‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ

Sapta Sagaradaache Ello Review: ನಾಯಕ-ನಾಯಕಿ ನಡುವಿನ ಪ್ರೇಮ ಕಹಾನಿಯನ್ನು ತೋರಿಸಲು ನಿರ್ದೇಶಕರು ಜಾಸ್ತಿ ಒತ್ತು ನೀಡಿದ್ದಾರೆ. ತೀವ್ರವಾದ ಲವ್​ ಸ್ಟೋರಿ ಬಯಸುವ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗುತ್ತದೆ. ಈ ಪ್ರೇಮಿಗಳ ಪಾತ್ರಕ್ಕೆ ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರ ಜೋಡಿ ಬಹಳ ಚೆನ್ನಾಗಿ ಹೊಂದಿಕೆ ಆಗಿದೆ.

‘ಸಪ್ತ ಸಾಗರದಾಚೆ ಎಲ್ಲೋ - ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ
ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​
Follow us
ಮದನ್​ ಕುಮಾರ್​
|

Updated on:Aug 31, 2023 | 11:54 AM

ಚಿತ್ರ: ಸಪ್ತ ಸಾಗರದಾಚೆ ಎಲ್ಲೋ (ಸೈಡ್​ ಎ). ನಿರ್ಮಾಣ: ಪರಂವಾ ಪಿಕ್ಚರ್ಸ್​. ನಿರ್ದೇಶನ: ಹೇಮಂತ್​ ಎಂ. ರಾವ್. ಪಾತ್ರವರ್ಗ: ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​, ರಮೇಶ್​ ಇಂದಿರಾ, ಅವಿನಾಶ್​, ಶರತ್​ ಲೋಹಿತಾಶ್ವ, ಅಚ್ಯುತ್​ ಕುಮಾರ್​, ಪವಿತ್ರಾ ಲೋಕೇಶ್​ ಮುಂತಾದವರು. ಸ್ಟಾರ್​: 3/5

ನಟ ರಕ್ಷಿತ್​ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್​ ಎಂ. ರಾವ್ (Hemanth M Rao)​ ಅವರದ್ದು ಹಿಟ್​ ಕಾಂಬಿನೇಷನ್​. ಅವರಿಬ್ಬರು ಒಟ್ಟಾಗಿ ಮಾಡಿದ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಜನಮನ ಗೆದ್ದಿತ್ತು. ಈಗ ಅವರ ಕಾಂಬಿನೇಷನ್​ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ (ಸೈಡ್​ ಎ) ಸಿನಿಮಾ ಮೂಡಿಬಂದಿದೆ. ಯಾವುದೇ ಅವಸರ ಇಲ್ಲದೇ ಕಥೆಯನ್ನು ನಿರೂಪಿಸುವುದು ಹೇಮಂತ್​ ಎಂ. ರಾವ್​ ಅವರ ಟ್ರೇಡ್​ ಮಾರ್ಕ್​. ಅದನ್ನು ಅವರು ಈ ಬಾರಿಯೂ ಮುಂದುವರಿಸಿದ್ದಾರೆ. ಒಂದು ಗಾಢವಾದ ಪ್ರೇಮಕಥೆಯನ್ನು ಅವರು ಈ ಸಿನಿಮಾದಲ್ಲಿ ಹೇಳಿದ್ದಾರೆ. ಆ ಕಥೆಗೆ ರಕ್ಷಿತ್​ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್​ ಮುಂತಾದ ಕಲಾವಿದರು ಜೀವ ತುಂಬಿದ್ದಾರೆ. ಈ ಸಿನಿಮಾದಲ್ಲಿ ಏನೆಲ್ಲ ಇದೆ? ಯಾವ ಅಂಶಗಳು ಹೈಲೈಟ್​ ಆಗಿವೆ? ಕಲಾವಿದರ ನಟನೆ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ವಿಮರ್ಶೆಯಲ್ಲಿದೆ ಉತ್ತರ..

ಮನು (ರಕ್ಷಿತ್​ ಶೆಟ್ಟಿ) ಮತ್ತು ಪ್ರಿಯಾ (ರುಕ್ಮಿಣಿ ವಸಂತ್​) ಎಂಬ ಇಬ್ಬರು ಮಧ್ಯಮ ವರ್ಗದ ಪ್ರೇಮಿಗಳ ಕಹಾನಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿದೆ. ಒಂದಷ್ಟು ಅನಿರೀಕ್ಷಿತ ಘಟನೆಗಳ ಕಾರಣದಿಂದ ಮನು ಜೈಲು ಸೇರುತ್ತಾನೆ. ಆ ಕಷ್ಟದ ಸಂದರ್ಭದಲ್ಲಿ ಈ ಪ್ರೇಮಿಗಳ ನಂಬಿಕೆ ಎಷ್ಟು ಗಟ್ಟಿಯಾಗಿರುತ್ತದೆ? ಮನು ಮಾಡಿದ ತಪ್ಪು ಏನು? ಅಂತಿಮವಾಗಿ ಆ ಕಷ್ಟದಿಂದ ಅವರು ಹೊರಬರುತ್ತಾರೋ ಇಲ್ಲವೋ ಎಂಬುದು ಈ ಸಿನಿಮಾದ ಕಥೆ. ಆದರೆ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕಹಾನಿಯನ್ನು ಅವರು 2ನೇ ಪಾರ್ಟ್​ನಲ್ಲಿ, ಅಂದರೆ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್​ ಬಿ’ ಸಿನಿಮಾದಲ್ಲಿ ಹೇಳಲಿದ್ದಾರೆ.

ಇದನ್ನೂ ಓದಿ: Toby Review: ಮಾತನಾಡದೆ ಮನಸ್ಸಿಗೆ ನಾಟುವ ‘ಟೋಬಿ’; ಇಲ್ಲಿದೆ ಒಂದಷ್ಟು ಪ್ಲಸ್​, ಇನ್ನೊಂದಿಷ್ಟು ಮೈನಸ್​

ಈ ಸಿನಿಮಾದಲ್ಲಿ ಪ್ರೀತಿ-ಪ್ರೇಮ, ಬ್ರೇಕಪ್​, ಕ್ರೈಂ, ಕಪಟತನ ಇತ್ಯಾದಿ ಅಂಶಗಳು ಇವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಾಯಕ-ನಾಯಕಿ ನಡುವಿನ ಪ್ರೇಮ್​ ಕಹಾನಿಯನ್ನು ತೋರಿಸಲು ನಿರ್ದೇಶಕರು ಜಾಸ್ತಿ ಒತ್ತು ನೀಡಿದ್ದಾರೆ. ಲವ್​ ಸ್ಟೋರಿ ಬಯಸುವ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗುತ್ತದೆ. ಈ ಪ್ರೇಮಿಗಳ ಪಾತ್ರಕ್ಕೆ ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರ ಜೋಡಿ ಬಹಳ ಚೆನ್ನಾಗಿ ಹೊಂದಿಕೆ ಆಗಿದೆ. ಪಕ್ಕಾ ಮಿಡಲ್​ ಕ್ಲಾಸ್​ ಹುಡುಗಿಯ ರೀತಿಯಲ್ಲಿ ರುಕ್ಮಿಣಿ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಕ್ಷಿತ್​ ಶೆಟ್ಟಿ ಕೂಡ ಗಮನಾರ್ಹವಾಗಿ ನಟಿಸಿದ್ದಾರೆ. ಜೈಲಿನಲ್ಲಿ ಕಥಾನಾಯಕ ಎದುರಿಸುವ ಕರಾಳ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಆ ಸನ್ನಿವೇಶಗಳಲ್ಲಿ ನಟ ರಮೇಶ್​ ಇಂದಿರಾ ಅವರು ಹೆಚ್ಚು ಮೈಲೇಜ್​ ಪಡೆದಿದ್ದಾರೆ. ಶರತ್​ ಲೋಹಿತಾಶ್ವ ಅವರ ಪಾತ್ರ ಸರ್ಪ್ರೈಸಿಂಗ್​ ಆಗಿದೆ.

ಇದನ್ನೂ ಓದಿ: Kausalya Supraja Rama Review: ನೀವು ನಿಜವಾದ ಗಂಡಸು ಹೌದಾ? ಕೌಸಲ್ಯ ಸುಪ್ರಜಾ ರಾಮ; ಚಿತ್ರ ನೋಡಿದ್ರೆ ಬಯಲಾಗುತ್ತೆ ಸತ್ಯ

ಮೊದಲೇ ಹೇಳಿದಂತೆ ಇದು ಎರಡು ಪಾರ್ಟ್​ನಲ್ಲಿ ಹೇಳಲಾಗುತ್ತಿರುವ ಕಥೆ. ಹಾಗೆ ನೋಡಿದರೆ ಮೊದಲ ಪಾರ್ಟ್​ನ ಬಹುತೇಕ ದೃಶ್ಯಗಳು ಒಂದು ಸುದೀರ್ಘ ಪರಿಚಯದಂತೆ ಗೋಚರವಾಗಿದೆ. ಪ್ರಮುಖ ಪಾತ್ರಗಳನ್ನು ಮತ್ತು ಅವುಗಳ ಗುರಿ, ಉದ್ದೇಶ, ಆಸೆ, ಆಕಾಂಕ್ಷೆಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವ ಸಲುವಾಗಿ ಹೆಚ್ಚಿನ ಸಮಯವನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ. ಆ ಎಲ್ಲ ದೃಶ್ಯಗಳಲ್ಲಿ ಭಾವ ತೀವ್ರತೆಯನ್ನು ಕಟ್ಟಿಕೊಡಲು ನಿರ್ದೇಶಕರು ಮಾಡಿರುವ ಪ್ರಯತ್ನ ಅಮೋಘವಾಗಿದೆ. ಆದರೆ ಅದು ಅಗತ್ಯಕಿಂತಲೂ ಹೆಚ್ಚು ಸುದೀರ್ಘವಾಯಿತೇನೋ ಎಂಬ ಭಾವ ಮೂಡುತ್ತದೆ. ಅಸಲಿ ಕಥೆ ತೆರೆದುಕೊಳ್ಳುವ ವೇಳೆಗೆ ‘ಸೈಡ್​ ಎ’ ಕ್ಲೈಮ್ಯಾಕ್ಸ್​ ಹಂತವನ್ನು ತಲುಪುತ್ತದೆ. ಆಗ ಒಂದು ಬಗೆಯ ಅರೆಬರೆ ಭಾವ ಆವರಿಸುತ್ತದೆ. ಇನ್ನುಳಿದ ಕಥೆವನ್ನು ನೋಡಲು ‘ಸೈಡ್​ ಬಿ’ ಬರುವ ತನಕ ಕಾಯಬೇಕು.

ಇದನ್ನೂ ಓದಿ: ನಿರ್ದೇಶಕರಿಗೆ ಮೆಸೇಜ್​ ಮಾಡಿ ರಕ್ಷಿತ್​ ಶೆಟ್ಟಿ ನಟನೆಯ ಸಿನಿಮಾದಲ್ಲಿ ಚಾನ್ಸ್​ ಕೇಳಿದ ರುಕ್ಮಿಣಿ ವಸಂತ್​

ಇದು ಅಪ್ಪಟ ಪ್ರೇಮಕಥೆಯ ಸಿನಿಮಾ ಆಗಿದ್ದರೂ ಕೂಡ ಹಾಡುಗಳನ್ನು ತುರುಕುವ ಪ್ರಯತ್ನ ಆಗಿಲ್ಲ. ಸಂಗೀತ ನಿರ್ದೇಶಕ ಚರಣ್​ ರಾಜ್​ ಅವರು ಹಿನ್ನೆಲೆ ಸಂಗೀತದಲ್ಲೇ ಹೆಚ್ಚು ಸೆಳೆದುಕೊಳ್ಳುತ್ತಾರೆ. ಅಗತ್ಯ ಇರುವ ಕಡೆ ಅವರು ಮೌನದ ಭಾಷೆಗೆ ಜಾಗ ಮಾಡಿಕೊಟ್ಟಿದ್ದಾರೆ. ಅದ್ವೈತ್​ ಗುರುಮೂರ್ತಿ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಈ ಸಿನಿಮಾದಲ್ಲಿನ ಸಂಭಾಷಣೆ ಕೆಲವೊಮ್ಮೆ ಸರಳತೆಯ ಕಾರಣದಿಂದ ಕಾಡುತ್ತದೆ. ಕೃತಕ ಎನಿಸಿದಾಗ ಕಾಡುವ ಗುಣವನ್ನು ಕಳೆದುಕೊಳ್ಳುತ್ತದೆ.

‘ಸೈಡ್​ ಬಿ’ ಬಗ್ಗೆ ನಿರೀಕ್ಷೆ ಮೂಡುವ ರೀತಿಯಲ್ಲಿ ‘ಸೈಡ್​ ಎ’ ಕೊನೆಯಾಗಿದೆ. ಮನು ಮತ್ತು ಪ್ರಿಯಾ ಪ್ರೇಮ್​ ಕಹಾನಿ ಏನಾಯಿತು? ಇಬ್ಬರ ನಡುವೆ ಸುರಭಿ (ಚೈತ್ರಾ ಆಚಾರ್​) ಪಾತ್ರ ಯಾಕೆ ಎಂಟ್ರಿ ನೀಡುತ್ತದೆ? ಅಂತಿಮವಾಗಿ ಮನು ಮನಸ್ಸಿನಲ್ಲಿದ್ದ ಪ್ರೀತಿ ಯಾರ ಮಡಿಲಿಗೆ ಸೇರುತ್ತದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಹುಟ್ಟುಹಾಕುವಲ್ಲಿ ‘ಸೈಡ್​ ಎ’ ಕ್ಲೈಮ್ಯಾಕ್ಸ್​ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Thu, 31 August 23

ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ