ಉದ್ಯಮಿಗೆ ಬೆದರಿಕೆ ಪ್ರಕರಣ: ನಟಿ ಕೃಷಿ ತಾಪಂಡಗೆ ನೊಟೀಸ್

Krishi Thapanda: ಎಆರ್‌ವಿ ಗ್ರೂಪ್‌ ಮಾಲೀಕ ಅರವಿಂದ್‌ ರೆಡ್ಡಿ ವಿರುದ್ಧ ದೂರು ನೀಡಿದ್ದ ನಟಿ ಕೃಷಿ ತಾಪಂಡ, ಉದ್ಯಮಿ ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದಿದ್ದರು. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಆ ಬಳಿಕ ಆ ಉದ್ಯಮಿ, ತಾವು ನಟಿಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾಗಿ, ನಟಿ ತಮ್ಮನ್ನು ಹಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದೆಲ್ಲ ಪ್ರತ್ಯಾರೋಪಗಳನ್ನು ಮಾಡಿದ್ದರು. ಇದೀಗ ಅದೇ ಉದ್ಯಮಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.

ಉದ್ಯಮಿಗೆ ಬೆದರಿಕೆ ಪ್ರಕರಣ: ನಟಿ ಕೃಷಿ ತಾಪಂಡಗೆ ನೊಟೀಸ್
Krishi Tapana

Updated on: Feb 08, 2026 | 7:57 PM

ಕೃಷಿ ತಾಪಂಡ (Krishi Tapanda) ಕಳೆದ ಕೆಲ ತಿಂಗಳುಗಳಿಂದಲೂ ಸುದ್ದಿಯಲ್ಲಿದ್ದಾರೆ. ಎಆರ್‌ವಿ ಗ್ರೂಪ್‌ ಮಾಲೀಕ ಅರವಿಂದ್‌ ರೆಡ್ಡಿ ವಿರುದ್ಧ ದೂರು ನೀಡಿದ್ದ ನಟಿ, ಉದ್ಯಮಿ ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದಿದ್ದರು. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಆ ಬಳಿಕ ಆ ಉದ್ಯಮಿ, ತಾವು ನಟಿಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾಗಿ, ನಟಿ ತಮ್ಮನ್ನು ಹಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದೆಲ್ಲ ಪ್ರತ್ಯಾರೋಪಗಳನ್ನು ಮಾಡಿದ್ದರು. ಇದೀಗ ಅದೇ ಉದ್ಯಮಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.

ಕೃಷಿ ತಾಪಂಡ ಈ ಹಿಂದೆ ದೂರು ನೀಡಿದ್ದ ಉದ್ಯಮಿ ಅರವಿಂದ್‌ ರೆಡ್ಡಿಗೆ ಇತ್ತೀಚೆಗೆ ಬೆದರಿಕೆ ಪತ್ರವೊಂದು ಬಂದಿತ್ತು. ಅನಾಮಿಕನೊಬ್ಬ ಅರವಿಂದ ರೆಡ್ಡಿ ಬಳಿ ಏಳು ಕೋಟಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಬೆದರಿಕೆ ಸಹ ಹಾಕಲಾಗಿತ್ತು. ಈ ಬಗ್ಗೆ ಅರವಿಂದ ರೆಡ್ಡಿ ಸಂಜಯ್​​ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡ ಆಪ್ತ ಎನ್ನಲಾಗಿದೆ.

ಅರವಿಂದ ರೆಡ್ಡಿಗೆ ಬರೆಯಲಾಗಿದ್ದ ಪತ್ರದಲ್ಲಿ ಮಹಿಳೆಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸಬೇಕು ಜೊತೆಗೆ ಏಳು ಕೋಟಿ ರೂಪಾಯಿ ಹಣ ನೀಡಬೇಕು ಎಂದು ಬೆದರಿಕೆ ಹಾಕಲಾಗಿತ್ತು. ಪತ್ರವನ್ನು ಅರವಿಂದ ರೆಡ್ಡಿ ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪತ್ರವನ್ನು ಬನಶಂಕರಿಯಿಂದ ಕೊರಿಯರ್ ಮಾಡಿದ್ದು ಪತ್ತೆ ಹಚ್ಚಿದರು. ಬಳಿಕ ಮೆಕ್ಯಾನಿಕ್ ಓರ್ವ ಆ ಪತ್ರವನ್ನು ಕೊರಿಯರ್ ಮಾಡಿದ್ದು ಪತ್ತೆ ಹಚ್ಚಿದರು. ಆ ಯುವಕ, ವೈಶಾಖ್ ಎಂಬಾತ ತಮಗೆ ಪತ್ರ ಕೊರಿಯರ್ ಮಾಡಲು ಎಂಬುದಾಗಿ ಹೇಳಿದ್ದಾನೆ.

ಇದನ್ನೂ ಓದಿ:ನಟಿ ಕೃಷಿ ತಾಪಂಡ ಈಗ ಹೇಗಿದ್ದಾರೆ ನೋಡಿ

ಇದೀಗ ಪೊಲೀಸರು ವೈಶಾಖ್ ಎಂಬಾತನನ್ನು ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡಗೆ ಆಪ್ತ ಎನ್ನಲಾಗಿದ್ದು, ವೈಶಾಖ್, ಕೃಷಿ ತಾಪಂಡ ಮನೆಯನ್ನೇ ಬಂಧನಕ್ಕೆ ಒಳಗಾಗಿದ್ದಾನೆ ಎಂದ ಸುದ್ದಿಯೂ ಹರಿದಾಡುತ್ತಿದೆ. ವೈಶಾಖ್ ತನ್ನ ಮೊಬೈಲ್ ಅನ್ನು ಕೃಷಿ ತಾಪಂಡ ಮನೆಯಲ್ಲೇ ಅಡಗಿಸಿಟ್ಟಿದ್ದಾನೆ ಎಂಬುದು ಪೊಲೀಸರ ಗುಮಾನಿ ಆಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಟಿ ಕೃಷಿ ತಾಪಂಡಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದ್ದಾರೆ.

ಈ ಹಿಂದೆ ಇದೇ ಕೃಷಿ ತಾಪಂಡ ಅವರು ಉದ್ಯಮಿ ಅರವಿಂದ ರೆಡ್ಡಿ ವಿರುದ್ಧ ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದರು. ಇದೀಗ ಕೃಷಿ ತಾಪಂಡ ಆಪ್ತನೇ ಅರವಿಂದ ರೆಡ್ಡಿಗೆ ಬ್ಲಾಕ್​​ಮೇಲ್ ಮಾಡಲು ಯತ್ನಿಸಿದ್ದು, ಏಳು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸರ ತನಿಖೆಯಲ್ಲಿ ಇನ್ನಷ್ಟು ಅಂಶಗಳು ಹೊರಬರಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Sun, 8 February 26