ಸತತ ಸೋಲಿನ ಬಳಿಕ ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ ನಟಿ ಪೂಜಾ ಹಗ್ಡೆ?

ಸ್ಟಾರ್​ ನಟಿ ಪೂಜಾ ಹೆಗ್ಡೆ ಅವರು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಸಿನಿಮಾದಲ್ಲಿ ಅವರು ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಸಿನಿಮಾಗಳು ಸೋತಿದ್ದರಿಂದಲೇ ಪೂಜಾ ಹೆಗ್ಡೆ ಅವರು ಇಂಥ ಪಾತ್ರವನ್ನು ಒಪ್ಪಿಕೊಂಡಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಸತತ ಸೋಲಿನ ಬಳಿಕ ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ ನಟಿ ಪೂಜಾ ಹಗ್ಡೆ?
ಪೂಜಾ ಹೆಗ್ಡೆ
Follow us
|

Updated on: Sep 12, 2024 | 3:38 PM

ಇತ್ತೀಚಿನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಅವರು 2022ರಲ್ಲಿ ‘ಸರ್ಕಸ್​’ ಸಿನಿಮಾ ಮೂಲಕ ಹಾಗೂ 2023ರಲ್ಲಿ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಮೂಲಕ ಸೋಲು ಕಂಡರು. ಸ್ಟಾರ್​ ನಟರ ಸಿನಿಮಾಗಳಿಗೆ ಹೀರೋಯಿನ್​ ಆಗಿದ್ದರೂ ಕೂಡ ಪೂಜಾ ಹೆಗ್ಡೆ ಅವರಿಗೆ ಸೋಲು ತಪ್ಪಲಿಲ್ಲ. ಹಾಗಂತ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ‘ಕಾಂಚನಾ 4’ ಸಿನಿಮಾಗೆ ಪೂಜಾ ಹೆಗ್ಡೆ ಅವರು ನಾಯಕಿ ಆಗಿದ್ದಾರೆ ಎನ್ನಲಾಗಿದೆ.

ರಾಘವ ಲಾರೆನ್ಸ್​ ಅವರು ‘ಕಾಂಚನಾ 4’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್​ ಕೆಲಸಗಳು ಮುಗಿದಿವೆ. ವರದಿಗಳ ಪ್ರಕಾರ ಈ ಸಿನಿಮಾಗೆ ಪೂಜಾ ಹೆಗ್ಡೆ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿಲ್ಲ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಈ ಕುರಿತು ವರದಿ ಆಗಿದೆ.

ಹಾರರ್​ ಕಥಾಹಂದರದ ‘ಕಾಂಚನಾ’ ಸರಣಿಯ ಸಿನಿಮಾಗಳನ್ನು ಜನರು ನೋಡಿ ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಮುಂದಿನ ಸೀಕ್ವೆಲ್​ಗೆ ತಯಾರಿ ನಡೆದಿದೆ. ‘ಕಾಂಚನಾ 4’ ಸಿನಿಮಾದಲ್ಲಿ ದೆವ್ವದ ಪಾತ್ರ ಮಾಡುವಂತೆ ಪೂಜಾ ಹೆಗ್ಡೆ ಅವರಿಗೆ ಆಫರ್​ ಮಾಡಲಾಗಿದೆಯಂತೆ. ಈ ಹಿಂದಿನ ಸಿನಿಮಾಗಳು ಸೋತಿರುವ ಕಾರಣದಿಂದ ಅವರು ಈ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ನಟಿ ಪೂಜಾ ಹೆಗ್ಡೆ ಗ್ಲಾಮರಸ್ ಲುಕ್

ಸಿನಿಮಾಗಳು ಸೋತಿದ್ದರೂ ಕೂಡ ಪೂಜಾ ಹೆಗ್ಡೆ ಅವರ ಚಾರ್ಮ್​ ಕಡಿಮೆ ಆಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್ ಆ್ಯಕ್ಟೀವ್​ ಆಗಿದ್ದಾರೆ. ಬಾಲಿವುಡ್​ ಮತ್ತು ಸೌತ್​ ಸಿನಿಮಾದಿಂದ ಅವರಿಗೆ ಆಫರ್​ ಬರುತ್ತಲೇ ಇವೆ. ಕೆಲವು ಸಿನಿಮಾಗಳಿಂದ ಅವರು ಹೊರಬಂದಿದ್ದಾರೆ. ಹೊಸ ಹೊಸ ಸಿನಿಮಾಗಳ ಆಫರ್​ ಸಿಗುತ್ತಲೇ ಇವೆ. ಶಾಹಿದ್​ ಕಪೂರ್​ ನಟನೆಯ ‘ದೇವ’ ಹಾಗೂ ಸೂರ್ಯ ನಟನೆಯ 44ನೇ ಸಿನಿಮಾಗೂ ಪೂಜೆ ಹೆಗ್ಡೆ ಅವರು ಹೀರೋಯಿನ್ ಆಗಿದೆ. ಆ ಸಿನಿಮಾಗಳ ಕೆಲಸಗಳು ಪ್ರಗತಿಯಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್