ನಿರ್ಮಾಪಕಿ ವಿರುದ್ಧ ದೂರು ದಾಖಲಿಸಿದ ನಟ ಜಯಂ ರವಿ

Actor Ravi Mohan: ತಮಿಳಿನ ಸ್ಟಾರ್ ನಟ ರವಿ ಮೋಹನ್, ಇವರನ್ನು ಜಯಂ ರವಿ ಎಂದು ಸಹ ಕರೆಯಲಾಗುತ್ತದೆ. ಕೆಲ ತಿಂಗಳ ಹಿಂದೆ ತಮ್ಮ ಪತ್ನಿಯ ವಿರುದ್ಧ ಆರೋಪ ಮಾಡಲು ಸುದ್ದಿಗೋಷ್ಠಿ ಕರೆದಿದ್ದು ಭಾರಿ ಸುದ್ದಿಯಾಗಿತ್ತು. ಸುದ್ದಿಗೋಷ್ಠಿಯಲ್ಲಿ ಚಿತ್ರ-ವಿಚಿತ್ರವಾಗಿ ಅವರು ವರ್ತಿಸಿದ್ದರು. ಇದೀಗ ಮತ್ತೊಮ್ಮೆ ರವಿ ಅವರು ಸುದ್ದಿಯಲ್ಲಿದ್ದಾರೆ. ರವಿ ಅವರು ನಿರ್ಮಾಪಕಿ ವಿರುದ್ಧ ದೂರು ದಾಖಲಿಸಿದ್ದಾರೆ.

ನಿರ್ಮಾಪಕಿ ವಿರುದ್ಧ ದೂರು ದಾಖಲಿಸಿದ ನಟ ಜಯಂ ರವಿ
Ravi Mohan

Updated on: Aug 20, 2026 | 10:52 AM

ಮುಖ್ಯಾಂಶಗಳು

  • ರವಿ ಮೋಹನ್ ತಮಿಳಿನ ಜನಪ್ರಿಯ ನಟ
  • ಈ ಹಿಂದೆ ಪತ್ನಿಯ ಜೊತೆ ಮನಸ್ಥಾಪದ ಕಾರಣಕ್ಕೆ ಸುದ್ದಿಯಾಗಿದ್ದರು.
  • ಇದೀಗ ರವಿ ಮೋಹನ್ ನಿರ್ಮಾಪಕಿ ವಿರುದ್ಧ ದೂರು ನೀಡಿದ್ದಾರೆ.

ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರು ರವಿ ಮೋಹನ್ (Ravi Mohan) ಅಲಿಯಾಸ್ ಜಯಂ ರವಿ ಸಹ ಒಬ್ಬರು. ಆದರೆ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಪತ್ನಿಯ ಜೊತೆಗಿನ ವಿಚ್ಛೇದನ ಇನ್ನಿತರೆ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದ ರವಿ ಮೋಹನ್. ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಬಾರಿ ರವಿ ಮೋಹನ್ ಅವರು ತಮ್ಮ ಸಿನಿಮಾದ ನಿರ್ಮಾಪಕರ ವಿರುದ್ಧವೇ ದೂರು ನೀಡಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ. ರವಿ ಮೋಹನ್ ಅವರ ದೂರಿನ ವಿಚಾರಣೆಗೆ ಸಮ್ಮತಿಸಿರುವ ನ್ಯಾಯಾಲಯ ನಿರ್ಮಾಕರಿಗೆ ನೊಟೀಸ್ ಸಹ ಜಾರಿ ಮಾಡಿದೆ.

ರವಿ ಮೋಹನ್ ಅವರು ‘ಬ್ರೋ ಕ್ಲಬ್’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ನಿರ್ಮಾಣವನ್ನು ಶ್ರುತಿ ನಲ್ಲಪ್ಪ ಆರಂಭಿಸಿದ್ದರು. ಇದೀಗ ರವಿ ಮೋಹನ್ ಅವರು ಶ್ರುತಿ ನಲ್ಲಪ್ಪ ವಿರುದ್ಧ ಮದ್ರಾಸ್ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿರ್ಮಾಪಕಿ ಶೃತಿ ನಲ್ಲಪ್ಪ ಅವರು ನೆಟ್‌ಫ್ಲಿಕ್ಸ್ ಮತ್ತು ಚಲನಚಿತ್ರ ಉದ್ಯಮಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ತಮ್ಮ ಕುರಿತಾಗಿ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದಾರೆ, ಈ ಮೂಲಕ ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನ್ಯಾಯಾಲಯವು ರವಿ ಮೋಹನ್ ಅವರ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಕೆ. ಗೋವಿಂದರಾಜನ್ ತಿಲಕವತಿ ಅವರು ಶೃತಿ ನಲ್ಲಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆರೋಪಗಳಿಗೆ ಸಂಬಂಧಿಸಿದಂತೆ ನಿರ್ಮಾಪಕಿ ಉತ್ತರಿಸಬೇಕಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು ಆಗಸ್ಟ್ 25 ರಂದು ನಡೆಯಲಿದೆ.

ವಿವಾದ ಏನು?

ರವಿ ಮೋಹನ್ ನಟಿಸುತ್ತಿರುವ ‘ಬ್ರೋ ಕ್ಲಬ್’ ಸಿನಿಮಾ ಈ ಮೊದಲು ‘ಬ್ರೋ ಕೋಡ್’ ಎಂದು ಆರಂಭವಾಗಿತ್ತು. ನಿರ್ಮಾಪಕಿ ಶೃತಿ ನಲ್ಲಪ್ಪ ಅವರ ಒಡೆತನದ ಮಿರಾಕಲ್ ಮೂವೀಸ್ ಈ ಸಿನಿಮಾ ಅನ್ನು ನಿರ್ಮಾಣ ಮಾಡಬೇಕಿತ್ತು. ಈ ಬಹುತಾರಾಗಣದ ಚಿತ್ರದಲ್ಲಿ ರವಿ ಮೋಹನ್ ಅವರು ಪ್ರಮುಖ ಪಾತ್ರಗಳಲ್ಲಿ ಒಬ್ಬರಾಗಿ ಸಹಿ ಹಾಕಿದ್ದರು. ಈ ಚಿತ್ರದ ತಾರಾಗಣದಲ್ಲಿ ಎಸ್.ಜೆ. ಸೂರ್ಯ ಮತ್ತು ಅರ್ಜುನ್ ಅಶೋಕನ್ ಕೂಡ ಇದ್ದಾರೆ. ಆದರೆ ಸಿನಿಮಾ ಆರಂಭವಾದ ಕೆಲ ದಿನಗಳ ಬಳಿಕ ನಿರ್ಮಾಣ ಯೋಜನೆಯಲ್ಲಿ ಬದಲಾವಣೆಯಾಯಿತು.

ಇದನ್ನೂ ಓದಿ:ನಟ ರವಿ ಮೋಹನ್ ಮನೆಯಲ್ಲಿ ಕಳ್ಳತನ: ಕಾರು ಚಾಲಕನ ಬಂಧನ; ವಜ್ರದ ಸರಕ್ಕಾಗಿ ಹುಡುಕಾಟ

ರವಿ ಮೋಹನ್ ತಮ್ಮದೇ ಆದ ‘ರವಿ ಮೋಹನ್ ಸ್ಟುಡಿಯೋಸ್’ ಬ್ಯಾನರ್ ಮೂಲಕ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡರು. ಸಿನಿಮಾದ ಹೆಸರನ್ನು ಸಹ ಬದಲಾವಣೆ ಮಾಡಲಾಯ್ತು. ಆದರೆ ನಿರ್ಮಾಣದ ಆರಂಭಿಕ ಹಂತದಲ್ಲಿ ಉಂಟಾದ ವೆಚ್ಚಗಳ ಬಗ್ಗೆ ರವಿ ಮೋಹನ್ ಮತ್ತು ಶ್ರುತಿ ನಲ್ಲಪ್ಪ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು.

ಸಿನಿಮಾದ ಪ್ರೀ ಪ್ರೊಡಕ್ಷನ್ ಹಣವನ್ನು ನೀಡಬೇಕು ಎಂದು ಶ್ರುತಿ ಒತ್ತಾಯಿಸಿದ್ದರು. ಇಬ್ಬರ ನಡುವೆ ಭಿನ್ನಾಭಿಪ್ರಾಯ ಚಾಲ್ತಿಯಲ್ಲಿರುವಾಗ ನಿರ್ಮಾಪಕಿಯ ಕೆಲವು ನಿರ್ಮಾಣ ಸಂಸ್ಥೆಗಳು, ಒಟಿಟಿಗಳಿಗೆ ಪತ್ರಗಳನ್ನು ಬರೆದು, ರವಿ ಮೋಹನ್ ವಿರುದ್ಧ ಅಪಪ್ರಚಾರ ಮಾಡಿದ್ದಾರೆ, ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ರವಿ ಮೋಹನ್ ಇದೀಗ ಆರೋಪಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us