Deepika Singh: ತೌಕ್ತೆ ಚಂಡಮಾರುತದಿಂದ ನೆಲಕ್ಕುರುಳಿದ ಮರದ ಮೇಲೆ ಫೋಟೋಶೂಟ್, ಡ್ಯಾನ್ಸ್​​​; ಟ್ರೋಲ್​ ಆದ ಕಿರುತೆರೆ ನಟಿ

| Updated By: Digi Tech Desk

Updated on: May 22, 2021 | 9:48 AM

Deepika Singh Photoshoot: ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಥ್ರಿಲ್​ ಆಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗುತ್ತಾರೆ ಎಂಬುದು ದೀಪಿಕಾ ಅವರ ಆಲೋಚನೆ ಆಗಿತ್ತೇನೋ. ಆದರೆ, ಅಲ್ಲಿ ಆಗಿದ್ದೇ ಬೇರೆ.

Deepika Singh: ತೌಕ್ತೆ ಚಂಡಮಾರುತದಿಂದ ನೆಲಕ್ಕುರುಳಿದ ಮರದ ಮೇಲೆ ಫೋಟೋಶೂಟ್, ಡ್ಯಾನ್ಸ್​​​; ಟ್ರೋಲ್​ ಆದ ಕಿರುತೆರೆ ನಟಿ
ದೀಪಿಕಾ ಸಿಂಗ್​
Follow us on

ತೌಕ್ತೆ ಚಂಡಮಾರುತದ ಅಬ್ಬರ ಭಾರತದಲ್ಲಿ ಜೋರಾಗಿತ್ತು. ಈ ಚಂಡಮಾರುತದಿಂದ ಆದ ಅವಘಡಗಳು ಒಂದೆರಡಲ್ಲ. ಚಂಡಮಾರುತದ ಅಬ್ಬರಕ್ಕೆ ದೇಶದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಅನೇಕರು ಮೃತಪಟ್ಟಿದ್ದಾರೆ ಕೂಡ. ಮಹಾರಾಷ್ಟ್ರದಲ್ಲೂ ಈ ಚಂಡಮಾರುತದ ಅಬ್ಬರ ಜೋರಾಗಿಯೇ ಇತ್ತು. ಈ ವೇಳೆ, ಹಿಂದಿ ಕಿರುತೆರೆ ನಟಿ ದೀಪಿಕಾ ಸಿಂಗ್ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಮಹಾರಾಷ್ಟ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮರಗಳು ಮುರಿದು ಬಿದ್ದಿವೆ. ದೀಪಿಕಾ ಸಿಂಗ್​ ಮನೆಯ ಸಮೀಪವೂ ಮರವೊಂದು ಮುರಿದು ಬಿದ್ದಿತ್ತು. ಈ ವೇಳೆ ಅವರು ಅಲ್ಲಿಗೆ ತೆರಳಿ ಡ್ಯಾನ್ಸ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಬಿದ್ದ ಮರದ ಎದುರು ನಿಂತು ಫೋಟೋಶೂಟ್​ ಮಾಡಿಸಿ ಸಂಭ್ರಮಿಸಿದ್ದಾರೆ.

ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಥ್ರಿಲ್​ ಆಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗುತ್ತಾರೆ ಎಂಬುದು ದೀಪಿಕಾ ಅವರ ಆಲೋಚನೆ ಆಗಿತ್ತೇನೋ. ಆದರೆ, ಅಲ್ಲಿ ಆಗಿದ್ದೇ ಬೇರೆ. ನಟಿಗೆ ಎಲ್ಲರೂ ಬಾಯಿಗೆ ಬಂದಂತೆ ಬೈದಿದ್ದಾರೆ.

ಕೊವಿಡ್​ ಎರಡನೇ ಅಲೆ ಜೋರಾಗಿದೆ. ಇದರ ಜತೆಗೆ ತೌಕ್ತೆ ಚಂಡಮಾರುತದ ಎಫೆಕ್ಟ್​ ಜೋರಾಗಿದೆ. ಹೀಗಿರುವಾಗ ಬಿದ್ದ ಮರವನ್ನು ಹಿಡಿದುಕೊಂಡು ಪೋಸ್​​ ನೀಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ಜೊತೆ ಮಲಗಿದ್ರೆ ಏನು ಬೇಕಾದರೂ ಕೊಡುತ್ತೇನೆ; ಪ್ರಾಧ್ಯಾಪಕನಿಂದ ಬಂದ ಆಹ್ವಾನ ಕೇಳಿ ನಟಿ ಶಾಕ್​

Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

Published On - 7:23 am, Sat, 22 May 21