‘ಕಲಾವಿದರನ್ನು ಕರೆಸಿ ಪ್ರತಿ ದಿನ ಕರ್ನಾಟಕ ಬಂದ್​ ಮಾಡ್ತೀರಾ?’; ಕಾವೇರಿ ಹೋರಾಟದ ಬಗ್ಗೆ ಶ್ರೀಮುರಳಿ ಮಾತು

‘ಪರಭಾಷೆಯ ಜನರ ಬಗ್ಗೆ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ನೀರಿನ ವಿಚಾರ ಬಂದಾಗ ಸುಮ್ಮನೆ ಕೂರೋಕೆ ಆಗಲ್ಲ. ನಮ್ಮ ಜನರ ಆದ್ಯತೆ ಮೊದಲು. ಆಮೇಲೆ ಬೇರೆಯವರಿಗೆ ಕೊಡೋಣ. ನೀರು ಕೊಡಲ್ಲ ಅಂತ ನಾವು ಹೇಳಲ್ಲ. ಸ್ವಲ್ಪ ತೆಗೆದುಕೊಳ್ಳಿ. ಎಲ್ಲವನ್ನೂ ಯಾಕೆ ಬಾಚಿಕೊಳ್ಳುತ್ತೀರಿ’ ಎಂದು ಶ್ರೀಮುರಳಿ ಪ್ರಶ್ನೆ ಮಾಡಿದ್ದಾರೆ.

‘ಕಲಾವಿದರನ್ನು ಕರೆಸಿ ಪ್ರತಿ ದಿನ ಕರ್ನಾಟಕ ಬಂದ್​ ಮಾಡ್ತೀರಾ?’; ಕಾವೇರಿ ಹೋರಾಟದ ಬಗ್ಗೆ ಶ್ರೀಮುರಳಿ ಮಾತು
ಶ್ರೀಮುರಳಿ
Follow us
Malatesh Jaggin
| Updated By: ಮದನ್​ ಕುಮಾರ್​

Updated on: Sep 29, 2023 | 5:01 PM

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ (Kannada Film Industry) ಅನೇಕ ಸೆಲೆಬ್ರಿಟಿಗಳು ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಶ್ರೀಮುರಳಿ, ಶಿವರಾಜ್​ಕುಮಾರ್​, ಉಪೇಂದ್ರ, ಧ್ರುವ ಸರ್ಜಾ, ಉಮಾಶ್ರೀ, ಶ್ರುತಿ, ಪೂಜಾ ಗಾಂಧಿ, ಹಂಸಲೇಖ, ದರ್ಶನ್​ ಸೇರಿದಂತೆ ಹಲವರು ಇದರಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ನಟ ಶ್ರೀಮುರಳಿ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ಕಾವೇರಿ ನೀರು (Cauvery Water) ಹಂಚಿಕೆಗೆ ಸಂಬಂಧಿಸಿದ ವಿವಾದದ ಕುರಿತು ತಮ್ಮ ಅನಿಸಿಕೆಗಳನ್ನು ಅವರು ಹಂಚಿಕೊಂಡಿದ್ದಾರೆ. ಡಾ. ರಾಜ್​ಕುಮಾರ್​ ಅವರನ್ನು ಈ ಸಂದರ್ಭದಲ್ಲಿ ಶ್ರೀಮುರಳಿ (Sri Murali) ನೆನಪಿಸಿಕೊಂಡಿದ್ದಾರೆ.

‘ಈ ಸಮಸ್ಯೆ ಹಲವಾರು ವರ್ಷಗಳಿಂದ ಎದುರಾಗುತ್ತಲೇ ಇದೆ. ಇಂದು ಕೂಡ ಇದೆ. ಮುಂದೆಯೂ ಸಮಸ್ಯೆ ಎದುರಾದರೆ ನಮ್ಮ ಗತಿ ಏನು ಅಂತ ನಮಗೆ ಭಯ ಉಂಟಾಗಿದೆ. ಸಂಬಂಧಪಟ್ಟವರು ಆದಷ್ಟು ಬೇಗ ಇದಕ್ಕೆ ಒಂದು ಪರಿಹಾರ ಕೊಡಿ. ನಾನು ಈಗ ಡಾ. ರಾಜ್​ಕುಮಾರ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಅವರು ಇದ್ದಿದ್ದರೆ ಈ ವಿಚಾರದಲ್ಲಿ ಹೋರಾಟ ಬೇರೆ ರೀತಿಯಲ್ಲಿ ಆಗುತ್ತಿತ್ತು’ ಎಂದು ಶ್ರೀಮುರಳಿ ಹೇಳಿದ್ದಾರೆ.

ಇದನ್ನೂ ಓದಿ: ಕಾವೇರಿ ಮತ್ತು ಕನ್ನಡ ಚಿತ್ರರಂಗದ ಸಮಸ್ಯೆ ಬಗ್ಗೆ ನಿಷ್ಠುರವಾದ ಸತ್ಯ ತೆರೆದಿಟ್ಟ ನಿರ್ದೇಶಕ ಶಶಾಂಕ್

‘ನಮ್ಮ ರೈತರು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂ ಓರ್ವ ರೈತ ಮಗಳು ಕಣ್ಣೀರು ಹಾಕುತ್ತಿದ್ದಾಳೆ. ಇನ್ನು ಕೆಲವರು ಉರುಳು ಸೇವೆ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿಯೂ ಅರ್ಥ ಆಗದಿದ್ದರೆ ನಾವು ಹೇಗೆ ಅರ್ಥ ಮಾಡಿಸಬೇಕು? ಬೀದಿಗೆ ಇಳಿದರೆ ಮಾತ್ರ ಪ್ರತಿಭಟನೆ ಅಲ್ಲ. ನಮಗೂ ಹೃದಯ ಇದೆ. ನಮಗೂ ಫೀಲ್​ ಆಗುತ್ತದೆ. ಮುಂದೆ ಏನು ಮಾಡಬೇಕು ಅಂತ ನಾವೂ ಯೋಚನೆ ಮಾಡುತ್ತಿದ್ದೇವೆ. ಕಲಾವಿದರ ಒಗ್ಗಟ್ಟಿನ ಪ್ರಶ್ನೆ ಬಂದಾಗ ಈ ರೀತಿ ಸೇರಿಕೊಳ್ಳುತ್ತೇವೆ. ಹಾಗಂತ ಪ್ರತಿ ದಿನ ಕಲಾವಿದರನ್ನು ಕರೆಸಿ ಬಂದ್​ ಮಾಡಿಸುತ್ತೀರಾ? ಕರ್ನಾಟಕವನ್ನು ನಿತ್ಯವೂ ಬಂದ್​ ಮಾಡೋಕೆ ಆಗುತ್ತಾ? ಅದನ್ನು ಮಾಡಬೇಕ’ ಎಂದು ಶ್ರೀಮುರಳಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ದಾಳಿಕೋರರು ಪ್ರತಿಭಟನೆ ಮಾಡಿದರೆ ಹಿಂಸೆ ಆಗುತ್ತದೆ’: ಹಂಸಲೇಖ ಹೇಳಿದ್ದು ಯಾರ ಬಗ್ಗೆ?

‘ಅನ್ಯಭಾಷೆಯ ಜನರ ಬಗ್ಗೆ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ನೀರಿನ ವಿಚಾರ ಬಂದಾಗ ಸುಮ್ಮನೆ ಕೂರೋಕೆ ಆಗಲ್ಲ. ನಮ್ಮ ಜನರ ಆದ್ಯತೆ ಮೊದಲು. ಆಮೇಲೆ ಬೇರೆಯವರಿಗೆ ಕೊಡೋಣ. ನೀರು ಕೊಡಲ್ಲ ಅಂತ ನಾವು ಹೇಳಲ್ಲ. ಸ್ವಲ್ಪ ತೆಗೆದುಕೊಳ್ಳಿ. ಎಲ್ಲವನ್ನೂ ಯಾಕೆ ಬಾಚಿಕೊಳ್ಳುತ್ತೀರಿ? ಪ್ರತಿಭಟನೆಯಲ್ಲಿ ಕಲಾವಿದರು ಭಾಗಿ ಆಗುವುದರಿಂದ ಬೇರೆ ರಾಜ್ಯಗಳಲ್ಲಿ ನಮ್ಮ ಸಿನಿಮಾಗಳಿಗೆ ಎಷ್ಟು ಎಫೆಕ್ಟ್​ ಆಗುತ್ತದೆಯೋ ನನಗೆ ಗೊತ್ತಿಲ್ಲ. ಇದಕ್ಕೆ ಆದಷ್ಟು ಬೇಗ ಪರಿಹಾರ ಸಿಕ್ಕರೆ ಒಳ್ಳೆಯದು’ ಎಂದಿದ್ದಾರೆ ಶ್ರೀಮುರಳಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು