AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೆಡ್​ನಲ್ಲಿ ರೋಷನ್​, ಮನಸ್ಸಲ್ಲಿ ಭಾರ್ಗವ್​’; ವೈರಲ್ ಆಯ್ತು ನಿಹಾರಿಕಾ ಕೊನಿಡೆಲಾ ಡೈಲಾಗ್

Niharika Konidela: ವಿವಾಹದ ಬಳಿಕ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರು. ಈಗ ಅವರು ‘ಡೆಡ್​ ಪಿಕ್ಸೆಲ್​’ ಸೀರಿಸ್​ನಲ್ಲಿ ನಟಿಸಿದ್ದಾರೆ. ಈ ಸೀರಿಸ್​ನಲ್ಲಿ ಬರುವ ಡೈಲಾಗ್ ವೈರಲ್ ಆಗಿದೆ.

‘ಬೆಡ್​ನಲ್ಲಿ ರೋಷನ್​, ಮನಸ್ಸಲ್ಲಿ ಭಾರ್ಗವ್​’; ವೈರಲ್ ಆಯ್ತು ನಿಹಾರಿಕಾ ಕೊನಿಡೆಲಾ ಡೈಲಾಗ್
ರಾಜೇಶ್ ದುಗ್ಗುಮನೆ
|

Updated on: May 11, 2023 | 10:53 AM

Share

‘ಮೆಗಾ ಸ್ಟಾರ್​’ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ (Niharika Konidela) ಸದ್ಯ ಸುದ್ದಿಯಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ಚೈತನ್ಯ ಜಿವಿ ಅವರನ್ನು ಮದುವೆ ಆಗಿದ್ದ ನಿಹಾರಿಕಾ ಈಗ ಪತಿಯಿಂದ ಬೇರೆ ಆಗಿದ್ದಾರೆ ಎನ್ನಲಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಪತಿಯನ್ನು ಅನ್​ಫಾಲೋ ಮಾಡಿರೋದು, ಅವರ ಜೊತೆಗಿನ ಫೋಟೋ ಡಿಲೀಟ್ ಮಾಡಿರುವುದರಿಂದ ಅವರ ಡಿವೋರ್ಸ್ ವಿಚಾರ ಚರ್ಚೆಗೆ ಬಂದಿದೆ. ಹೀಗಿರುವಾಗಲೇ ನಿಹಾರಿಕಾ ಅವರು ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್ ಆಗುತ್ತಿದ್ದಾರೆ. ‘ಡೆಡ್ ಪಿಕ್ಸೆಲ್​’ (Dead Pixel) ಹೆಸರಿನ ಹೊಸ ವೆಬ್ ಸೀರಿಸ್​ನಲ್ಲಿ ನಿಹಾರಿಕಾ ನಟಿಸುತ್ತಿದ್ದಾರೆ. ಈ ಸೀರಿಸ್​ನ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಇದರಲ್ಲಿ ಬರುವ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

2016ರಲ್ಲಿ ರಿಲೀಸ್ ಆದ ‘ಒಕ ಮನಸು’ ಸಿನಿಮಾ ಮೂಲಕ ನಿಹಾರಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದು ಅವರು ನಟಿಸಿದ ಮೊದಲ ಸಿನಿಮಾ. ಸ್ಟಾರ್ ಕಿಡ್ ಆಗಿದ್ದರಿಂದ ಅವರಿಗೆ ಅವಕಾಶ ಸುಲಭವಾಗಿ ಸಿಕ್ಕಿತು. 2019ರಲ್ಲಿ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಿಹಾರಿಕಾ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.

ನಿಹಾರಿಕಾ ಮತ್ತು ಚೈತನ್ಯ ಅವರದ್ದು ಪ್ರೇಮ ವಿವಾಹ. 2020ರ ಡಿಸೆಂಬರ್ 9ರಂದು ರಾಜಸ್ಥಾನದ ಉದಯಪುರದಲ್ಲಿ ಇವರ ಮದುವೆ ನಡೆಯಿತು. ವಿವಾಹಕಾರ್ಯ ತುಂಬಾನೇ ಅದ್ದೂರಿಯಾಗಿ ನಡೆದಿತ್ತು. ವಿವಾಹದ ಬಳಿಕ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರು. ವೆಬ್ ಸೀರಿಸ್​ಗಳನ್ನು ನಿರ್ಮಾಣ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರು ‘ಡೆಡ್​ ಪಿಕ್ಸೆಲ್​’ ಸೀರಿಸ್​ನಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ವರೆಗೆ ಬಂದು ನಿಂತ ನಿಹಾರಿಕಾ ಪ್ರೇಮ ವಿವಾಹ; ಹೊಸ ಸಾಕ್ಷಿ ತಂದ ಫ್ಯಾನ್ಸ್

‘ಡೆಡ್ ಪಿಕ್ಸೆಲ್’ ಸೀರಿಸ್​​ನಲ್ಲಿ ನಿಹಾರಿಕಾ ಮೊದಲಾದವರು ನಟಿಸಿದ್ದಾರೆ. ಈ ಟ್ರೇಲರ್ ಗೇಮರ್​ಗಳ ಬಗ್ಗೆ ಇದೆ. ಆನ್​ಲೈನ್​​ನ​ಲ್ಲಿ ಗೇಮ್ ಆಡುತ್ತಾ ಯಾವ ಪರಿಸ್ಥಿತಿಗೆ ತಲುಪುತ್ತಾರೆ ಎನ್ನೋದನ್ನು ತೋರಿಸಲಾಗುತ್ತಿದೆ. ಈ ಟ್ರೇಲರ್​ನಲ್ಲಿ ನಿಹಾರಿಕಾ ಹೇಳುವ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ‘ರೋಷನ್ ಬೆಡ್​ ಮೇಲೆ, ಭಾಗರ್ವ್ ಮನಸ್ಸಿನಲ್ಲಿ’ ಎಂಬರ್ಥ ಬರುವ ರೀತಿಯಲ್ಲಿ ನಿಹಾರಿಕಾ ಡೈಲಾಗ್ ಹೊಡೆದಿದ್ದಾರೆ.

‘ಡೆಡ್​ ಪಿಕ್ಸೆಲ್’ ಹೆಸರಿನ ಬ್ರಿಟಿಷ್ ಸೀರಿಸ್ ಆಧರಿಸಿ ತೆಲುಗಿನ ‘ಡೆಡ್ ಪಿಕ್ಸೆಲ್’ ಮೂಡಿ ಬಂದಿದೆ. ನಿಹಾರಿಕಾ ಅವರು ಗಾಯತ್ರಿ ಹೆಸರಿನ ಪಾತ್ರ ಮಾಡಿದ್ದಾರೆ. ಆರು ಎಪಿಸೋಡ್​ಗಳನ್ನು ಈ ಸೀರಿಸ್ ಒಳಗೊಳ್ಳಲಿದೆ. ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಮೂಲಕ ಇದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?