‘ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿ’ ರಿಲೀಸ್ ದಿನಾಂಕದಲ್ಲಿ ಬದಲಾವಣೆ; ಇಲ್ಲಿದೆ ಹೊಸ ಡೇಟ್
ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ಎಂ. ರಾವ್ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ‘ಸೈಡ್ ಬಿ’ ನೋಡಲು ಕಾದಿರುವ ಅಭಿಮಾನಿಗಳಿಗೆ ಹೊಸ ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡಲಾಗಿದೆ. ಒಂದು ವಾರ ತಡವಾಗಿ ಈ ಚಿತ್ರ ಬಿಡುಗಡೆ ಆಗಲಿದೆ.
‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ (Rakshit Shetty) ನಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತು. ಸೈಡ್ ಎ ಮತ್ತು ಸೈಡ್ ಬಿ ಎಂದು ಎರಡು ಭಾಗಗಳಲ್ಲಿ ಈ ಸಿನಿಮಾ ಮೂಡಿಬಂದಿದೆ. ಸೆಪ್ಟೆಂಬರ್ 1ರಂದು ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ’ (SSE Side A) ಬಿಡುಗಡೆ ಆಯಿತು. ಅಕ್ಟೋಬರ್ 20ರಂದು ಸೈಡ್ ಬಿ ಬಿಡುಗಡೆ ಮಾಡಲು ಚಿತ್ರತಂಡ ಆಲೋಚಿಸಿತ್ತು. ಆದರೆ ಈಗ ಆ ಪ್ಲ್ಯಾನ್ನಲ್ಲಿ ಬದಲಾವಣೆ ಆಗಿದೆ. ಒಂದು ವಾರ ತಡವಾಗಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಅಂದರೆ, ಅಕ್ಟೋಬರ್ 20ರ ಬದಲಿಗೆ ಅಕ್ಟೋಬರ್ 27ರಂದು ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿ’ (Sapta Sagaradaache Ello Side B) ರಿಲೀಸ್ ಆಗಲಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ.
ರಿಲೀಸ್ ಡೇಟ್ ಬದಲಾವಣೆ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಅವರು ‘ಟಿವಿ9 ಕನ್ನಡ ಡಿಜಿಟಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ದಸರಾ ಹಬ್ಬದ ಸಂದರ್ಭದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶಿವಣ್ಣ ನಟಿಸಿರುವ ‘ಘೋಸ್ಟ್’ ಬಿಡುಗಡೆ ಆಗುತ್ತಿದೆ. ಹಾಗಾಗಿ ರಶ್ ಬೇಡ ಎನಿಸಿತು. ಅಲ್ಲದೇ ತೆಲುಗಿನಲ್ಲಿ ‘ಸೈಡ್ ಎ’ ಇತ್ತೀಚೆಗೆಷ್ಟೇ ಬಿಡುಗಡೆ ಆಗಿದೆ. ಒಟಿಟಿಯಲ್ಲೂ ಈಗತಾನೆ ಬಂದಿದೆ. ‘ಸೈಡ್ ಎ’ ನೋಡಲು ಆ ಪ್ರೇಕ್ಷಕರಿಗೂ ಸಮಯ ನೀಡಬೇಕು. ಸ್ವಲ್ಪ ಗ್ಯಾಪ್ ಇರಲಿ ಎಂಬ ಕಾರಣಕ್ಕೆ ಒಂದು ವಾರ ಮುಂದೂಡಿದ್ದೇವೆ’ ಎಂದಿದ್ದಾರೆ ಹೇಮಂತ್ ಎಂ. ರಾವ್.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಮರುಳಾದ ನಟಿ ಸಮಂತಾ; ತಂಡದ ಬಗ್ಗೆ ಮೆಚ್ಚುಗೆ
‘ನಮ್ಮ ಪಯಣದ ಹಾದಿಯಲ್ಲಿ ಸಣ್ಣ ಬದಲಾವಣೆ ಆಗಿದೆ. ಆದರೆ ತಲುಪುವ ಗುರಿ ಬದಲಾಗಿಲ್ಲ. ಅಕ್ಟೋಬರ್ 27ರಂದು ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿ’ ಸಿನಿಮಾ ನಿಮ್ಮದಾಗಲಿದೆ. ಪ್ರೀತಿ ಮತ್ತು ಬೆಂಬಲದೊಂದಿಗೆ ಎರಡನೇ ಚಾಪ್ಟರ್ ಅನ್ನು ನೀವು ಸ್ವೀಕರಿಸುತ್ತೀರಿ ಎಂಬ ಭರವಸೆ ಇದೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ರಿಲೀಸ್ ದಿನಾಂಕದ ಬದಲಾವಣೆ ಬಗ್ಗೆ ರಕ್ಷಿತ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
A slight detour on our journey, but the destination remains the same! 😊
Sapta Sagaradaache Ello – Side B will be yours on the 27th of October. We hope you receive the next chapter with just as much love and support 🤗#SSESideBOct27 @hemanthrao11 @rukminitweets… pic.twitter.com/neFE17ZiLF
— Rakshit Shetty (@rakshitshetty) September 28, 2023
ಒಂದೇ ಕಥೆಯನ್ನು ಎರಡು ಪಾರ್ಟ್ಗಳಲ್ಲಿ ಹೇಳುವ ಟ್ರೆಂಡ್ ನಡೆಯುತ್ತಿದೆ. ‘ಬಾಹುಬಲಿ’, ‘ಕೆಜಿಎಫ್’, ‘ಪುಷ್ಪ’ ಮುಂತಾದ ಸಿನಿಮಾಗಳು ಈ ಟ್ರೆಂಡ್ ಫಾಲೋ ಮಾಡಿವೆ. ಅದೇ ರೀತಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕಥೆಯನ್ನು ಕೂಡ ಎರಡು ಭಾಗಗಳಲ್ಲಿ ಹೇಳಲಾಗುತ್ತಿದೆ. ‘ಸೈಡ್ ಎ’ ಚಿತ್ರದಲ್ಲಿ ಅರ್ಧ ಕಥೆ ಬಯಲಾಗಿದೆ. ‘ಸೈಡ್ ಬಿ’ ಚಿತ್ರದಲ್ಲಿ ಇನ್ನುಳಿದ ಕಥೆಯನ್ನು ತೋರಿಸಲಾಗುತ್ತದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ; ಸೈಡ್ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ
ರಕ್ಷಿತ್ ಶೆಟ್ಟಿ ಅವರ ಪ್ರತಿ ಸಿನಿಮಾ ಕೂಡ ಡಿಫರೆಂಟ್ ಆಗಿರುತ್ತದೆ. ಹಾಗೆಯೇ ನಿರ್ದೇಶಕ ಹೇಮಂತ್ ಎಂ. ರಾವ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಜನರಿಗೆ ನಟಿ ರುಕ್ಮಿಣಿ ವಸಂತ್ ಮತ್ತು ರಕ್ಷಿತ್ ಶೆಟ್ಟಿ ಅವರ ಕೆಮಿಸ್ಟ್ರಿ ಇಷ್ಟ ಆಗಿದೆ. ‘ಸೈಡ್ ಬಿ’ನಲ್ಲಿ ಚೈತ್ರಾ ಆಚಾರ್ ಕೂಡ ನಟಿಸಿದ್ದಾರೆ. ಆ ಕಾರಣದಿಂದಲೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.