‘ಜನ ನಾಯಗನ್’ ಹೆಸರು ಹೇಳಿದ್ದಕ್ಕೆ ವಿದ್ಯಾರ್ಥಿಗಳ ಆಕ್ರೋಶ: ನಟಿಗೆ ಛೀಮಾರಿ

Jana Nayagan movie: ‘ಜನ ನಾಯಗನ್’ ಮೊದಲ ದಿನ ಸಿನಿಮಾ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ವಿಜಯ್ ಅವರಿಗೆ ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದು, ಅಭಿಮಾನಿಗಳು ಮೊದಲ ದಿನವೇ ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಇದೀಗ ನಟಿಯೊಬ್ಬರು ಕಾರ್ಯಕ್ರಮವೊಂದರಲ್ಲಿ ‘ಜನ ನಾಯಗನ್’ ಸಿನಿಮಾ ಬಗ್ಗೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಗಳ ವಿರೋಧ ಎದುರಾಗಿದೆ.

‘ಜನ ನಾಯಗನ್’ ಹೆಸರು ಹೇಳಿದ್ದಕ್ಕೆ ವಿದ್ಯಾರ್ಥಿಗಳ ಆಕ್ರೋಶ: ನಟಿಗೆ ಛೀಮಾರಿ
Sanam Shetty

Updated on: Jul 25, 2026 | 7:30 PM

ವಿಜಯ್ (Vijay)​​ ನಟನೆಯ ‘ಜನ ನಾಯಗನ್’ ಸಿನಿಮಾ ಇದೇ ಗುರುವಾರ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದರೂ ಮೊದಲ ದಿನ ಸಿನಿಮಾ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ವಿಜಯ್ ಅವರಿಗೆ ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದು, ಅಭಿಮಾನಿಗಳು ಮೊದಲ ದಿನವೇ ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಇದೀಗ ನಟಿಯೊಬ್ಬರು ಕಾರ್ಯಕ್ರಮವೊಂದರಲ್ಲಿ ‘ಜನ ನಾಯಗನ್’ ಸಿನಿಮಾ ಬಗ್ಗೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಗಳ ವಿರೋಧ ಎದುರಾಗಿದೆ.

ತಮಿಳುನಾಡಿನ ಚೆನ್ನೈನಲ್ಲಿ ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು, ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗಿ ಆಗಿದ್ದರು. ನಟಿ, ಮಾಜಿ ಬಿಗ್​​ಬಾಸ್ ಸ್ಪರ್ಧಿ ಸನಮ್ ಶೆಟ್ಟಿ ಸಹ ಭಾಗಿ ಆಗಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸನಮ್ ಶೆಟ್ಟಿ, ಭಾಷಣದ ವೇಳೆ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರಸ್ತಾಪ ಮಾಡಿದರೂ ಕೂಡಲೇ ವಿದ್ಯಾರ್ಥಿಗಳು, ನಟಿಗೆ ಧಿಕ್ಕಾರ ಕೂಗಿ ವೇದಿಕೆಯಿಂದ ಇಳಿಯುವಂತೆ ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸನಮ್ ಶೆಟ್ಟಿ, ‘ನಾನು ವಿದ್ಯಾರ್ಥಿಗಳ ಪರ ಬೆಂಬಲ ಸೂಚಿಸಲು ಬಂದಿದ್ದೇನೆ. ನಾನು ನಿನ್ನೆಯಷ್ಟೆ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಮೊದಲ ಶೋ ನೋಡಿದೆ. ಆ ಸಿನಿಮಾ ನೋಡಿ ಸ್ಪೂರ್ತಿ ಪಡೆದು ನಾನು ಇಲ್ಲಿಗೆ ಬಂದಿದ್ದೇನೆ ಎಂದರು. ಅಷ್ಟರಲ್ಲೇ ಕೆಲ ವಿದ್ಯಾರ್ಥಿಗಳು ‘ಬೂ…’ ಎಂದು ‘ಬೂಯಿಂಗ್’ ಆರಂಭಿಸಿದರು. ‘ಥಮ್ಸ್ ಡೌನ್’ ತೋರಿಸಲು ಆರಂಭಿಸಿದರು. ಆದರೆ ಮಾತು ಮುಂದುವರೆಸಿದ ನಟಿ, ವಿದ್ಯಾರ್ಥಿಗಳ ಮೇಲೆ ಸಿಟ್ಟು ಹೊರಹಾಕಿದರು. ಇದನ್ನು ಪ್ರಜಾಪ್ರಭುತ್ವ ಎನ್ನುವುದಿಲ್ಲ’ ಎಂದರು.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಆಸಕ್ತಿಕರ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

‘ಯಾರೋ ಹೇಳಿದ್ದಕ್ಕೆ ನಾನು ಇಲ್ಲಿಗೆ ಬಂದಿಲ್ಲ, ನನ್ನ ಮನಸ್ಸಿನಲ್ಲಿ ಇರುವುದನ್ನು ಹೇಳುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಬೇರೆ ಯಾರಿಗೋ ಇಷ್ಟವಾಗುತ್ತದೆ, ಕಷ್ಟವಾಗುತ್ತದೆ ಎಂದು ನಾನು ಮಾತನಾಡದೇ ಇರಲಾರೆ. ಇಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ’ ಎಂದರು. ಬಳಿಕ ಆಯೋಜಕರು ಬಂದು ನಟಿಯಿಂದ ಮೈಕ್ ಅನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊರ ಬಂದು ಮಾಧ್ಯಮಗಳ ಬಳಿ ಮಾತನಾಡಿದ ನಟಿ ಸನಮ್, ‘ನಾನು ಒಂದು ಸಿನಿಮಾ ನೋಡಿದ್ದಕ್ಕೆ ನನ್ನನ್ನು ಜೋಕರ್ ಎಂದಿದ್ದಾರೆ, ಅದೇ ವೆಟ್ರಿಮಾರನ್ ಅವರು ಎಷ್ಟು ಸಿನಿಮಾ ತೆಗೆದಿದ್ದಾರೆ. ಅವರೂ ಸಹ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದಾರೆ ಅವರನ್ನು ಜೋಕರ್ ಎನ್ನುತ್ತಾರಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ, ‘ಕೆಲವು ವಿದ್ಯಾರ್ಥಿಗಳು ಅಲ್ಲಿ, ಡಿಎಂಕೆ ಟಿ-ಶರ್ಟ್ ಧರಿಸಿ ಕುಳಿತಿದ್ದಾರೆ. ಅವರೇ ಇದನ್ನೆಲ್ಲ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us