
ಇದು ಸೋಶಿಯಲ್ ಮೀಡಿಯಾ (Social Media) ಯುಗ. ಸತ್ಯ ಹಾಗೂ ಸುಳ್ಳು ಎರಡೂ ಬೇಗ ಪ್ರಸಾರ ಆಗುತ್ತದೆ. ಸಿನಿಮಾದಲ್ಲಿ ಬರುವ ಕೆಲ ದೃಶ್ಯಗಳು ವೈರಲ್ ಆಗಿ ಅಧ್ವಾನ ಸೃಷ್ಟಿಸಿದ ಉದಾಹರಣೆ ಸಾಕಷ್ಟು ಇದೆ. ಈಗ ಅನಿಕಾ ಸುರೇಂದ್ರನ್ (Anikha Surendran) ಅವರು ಇದೇ ರೀತಿಯ ತೊಂದರೆ ಅನುಭವಿಸಿದ್ದಾರೆ. ಅವರು ಮೃತಪಟ್ಟಿದ್ದಾರೆ ಎನ್ನುವ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಅಭಿಮಾನಿಗಳಿಗೆ ಆತಂಕ ಆಗಿದೆ. ನಂತರ ಅಸಲಿ ವಿಚಾರ ತಿಳಿದು ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಅನಿಕಾ ಸುರೇಂದ್ರನ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಅಜಿತ್ ನಟನೆಯ ‘ಯೆನ್ನೈ ಅರಿಂಧಾಲ್’ ಮತ್ತು ‘ವಿಶ್ವಾಸಮ್’ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡರು. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಅವರು ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಲಿಪ್ ಲಾಕ್ ಮಾಡಿ ಗಮನ ಸೆಳೆದಿದ್ದಾರೆ.
ಅನಿಕಾ ಸುರೇಂದ್ರನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಲಕಲಾವಿದೆಯಾಗಿ ಅವರು ಎಲ್ಲರಿಗೂ ಇಷ್ಟವಾಗಿದ್ದರು. ಈಗ ನಾಯಕಿ ಆಗಿ ಮಿಂಚುತ್ತಿದ್ದಾರೆ. ಹೀಗಿರುವಾಗಲೇ ಅವರು ಮೃತಪಟ್ಟಿದ್ದಾರೆ ಎನ್ನುವ ಕರಪತ್ರ ವೈರಲ್ ಆಗಿದೆ. ಇದನ್ನು ನೋಡಿ ಅನೇಕರು ಶಾಕ್ ಆಗಿದ್ದರು. ಇದು ಸಿನಿಮಾದಲ್ಲಿ ಬರುವ ಒಂದು ದೃಶ್ಯ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Ankita Vikraman: ಬಾಯ್ಫ್ರೆಂಡ್ನಿಂದ ಹಲ್ಲೆ, ಚಿತ್ರ ಹಂಚಿಕೊಂಡ ನಟಿ ಅನಿಕಾ
ಅನಿಕಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟರ್‌ನಲ್ಲಿದೆ. ಅನಿಕಾ ಅವರ ಫೋಟೋ ಈ ಪೋಸ್ಟರ್‌ನಲ್ಲಿದೆ. ‘ನಂದಿನಿ ಭಾನುವಾರ 16.07.2023ರಂದು ರಾತ್ರಿ 11.30 ಗಂಟೆಗೆ ಅಕಾಲಿಕ ಮರಣ ಹೊಂದಿದರು. ಅವರಿಗೆ ಶ್ರದ್ಧಾಂಜಲಿ’ ಎಂದು ಪೋಸ್ಟರ್‌ನಲ್ಲಿದೆ. ಇದನ್ನು ನೋಡಿದ ಅಭಿಮಾನಿಗಳು ಗಾಬರಿ ಮತ್ತು ಗೊಂದಲಕ್ಕೆ ಒಳಗಾಗಿದ್ದರು. ಬಳಿಕ ಇದು ಸಿನಿಮಾಗೆ ಸಂಬಂಧಿಸಿದ್ದು ಎಂದು ತಿಳಿದು ಅಭಿಮಾನಿಗಳಿಗೆ ರಿಲೀಫ್ ಆಗಿದೆ.
ಅನಿಕಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಅವರು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ‘ಓ ಮೈ ಡಾರ್ಲಿಂಗ್’ ಹೆಸರಿನ ಮಲಯಾಳಂ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರದಲ್ಲಿ ಅವರು ಲಿಪ್ಲಾಕ್ ದೃಶ್ಯ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ