AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರದ್ಧಾಂಜಲಿ ಪೋಸ್ಟರ್​ನಲ್ಲಿ ನಟಿ ಅನಿಕಾ ಸುರೇಂದ್ರನ್​​ ಫೋಟೋ; ಯುವ ನಟಿಗೇನಾಯ್ತು?

Anikha Surendran: ಅನಿಕಾ ಸುರೇಂದ್ರನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಲಕಲಾವಿದೆಯಾಗಿ ಅವರು ಎಲ್ಲರಿಗೂ ಇಷ್ಟವಾಗಿದ್ದರು. ಈಗ ನಾಯಕಿ ಆಗಿ ಮಿಂಚುತ್ತಿದ್ದಾರೆ. ಅವರು ಮೃತಪಟ್ಟಿದ್ದಾರೆ ಎನ್ನುವ ಕರಪತ್ರ ವೈರಲ್ ಆಗಿದೆ.

ಶ್ರದ್ಧಾಂಜಲಿ ಪೋಸ್ಟರ್​ನಲ್ಲಿ ನಟಿ ಅನಿಕಾ ಸುರೇಂದ್ರನ್​​ ಫೋಟೋ; ಯುವ ನಟಿಗೇನಾಯ್ತು?
ಅನಿಕಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: May 11, 2023 | 11:57 AM

Share

ಇದು ಸೋಶಿಯಲ್ ಮೀಡಿಯಾ (Social Media) ಯುಗ. ಸತ್ಯ ಹಾಗೂ ಸುಳ್ಳು ಎರಡೂ ಬೇಗ ಪ್ರಸಾರ ಆಗುತ್ತದೆ. ಸಿನಿಮಾದಲ್ಲಿ ಬರುವ ಕೆಲ ದೃಶ್ಯಗಳು ವೈರಲ್ ಆಗಿ ಅಧ್ವಾನ ಸೃಷ್ಟಿಸಿದ ಉದಾಹರಣೆ ಸಾಕಷ್ಟು ಇದೆ. ಈಗ ಅನಿಕಾ ಸುರೇಂದ್ರನ್ (Anikha Surendran) ಅವರು ಇದೇ ರೀತಿಯ ತೊಂದರೆ ಅನುಭವಿಸಿದ್ದಾರೆ. ಅವರು ಮೃತಪಟ್ಟಿದ್ದಾರೆ ಎನ್ನುವ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಅಭಿಮಾನಿಗಳಿಗೆ ಆತಂಕ ಆಗಿದೆ. ನಂತರ ಅಸಲಿ ವಿಚಾರ ತಿಳಿದು ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ಅನಿಕಾ ಸುರೇಂದ್ರನ್​ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಅಜಿತ್​ ನಟನೆಯ ‘ಯೆನ್ನೈ ಅರಿಂಧಾಲ್​’ ಮತ್ತು ‘ವಿಶ್ವಾಸಮ್​’ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡರು. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಅವರು ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಲಿಪ್​ ಲಾಕ್ ಮಾಡಿ ಗಮನ ಸೆಳೆದಿದ್ದಾರೆ.

ಅನಿಕಾ ಸುರೇಂದ್ರನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಲಕಲಾವಿದೆಯಾಗಿ ಅವರು ಎಲ್ಲರಿಗೂ ಇಷ್ಟವಾಗಿದ್ದರು. ಈಗ ನಾಯಕಿ ಆಗಿ ಮಿಂಚುತ್ತಿದ್ದಾರೆ. ಹೀಗಿರುವಾಗಲೇ ಅವರು ಮೃತಪಟ್ಟಿದ್ದಾರೆ ಎನ್ನುವ ಕರಪತ್ರ ವೈರಲ್ ಆಗಿದೆ. ಇದನ್ನು ನೋಡಿ ಅನೇಕರು ಶಾಕ್ ಆಗಿದ್ದರು. ಇದು ಸಿನಿಮಾದಲ್ಲಿ ಬರುವ ಒಂದು ದೃಶ್ಯ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: Ankita Vikraman: ಬಾಯ್​ಫ್ರೆಂಡ್​ನಿಂದ ಹಲ್ಲೆ, ಚಿತ್ರ ಹಂಚಿಕೊಂಡ ನಟಿ ಅನಿಕಾ

ಅನಿಕಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟರ್​ನಲ್ಲಿದೆ. ಅನಿಕಾ ಅವರ ಫೋಟೋ ಈ ಪೋಸ್ಟರ್‌ನಲ್ಲಿದೆ. ‘ನಂದಿನಿ ಭಾನುವಾರ 16.07.2023ರಂದು ರಾತ್ರಿ 11.30 ಗಂಟೆಗೆ ಅಕಾಲಿಕ ಮರಣ ಹೊಂದಿದರು. ಅವರಿಗೆ ಶ್ರದ್ಧಾಂಜಲಿ’ ಎಂದು ಪೋಸ್ಟರ್​ನಲ್ಲಿದೆ. ಇದನ್ನು ನೋಡಿದ ಅಭಿಮಾನಿಗಳು ಗಾಬರಿ ಮತ್ತು ಗೊಂದಲಕ್ಕೆ ಒಳಗಾಗಿದ್ದರು. ಬಳಿಕ ಇದು ಸಿನಿಮಾಗೆ ಸಂಬಂಧಿಸಿದ್ದು ಎಂದು ತಿಳಿದು ಅಭಿಮಾನಿಗಳಿಗೆ ರಿಲೀಫ್ ಆಗಿದೆ.

ಅನಿಕಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಅವರು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ‘ಓ ಮೈ ಡಾರ್ಲಿಂಗ್​’ ಹೆಸರಿನ ಮಲಯಾಳಂ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರದಲ್ಲಿ ಅವರು ಲಿಪ್​ಲಾಕ್ ದೃಶ್ಯ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ