AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿವೋರ್ಸ್​ವರೆಗೆ ಬಂದು ನಿಂತ ನಿಹಾರಿಕಾ ಪ್ರೇಮ ವಿವಾಹ; ಹೊಸ ಸಾಕ್ಷಿ ತಂದ ಫ್ಯಾನ್ಸ್

ಚೈತನ್ಯ ಮತ್ತು ನಿಹಾರಿಕಾ ತಮ್ಮ ಮದುವೆ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇದರೊಂದಿಗೆ ನಿಹಾರಿಕಾ ಮತ್ತು ಚೈತನ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ.

ಡಿವೋರ್ಸ್​ವರೆಗೆ ಬಂದು ನಿಂತ ನಿಹಾರಿಕಾ ಪ್ರೇಮ ವಿವಾಹ; ಹೊಸ ಸಾಕ್ಷಿ ತಂದ ಫ್ಯಾನ್ಸ್
ಚೈತನ್ಯ-ನಿಹಾರಿಕಾ
ರಾಜೇಶ್ ದುಗ್ಗುಮನೆ
|

Updated on:Mar 20, 2023 | 2:25 PM

Share

ಸಿನಿಮಾ ತಾರೆಯರ ವೈಯಕ್ತಿಕ ವಿಚಾರಗಳ ಬಗ್ಗೆ ಜನರಿಗೆ ಯಾವಾಗಲೂ ಹೆಚ್ಚು ಆಸಕ್ತಿ ಇರುತ್ತದೆ. ಅದರಲ್ಲೂ ಮದುವೆ, ಡೇಟಿಂಗ್ ವಿಚಾರದಲ್ಲಿ ಅವರು ಮತ್ತಷ್ಟು ಆಸಕ್ತಿ ತೋರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ವದಂತಿ ಹಾಗೂ ಊಹೆಗಳೇ ಹೆಚ್ಚು ಚರ್ಚೆ ಆಗುತ್ತವೆ. ಈಗ ಚಿರಂಜೀವಿ ತಮ್ಮನ ಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಮತ್ತು ಅವರ ಪತಿ ಚೈತನ್ಯ ಜೆವಿ ಸಂಬಂಧ ಮುರಿದು ಬಿದ್ದಿದೆ ಎಂಬ ಸುದ್ದಿ ಜೋರಾಗಿದೆ. ಇದಕ್ಕೆ ಫ್ಯಾನ್ಸ್ ಹೊಸ ಸಾಕ್ಷ್ಯ ತೆಗೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ನಿಹಾರಿಕಾ ಮತ್ತು ಚೈತನ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ ಎಲ್ಲರನ್ನೂ ಫಾಲೋ ಮಾಡುತ್ತಿರುವ ಚೈತನ್ಯ, ನಿಹಾರಿಕಾ ಅವರನ್ನು ಮಾತ್ರ ಅನ್​ಫಾಲೋ ಮಾಡಿರೋದು ಅಚ್ಚರಿ ಮೂಡಿಸಿದೆ. ಇನ್ನು, ಚೈತನ್ಯ ಮತ್ತು ನಿಹಾರಿಕಾ ತಮ್ಮ ಮದುವೆ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇದರೊಂದಿಗೆ ನಿಹಾರಿಕಾ ಮತ್ತು ಚೈತನ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ.

ಇದನ್ನೂ ಓದಿ: ಸ್ಟಾರ್ ನಟನ ಜತೆ ಜಗಳಕ್ಕೆ ಇಳಿದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮಹೇಶ್ ಬಾಬು ನೋಡಿ ಗಪ್​ಚುಪ್

ನಿಹಾರಿಕಾ ಮತ್ತು ಚೈತನ್ಯ ಅವರದ್ದು ಪ್ರೇಮ ವಿವಾಹ. 2020ರ ಡಿಸೆಂಬರ್ 9ರಂದು ರಾಜಸ್ಥಾನದ ಉದಯಪುರದಲ್ಲಿ ಇವರ ಮದುವೆ ನಡೆಯಿತು. ವಿವಾಹಕಾರ್ಯ ತುಂಬಾನೇ ಅದ್ದೂರಿಯಾಗಿ ನಡೆದಿತ್ತು. ಈ ಮದುವೆ ಸಮಾರಂಭದಲ್ಲಿ ಅನೇಕ ಸ್ಟಾರ್ಸ್ ಭಾಗಿ ಆಗಿದ್ದರು. ಈ ದಂಪತಿ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಆದರೆ, ಈಗ ಈ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಮೆಗಾ ನಟಿ ನಿಹಾರಿಕಾ ಮದುವೆ: ಅದ್ದೂರಿ ವಿವಾಹ, ದುಬಾರಿ ಉಡುಗೊರೆಗಳು..

ನಿಹಾರಿಕಾ ಹಾಗೂ ಚೈತನ್ಯ ಮದುವೆಯಾದ ಒಂದೂವರೆ ವರ್ಷದ ನಂತರ ವಿಚ್ಛೇದನದ ವದಂತಿಗಳು ಹುಟ್ಟಲು ಶುರುವಾದವು. ಕಳೆದ ವರ್ಷ ಮಾರ್ಚ್‌ನಲ್ಲಿ ಚೈತನ್ಯ ಅವರು ನಿಹಾರಿಕಾ ಅವರನ್ನು ಉದ್ದೇಶಿಸಿ ಪಾಸಿಟಿವ್ ಆಗಿ ಸ್ಟೋರಿ ಪೋಸ್ಟ್ ಮಾಡಿದ್ದರು. ಇದರಿಂದ ಅವರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂಬುದು ಸ್ಪಷ್ಟ ಆಗಿತ್ತು. ಆದರೆ, ಈಗ ಮತ್ತೊಮ್ಮೆ ವಿಚ್ಛೇದನದ ಸುದ್ದಿಗೆ ವೇಗ ಸಿಕ್ಕಿದೆ. ಕಳೆದ ಕೆಲವು ತಿಂಗಳುಗಳಿಂದ ನಿಹಾರಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಆ್ಯಕ್ಟಿವ್ ಆಗಿಲ್ಲ. ಆದರೆ, ಇವರ ನಡವಳಿಕೆ ಸಾಕಷ್ಟು ಅನುಮಾನ ಮೂಡಿಸಿದೆ.

ಇದನ್ನೂ ಓದಿ: ‘ನಾನು ಎಂದೆಂದಿಗೂ ಚಿತ್ರರಂಗ ತೊರೆಯುವುದಿಲ್ಲ’; ಅಭಿಮಾನಿಗಳೆದುರು ಚಿರಂಜೀವಿ ಶಪಥ ನಿಹಾರಿಕಾ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ಯಶಸ್ಸು ಸಿಕ್ಕಿಲ್ಲ. 2016ರಲ್ಲಿ ರಿಲೀಸ್ ಆದ ‘ಒಕ ಮನಸು’ ಅವರ ಮೊದಲ ಸಿನಿಮಾ. 2019ರಲ್ಲಿ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅವರು ಒಂದು ಪಾತ್ರ ಮಾಡಿದ್ದರು. ಕೆಲ ವೆಬ್ ಸೀರಿಸ್​ಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:20 pm, Mon, 20 March 23