನ್; ಸಿಟ್ಟಾದ ಹೀರೋ ಮಾಡಿದ್ದೇನು ನೋಡಿ
ಜೀವ
Follow us on

ತಮಿಳು ನಟ ಜೀವ ಹಾಗೂ ಅವರ ಪತ್ನಿ ಸುಪ್ರಿಯಾ ಅವರು ಅಪಘಾತಕ್ಕೆ ಒಳಗಾಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸೇಲಂನಿಂದ ಚೆನ್ನೈಗೆ ತೆರಳುವಾಗ ಕಲ್ಲಕುರಿಚಿಯಲ್ಲಿ ಈ ಅಪಘಾತ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಇದರಲ್ಲಿ ಹೀರೋ ಜೀವ ಸಿಟ್ಟಾದ ವಿಡಿಯೋ ಕೂಡ ಇದೆ. ಅಷ್ಟಕ್ಕೂ ಆ ಸ್ಥಳದಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ಜೀವ ಅವರು ಕಾರು ಹೈವೇಲಿ ಸಾಗುತ್ತಿತ್ತು. ಈ ವೇಳೆ ಬೈಕ್ ಅಡ್ಡ ಬಂದಿದೆ. ನಂತರ ಕಾರು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಭಿಮಾನಿಯೋರ್ವ ಜೀವ ಅವರನ್ನು ಟಚ್ ಮಾಡಲು ಬಂದಿದ್ದಾರೆ. ಇದರಿಂದ ಜೀವ ಅವರು ಸಿಟ್ಟಾಗಿದ್ದಾರೆ. ‘ನನಗೆ ಅಪಘಾತ ಆಗಿದೆ. ನೀವೇನು ಮಾಡುತ್ತಿದ್ದೀರಾ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅದೃಷ್ಟವಶಾತ್ ಜೀವ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಂತರ ಅವರು ಬೇರೆ ಕಾರಿನಲ್ಲಿ ಚೆನ್ನೈ ತೆರಳಿದ್ದಾರೆ. ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಹೇಮಾ ಸಮಿತಿ ವರದಿಗೆ ಸಂಬಂಧಿಸಿದಂತೆ ಅವರು ದೂರು ನೀಡಿದ್ದರು. ‘ಮಲಯಾಳಂ ಫಿಲ್ಮ್​ ಸೆಟ್​ನಲ್ಲಿ ಹಿಡನ್ ಕ್ಯಾಮೆರಾ ಇಡಲಾಗುತ್ತಿದೆ ಎಂದು ಕೇಳಿದ್ದೇನೆ. ಅದು ತಪ್ಪು. ತಮಿಳು ಚಿತ್ರರಂಗದಲ್ಲಿ ಅದು ಇಲ್ಲ. ಕೇರಳ ಚಿತ್ರರಂಗಕ್ಕೆ ಮಾತ್ರ ಇದು ಸೀಮಿತವಾಗಿದೆ’ ಎಂದಿದ್ದರು ಅವರು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ

‘MeToo ಪ್ರಕರಣದ ಪಾರ್ಟ್​ 1 ಬಂದಿದೆ. ಪಾರ್ಟ್ 2 ಇನ್ನಷ್ಟೇ ಬರಬೇಕಿದೆ. ಜನರು ಓಪನ್ ಆಗಿ ಕಿರುಕುಳ ನೀಡಿದವರ ಹೆಸರನ್ನು ಹೇಳುತ್ತಿದ್ದಾರೆ. ಅದು ತಪ್ಪು. ಚಿತ್ರರಂಗದಲ್ಲಿ ಒಳ್ಳೆಯ ವಾತಾವರಣ ಇರಬೇಕು. ಲೈಂಗಿಕ ಕಿರುಕುಳ ತಮಿಳು ಚಿತ್ರರಂಗದಲ್ಲಿ ಇಲ್ಲ’ ಎಂದು ಅವರು ಹೇಳಿದ್ದರು. ಜೀವ ಅವರು ಕೊನೆಯದಾಗಿ ‘ಯಾತ್ರಾ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.