ರಾಜ್ ಕುಂದ್ರಾ ಪ್ರಕರಣ: ಆಕ್ಷೇಪಾರ್ಹ ವಿಷಯ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಬಾಂಬೆ ಹೈಕೋರ್ಟ್​​ನಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸಿದ ಶಿಲ್ಪಾ ಶೆಟ್ಟಿ

| Updated By: ರಶ್ಮಿ ಕಲ್ಲಕಟ್ಟ

Updated on: Jul 29, 2021 | 10:02 PM

Shilpa Shetty: ತನ್ನ ಜೀವನ ಮತ್ತು ಪತಿಯೊಂದಿಗಿನ ಸಂಬಂಧದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳು ತನ್ನ ಗೌಪ್ಯತೆಗೆ ದಾಳಿ ಮಾಡುತ್ತವೆ ಮತ್ತು ತನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತವೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ ಕುಂದ್ರಾ ಪ್ರಕರಣ: ಆಕ್ಷೇಪಾರ್ಹ ವಿಷಯ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಬಾಂಬೆ ಹೈಕೋರ್ಟ್​​ನಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸಿದ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
Follow us on

ಮುಂಬೈ: ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ತಡೆ ಕೋರಿ ವಿವಿಧ ಮಾಧ್ಯಮ ಸಂಸ್ಥೆಗಳು / ಸುದ್ದಿ ವಾಹಿನಿಗಳ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪರಿಣಾಮ್ ಲಾ ಅಸೋಸಿಯೇಟ್ಸ್ ಮೂಲಕ ಸಲ್ಲಿಸಿದ ತನ್ನ ಮೊಕದ್ದಮೆಯಲ್ಲಿ, ಮಾಧ್ಯಮಗಳು ಸುದ್ದಿಗಳನ್ನು ಸಂವೇದನಾಶೀಲಗೊಳಿಸುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಕ್ಷೇಪಾರ್ಹ ಲೇಖನಗಳನ್ನು ಅಪ್‌ಲೋಡ್ ಮಾಡಿವೆ. ಆಕೆಯ ಬಗ್ಗೆ ಸುಳ್ಳು ಸಂಗತಿ  ಮತ್ತು ಅವಳ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ತನಿಖೆಯನ್ನು ವರದಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರತಿವಾದಿಗಳು ತನ್ನ ವಿರುದ್ಧ ಪ್ರಕಟಿಸಿರುವ ಮಾನಹಾನಿ ವಿಷಯವನ್ನು ತೆಗೆದುಹಾಕಬೇಕು ಮತ್ತು ಆಪಾದಿತ ಲೇಖನಗಳು ಮತ್ತು ವಿಡಿಯೊಗಳು, ಆಧಾರರಹಿತ ಮತ್ತು ಅನಗತ್ಯ ಎಂದು ಬೇಷರತ್ ಕ್ಷಮೆಯಾಚಿಸಬೇಕೆಂದು ಶಿಲ್ಪಾ ಮನವಿ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಕ್ಲಾಪಿಂಗ್ ಹ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಫ್ರೀ ಪ್ರೆಸ್ ಜರ್ನಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಗೂಗಲ್ ಮುಂತಾದ ಸಂಸ್ಥೆಗಳನ್ನು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

“ಪ್ರತಿವಾದಿಗಳಿಗೆ ಜಂಟಿಯಾಗಿ ಮತ್ತು ಕಟ್ಟು ನಿಟ್ಟಾಗಿ ಆದೇಶಿಸಬೇಕು. ಅರ್ಜಿದಾರರಿಗೆ 25 ಕೋಟಿ ರೂ. ಮತ್ತು ಅದರೊಂದಿಗೆ ವರ್ಷಕ್ಕೆ ಶೇ 18 ಬಡ್ಡಿಯೊಂದಿಗೆ ಪಾವತಿಸಬೇಕು. ಮೊಕದ್ದಮೆ ಸಲ್ಲಿಸಿದ ದಿನಾಂಕದಿಂದ ಪಾವತಿ ಆಗುವವರಿಗೆ ಪಾವತಿ ಮಾಡಬೇಕು ಎಂದು ಅರ್ಜಿಯಲ್ಲಿ ಹೇಳಿದೆ.

ತನ್ನ ಜೀವನ ಮತ್ತು ಪತಿಯೊಂದಿಗಿನ ಸಂಬಂಧದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳು ತನ್ನ ಗೌಪ್ಯತೆಗೆ ದಾಳಿ ಮಾಡುತ್ತವೆ ಮತ್ತು ತನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತವೆ ಎಂದು ಅವರು ಆರೋಪಿಸಿದ್ದಾರೆ.

” ಆ ಮಾಹಿತಿ ಸಂಪೂರ್ಣವಾಗಿ ಸುಳ್ಳು, ತಪ್ಪಾದ, ಅವಹೇಳನಕಾರಿ ಮತ್ತು ಮಾನಹಾನಿಕರ ಆಗಿರುವುದರಿಂದ, ಸರಿಪಡಿಸಲಾಗದ ಹಾನಿ, ನಷ್ಟವನ್ನುಂಟು ಮಾಡಿದ್ದು ಸಾರ್ವಜನಿಕರ ಮುಂದೆ ಆಕೆಯ ಖ್ಯಾತಿಗೆ ಹಾನಿ ಉಂಟುಮಾಡಲಾಗಿದೆ” ಎಂದು ಮನವಿ ಹೇಳುತ್ತದೆ.

ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಇತ್ತೀಚೆಗೆ ಪೋರ್ನೊಗ್ರಫಿ ದಂಧೆಯಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾರೆ.

“ಪ್ರತಿವಾದಿಗಳ ಈ ವೆಬ್‌ಸೈಟ್‌ಗಳನ್ನು ಯಾವುದೇ ವ್ಯಕ್ತಿಯಿಂದ ಮುಕ್ತವಾಗಿ ಪ್ರವೇಶಿಸಬಹುದು ಮತ್ತು ಪ್ರತಿವಾದಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಲೇಖನಗಳು ಮತ್ತು ಕಾಮೆಂಟ್‌ಗಳನ್ನು ಪ್ರವೇಶಿಸಲು ಯಾವುದೇ ಪೂರ್ವ ಚಂದಾದಾರಿಕೆಯ ಅಗತ್ಯವಿಲ್ಲ. ಹೀಗಾಗಿ, ಪ್ರತಿವಾದಿಗಳು ಇಲ್ಲಿ ಪ್ರಕಟಿಸಿರುವಂತೆ ಮಾನಹಾನಿಕರ ವಿಷಯವನ್ನು ಪ್ರಕಟಿಸಲಾಗಿದೆ. ಜಗತ್ತಿಗೆ ಇದು ಮುಕ್ತವಾಗಿ ಲಭ್ಯವಿದೆ, “ಎಂದು ಮನವಿ ಹೇಳುತ್ತದೆ.

ತನ್ನನ್ನು ಅಪರಾಧಿ ಮತ್ತು ಗಂಡನನ್ನು ತ್ಯಜಿಸಿದ ಮಹಿಳೆ ಎಂದು ಚಿತ್ರಿಸಲಾಗುತ್ತಿದೆ ಎಂಬುದಾಗಿ ಶಿಲ್ಪಾ ಶೆಟ್ಟಿ ಆರೋಪಿಸಿದ್ದಾರೆ.

ಇದನ್ನೂ ಓದಿ: ‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್​ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

(Actor Shilpa Shetty Kundra approached the Bombay High Court seeking to restrain publishing defamatory content against her)

Published On - 10:01 pm, Thu, 29 July 21