‘ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ‘; ಬರ್ತ್​ಡೇ ದಿನ ಅಭಿಮಾನಿಗಳ ಆಮಂತ್ರಿಸಿದ ಶ್ರೀಮುರಳಿ

ಈ ಬಾರಿ ಶ್ರೀಮುರಳಿ ಕುಟುಂಬದಲ್ಲಿ ಒಂದು ಕಹಿ ಘಟನೆ ನಡೆಯಿತು. ಆದಾಗ್ಯೂ ಶ್ರೀಮುರಳಿ ಅವರು ಈ ಬಾರಿ ಬರ್ತ್​​ಡೇನ ಅಭಿಮಾನಿಗಳಿಗೋಸ್ಕರ ಆಚರಿಸಿಕೊಳ್ಳು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ‘; ಬರ್ತ್​ಡೇ ದಿನ ಅಭಿಮಾನಿಗಳ ಆಮಂತ್ರಿಸಿದ ಶ್ರೀಮುರಳಿ
ಶ್ರೀಮುರಳಿ

Updated on: Dec 16, 2023 | 11:59 AM

ನಟ ಶ್ರೀಮುರಳಿ (Srimurali) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಡಿಸೆಂಬರ್ 17ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮೆಸೇಜ್ ನೀಡಿದ್ದಾರೆ. ಭೇಟಿ ಮಾಡಲು ಬರುವ ಅಭಿಮಾನಿಗಳ ಬಳಿ ಶ್ರೀಮುರಳಿ ವಿಶೇಷ ಮನವಿ ಒಂದನ್ನು ಮಾಡಿಕೊಂಡಿದ್ದಾರೆ.

ಈ ಬಾರಿ ಶ್ರೀಮುರಳಿ ಕುಟುಂಬದಲ್ಲಿ ಒಂದು ಕಹಿ ಘಟನೆ ನಡೆಯಿತು. ಅವರ ಸಹೋದರ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಅಕಾಲಿಕ ಮರಣ ಹೊಂದಿದರು. ಈ ನೋವು ಸದ್ಯಕ್ಕೆ ಮರೆ ಆಗುವಂಥದ್ದಲ್ಲ. ಆದಾಗ್ಯೂ ಶ್ರೀಮುರಳಿ ಅವರು ಈ ಬಾರಿ ಬರ್ತ್​​ಡೇನ ಅಭಿಮಾನಿಗಳಿಗೋಸ್ಕರ ಆಚರಿಸಿಕೊಳ್ಳು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ಅಭಿಮಾನಿಗಳೇ ಇಷ್ಟು ವರ್ಷ ನನ್ನ ಬರ್ತ್​ಡೇಗೆ ಸೇರೋಕೆ ಆಗಿರಲಿಲ್ಲ. ಯಾಕೆ ಅನ್ನೋದು ನಿಮಗೆ ಗೊತ್ತು. ಈ ಬಾರಿಯೂ ಸೇರೋ ಪರಿಸ್ಥಿತಿ ಇರಲಿಲ್ಲ. ಆದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ನೀವು ಕೊಡೋ ಪ್ರೀತಿಗೆ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದೇನೆ. ಎಲ್ಲವೂ ನಿಮ್ಮ ಆಜ್ಞೆಯಂತೆ ನಡೆಯಬೇಕು. ಡಿಸೆಂಬರ್ 17ರಂದು ವಸಂತ ನಗರದಲ್ಲಿರುವ ಮಿಲ್ಲರ್ಸ್​ ರೋಡ್​ನ ದೇವರಾಜ್ ಅರಸ ಭವನದಲ್ಲಿ ಬೆಳಿಗ್ಗೆ ಹತ್ತೂವರೆ ನಂತರ ಭೇಟಿ ಮಾಡುವೆ’ ಎಂದಿದ್ದಾರೆ ಶ್ರೀಮುರಳಿ.


ಇದನ್ನೂ ಓದಿ: ‘ಕಲಾವಿದರನ್ನು ಕರೆಸಿ ಪ್ರತಿ ದಿನ ಕರ್ನಾಟಕ ಬಂದ್​ ಮಾಡ್ತೀರಾ?’; ಕಾವೇರಿ ಹೋರಾಟದ ಬಗ್ಗೆ ಶ್ರೀಮುರಳಿ ಮಾತು

‘ನನ್ನದೊಂದು ಕೋರಿಕೆ. ಯಾರೂ ಹಾರ ಉಡುಗೊರೆ ತರಬೇಡಿ. ಅದು ನಿಮ್ಮ ದುಡಿಮೆ. ಅದರಿಂದ ನಿಮಗೆ ಒಳ್ಳೆಯದಾಗಬೇಕು. ಖಾಲಿ ಕೈಯಲ್ಲಿ ಬನ್ನಿ. ಯಾವುದೇ ವಿಚಾರದಲ್ಲಿ ಖರ್ಚು ಮಾಡಬೇಡಿ. ನಿಮಗಾಗಿ ಸೇರುತ್ತಾ ಇರೋದು. ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ’ ಎಂದು ಶ್ರೀಮುರಳಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:44 am, Sat, 16 December 23