Ankita Vikraman: ಬಾಯ್ಫ್ರೆಂಡ್ನಿಂದ ಹಲ್ಲೆ, ಚಿತ್ರ ಹಂಚಿಕೊಂಡ ನಟಿ ಅನಿಕಾ
ಬಾಯ್ಫ್ರೆಂಡ್ನಿಂದ ಸತತ ಹಲ್ಲೆಗೆ ಒಳಗಾಗಿರುವುದಾಗಿ ಹೇಳಿಕೊಂಡಿರುವ ನಟಿ ಅನಿಕಾ ವಿಕ್ರಮನ್, ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಾಯ್ಫ್ರೆಂಡ್ನಿಂದ (Boyfriend) ಸತತ ಹಲ್ಲೆಗೆ ಒಳಗಾಗಿರುವುದಾಗಿ ತಮಿಳಿನ ಯುವ ನಟಿ ಅನಿಕಾ ವಿಕ್ರಮನ್ (Anika Vikraman) ಹೇಳಿದ್ದು, ಸಾಕ್ಷಿಯಾಗಿ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನಿಕಾರ ಕಣ್ಣು, ತೋಳು, ಎದೆಯ ಭಾಗಗಳಿಗೆ ತೀವ್ರ ಗಾಯಗಳಾಗಿರುವುದು ಚಿತ್ರದಿಂದ ತಿಳಿಯುತ್ತಿದೆ. ನಿನ್ನೆಯಷ್ಟೆ ಈ ಚಿತ್ರಗಳನ್ನು ಅನಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ತಾವು ಅಂಕಿತ್ ಪಿಳ್ಳೈ ಹೆಸರಿನ ವ್ಯಕ್ತಿಯನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸಿದ್ದು, ಆತ ವಿಷಕಾರಿ ಮನಸ್ಥಿತಿಯವನಾಗಿದ್ದ ಪ್ರತಿದಿನ ಆತ ನನ್ನನ್ನು ಹೊಯುತ್ತಿದ್ದ ಎಂದು ನಟಿ ಹೇಳಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ತಾವು ಈ ನೋವು ಅನುಭವಿಸುತ್ತಿರುವುದಾಗಿ ನಟಿ ಹೇಳಿದ್ದಾರೆ.
ಎರಡು ಬಾರಿ ಆತನ ವಿರುದ್ಧ ದೂರು ನೀಡಿದ್ದೇನೆ. ಮೊದಲಿಗೆ ಆತ ಚೆನ್ನೈನಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ ಆಗ ನಾನು ದೂರು ನೀಡಿದ್ದೆ. ಆಗ ಆತ ನನ್ನ ಕಾಲ ಮೇಲೆ ಬಿದ್ದು ಅಳುತ್ತಾ ಕ್ಷಮೆ ಕೇಳಿದ ನಾನು ಪೆದ್ದಿಯಂತೆ ಕ್ಷಮಿಸಿಬಿಟ್ಟೆ. ಆ ನಂತರ ಬೆಂಗಳೂರಿನಲ್ಲಿ ಹಲ್ಲೆ ಮಾಡಿದ ಅಲ್ಲಿಯೂ ದೂರು ನೀಡಿದ್ದೆ ಎಂದಿದ್ದಾರೆ ನಟಿ. ಆದರೆ ಯಾವ ಪೊಲೀಸ್ ಠಾಣೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.
ಆದರೆ ಆತ ಪೊಲೀಸರಿಗೆ ಹಣ ಕೊಟ್ಟು ಹೇಗೋ ತಪ್ಪಿಸಿಕೊಳ್ಳುತ್ತಿದ್ದ. ಆತ ನನ್ನ ಹೊಡೆಯುವಾಗ ಅದೆಷ್ಟು ಆತ್ಮವಿಶ್ವಾಸದಿಂದ ಹೊಡೆಯುತ್ತಿದ್ದನೆಂದರೆ ಪೊಲೀಸರು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿಯೇ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಕಳೆದ ಕೆಲ ವರ್ಷಗಳಿಂದ ನಾನು ಮೋಸಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನು ಅವನನ್ನು ಬಿಟ್ಟು ಬಿಡಲು ತೀರ್ಮಾನಿಸಿದೆ. ಆದರೆ ಆತ ನನ್ನನ್ನು ಬಿಡಲು ತಯಾರಿಲ್ಲ” ಎಂದಿದ್ದಾರೆ ನಟಿ.
ನಾನು ಶೂಟಿಂಗ್ಗೆ ಹೋಗದೇ ಇರಲೆಂದು ನನ್ನ ಮೊಬೈಲ್ ಒಡೆದು ಹಾಕಿದ. ಅದಕ್ಕೂ ಮುಂಚೆ ನನಗೆ ಗೊತ್ತಿಲ್ಲದೆ ನನ್ನ ವಾಟ್ಸ್ ಆಫ್ ಅನ್ನು ಅವನ ಲ್ಯಾಪ್ಟಾಪ್ಗೆ ಕನೆಕ್ಟ್ ಮಾಡಿಕೊಂಡು ನೋಡುತ್ತಿರುತ್ತಿದ್ದ. ಈಗ ಇದೆಲ್ಲದಕ್ಕಿಂತಲೂ ಮುಂದೆ ಹೋಗಿ, ನನಗೆ ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದಾನೆ. ಅವನ ಹಿಂಸೆಯಿಂದ ಆದ ಗಾಯಗಳು ಈಗ ತುಸು ನಯವಾಗಿವೆ. ನಾನೀಗ ಚಿತ್ರೀಕರಣಗಳಲ್ಲಿಯೂ ಭಾಗವಹಿಸುತ್ತಿದ್ದೇನೆ. ಮುಂದಿನ ವಾರದಿಂದ ನಿಯಮಿತವಾಗಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಚಿತ್ರಗಳನ್ನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ ನಟಿ ಅನಿಕಾ.
ಅನಿಕಾ ವಿಕ್ರಮನ್ ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆ ಹೆಸರಿನ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಈ ನಟಿ. ಆ ಬಳಿಕ ವಿಶಮಕರನ್, ಎಂಗ ಪಟ್ಟನ್ ಪರ್ತಿಯಾ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.