ಚಿತ್ರದ ಬಿಡುಗಡೆಗೆ ಸಿದ್ಧವಾಗಿರುವ ‘ಆರ್ಆರ್ಆರ್’ (RRR) ಚಿತ್ರತಂಡ ದೇಶದೆಲ್ಲೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ಚಿತ್ರದ ಪ್ರಿ-ರಿಲೀಸ್ ಈವೆಂಟ್ ಚೆನ್ನೈನಲ್ಲಿ ನಡೆದಿತ್ತು. ಅದರಲ್ಲಿ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli), ನಟರಾದ ಜ್ಯೂ.ಎನ್ಟಿಆರ್, ರಾಮ್ ಚರಣ್ ಹಾಗೂ ನಿರ್ಮಾಪಕ ಡಿವಿವಿ ದಾನಯ್ಯ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮ್ ಚರಣ್ (Ram Charan) ಹಾಗೂ ಜ್ಯೂ ಎನ್ಟಿಆರ್ (Jr NTR) ನಡುವಿನ ಮಾತುಕತೆ ಇದೀಗ ಎಲ್ಲರ ಗಮನ ಸೆಳೆದಿದೆ. ಜ್ಯೂ ಎನ್ಟಿಆರ್ ಮಾತನಾಡುತ್ತಾ ರಾಮ್ ಚರಣ್ ಅವರೊಂದಿಗೆ ಕಾಣಿಸಿಕೊಳ್ಳುವುದು ಇದು ಆರಂಭವಷ್ಟೇ ಎಂದರು. ‘‘ಪ್ರೀತಿಯ ರಾಮ್ ಚರಣ್, ನಿಮ್ಮೊಡನೆ ತೆರೆ ಹಂಚಿಕೊಳ್ಳಬಹುದು ಎಂಬ ಕಾರಣಕ್ಕೆ ಆರ್ಆರ್ಆರ್ ಚಿತ್ರದ ಪ್ರತೀ ದೃಶ್ಯದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳಬೇಕು ಎಂದು ಮನಸ್ಸು ಹೇಳುತ್ತದೆ. ಇದು ಕೊನೆಯಲ್ಲ. ಹೊಸ ಪಯಣದ ಆರಂಭ’’ ಎಂದಿದ್ದಾರೆ ಜ್ಯೂ.ಎನ್ಟಿಆರ್.
ನಂತರ ಮಾತನಾಡಿದ ರಾಮ್ ಚರಣ್, ಜ್ಯೂ.ಎನ್ಟಿಆರ್ ಅವರೊಂದಿಗಿನ ಸ್ನೇಹದ ಕುರಿತು ಮಾತನಾಡುತ್ತಾ ಭಾವುಕರಾದರು. ‘‘ಪ್ರೀತಿಯ ಎನ್ಟಿಆರ್, ನಮ್ಮಿಬ್ಬರಿಗೆ ಕೇವಲ ಒಂದು ವರ್ಷದ ವ್ಯತ್ಯಾಸ. ಆದರೆ ನಿಜ ಜೀವನದಲ್ಲಿ ಅವನದ್ದು (ಎನ್ಟಿಆರ್) ಮಕ್ಕಳ ರೀತಿಯ ಮನಸ್ಸು ಆದರೆ ಸಿಂಹದಂತಹ ವ್ಯಕ್ತಿತ್ವ. ಇವನೊಡನೆ ಬಹಳ ಜಾಗೃತರಾಗಿರಬೇಕು’’ ಎಂದು ನಗುತ್ತಾ ರಾಮ್ ಚರಣ್ ಹೇಳಿದ್ದಾರೆ. ಮುಂದುವರೆಸಿದ ರಾಮ್ ಚರಣ್, ‘‘ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಆದರೆ ತಾರಕ್ಗೆ ಹೇಳುವುದಿಲ್ಲ. ಕಾರಣ, ನಾನು ದೇವರಿಗೆ ಇಂತಹ ಸೋದರನನ್ನು ನೀಡಿದ್ದಕ್ಕೆ ಧನ್ಯವಾದ ಹೇಳಬೇಕು’’ ಎಂದು ಭಾವುಕರಾಗಿ ನುಡಿದಿದ್ದಾರೆ ರಾಮ್ಚರಣ್.
ಜ್ಯೂ ಎನ್ಟಿಆರ್ ಜತೆಗಿನ ಸೋದರ ಸಂಬಂಧದ ಕುರಿತು ಮತ್ತಷ್ಟು ಮಾತನಾಡಿದ ರಾಮ್ ಚರಣ್, ‘‘ಈ ಚಿತ್ರದೊಂದಿಗಿನ ಸಂಬಂಧವನ್ನು ಎಲ್ಲರಂತೆ ನಾನೂ ಬಹಳ ಕಾಲ ಇಟ್ಟುಕೊಳ್ಳುತ್ತೇನೆ. ಆದರೆ ತಾರಕ್ ಜತೆಗಿನ ಸಂಬಂಧ ನನ್ನ ಸಂಪೂರ್ಣ ಜೀವಿತಾವಧಿಯವರೆಗೆ ಇರುತ್ತದೆ. ಆ ಸೋದರತ್ವವನ್ನು ನನ್ನ ಕೊನೆಯುಸಿರು ಇರುವವರೆಗೂ ಕಾಪಾಡಿಕೊಳ್ಳುತ್ತೇನೆ. ಎಲ್ಲರಿಗೂ ಧನ್ಯವಾದಗಳು’’ ಎಂದಿದ್ದಾರೆ. ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಮಾತುಗಳನ್ನು ಕೇಳಿ ಅವರ ಫ್ಯಾನ್ಸ್ ಸಅಖತ್ ಖುಷಿಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಜನವರಿ 7ರಂದು ವಿಶ್ವಾದ್ಯಂತ ತೆರೆಕಾಣಲಿದೆ. ರಾಮ್ ಚರಣ್, ಜ್ಯೂ ಎನ್ಟಿಆರ್ ಅವರೊಂದಿಗೆ ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಸೇರಿದಂತೆ ಹಲವು ತಾರೆಯರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ:
Arun Vaidyanathan: ‘ಕೊವಿಡ್ ಮಸಾಲಾ ಫಿಲ್ಮ್ ಇದ್ದಂತೆ; ಲಾಜಿಕ್ ಇರೋದೇ ಇಲ್ಲ’ ಎಂದ ನಿರ್ದೇಶಕ!