ಸೆಲೆಬ್ರಿಟಿಗಳ ವಲಯದಲ್ಲಿ ಪ್ರೀತಿ, ಪ್ರೇಮ, ವಿಚ್ಛೇದನ ಸರ್ವೇ ಸಾಮಾನ್ಯ. ಆದರೆ, ಕೆಲ ಸೆಲೆಬ್ರಿಟಿಗಳಿಗೆ ಮನೆಯವರ ವಿರೋಧ ವ್ಯಕ್ತವಾಗಿ ಪ್ರೀತಿಸಿದವರನ್ನು ಮದುವೆ ಆಗುವ ಅವಕಾಶ ತಪ್ಪಿದ ಉದಾಹರಣೆ ಸಾಕಷ್ಟಿದೆ. ನಟಿ ಮಾಧುರಿ ದೀಕ್ಷಿತ್ (Madhuri Dixit) ಜೀವನದಲ್ಲಿ ಹೀಗೆಯೇ ಆಗಿತ್ತು. ಮಾಧುರಿ ಪತಿ ಡಾಕ್ಟರ್ ಶ್ರೀರಾಮ್ ನೆನೆಯೊಂದಿಗೆ ಸಂತೋಷದಿಂದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಮಾಧುರಿ ಈ ಮೊದಲು ರಾಜಮನೆತನದ ಹುಡುಗನನ್ನು ಪ್ರೀತಿಸುತ್ತಿದ್ದರು. ನಟಿಯ ಪ್ರೀತಿ ಮದುವೆವರೆಗೆ ತಲುಪಲು ಸಾಧ್ಯವಾಗಲಿಲ್ಲ. ಕುಟುಂಬದ ವಿರೋಧ ಹಾಗೂ ಇತರ ಬಿಕ್ಕಟ್ಟುಗಳಿಂದಾಗಿ ಮಾಧುರಿಯ ಪ್ರೇಮ ಕಥೆ ಅಪೂರ್ಣವಾಗಿಯೇ ಉಳಿಯಿತು.
ಮಾಧುರಿ ದೀಕ್ಷಿತ್ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ಸೆಲೆಬ್ರಿಟಿಗಳ ಜೊತೆ ಮಾಧುರಿ ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಮಾಧುರಿ ಮನಸ್ಸನ್ನು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಕದ್ದಿದ್ದರು. ಇಬ್ಬರೂ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ಸಂಬಂಧವು ಮದುವೆವರೆಗೆ ಹೋಗಲಿಲ್ಲ.
ಮಾಧುರಿ ಮತ್ತು ಅಜಯ್ ಮೊದಲ ಬಾರಿಗೆ ಭೇಟಿ ಆಗಿದ್ದು ಫೋಟೋಶೂಟ್ ಒಂದರ ಸಮಯದಲ್ಲಿ. ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿತು. ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲ ಇವರಿಬ್ಬರ ರೊಮ್ಯಾಂಟಿಕ್ ಫೋಟೋಗಳು ಕೂಡ ಅಭಿಮಾನಿಗಳಲ್ಲಿ ಹಾಟ್ ಟಾಪಿಕ್ ಆಗಿತ್ತು. ಆಗ ಇಬ್ಬರ ಅಫೇರ್ ವಿಷಯದ ಬಗೆಗಿನ ಚರ್ಚೆ ವೇಗ ಪಡೆದುಕೊಂಡಿತು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗಲೇ ಇವರಿಬ್ಬರ ಸಂಬಂಧದಲ್ಲಿ ಕಲಹ ಉಂಟಾಯಿತು. ಇವರಿಬ್ಬರ ಸಂಬಂಧ ಮುರಿದು ಬಿದ್ದಿರುವುದರ ಹಿಂದೆ ಕುಟುಂಬಸ್ಥರ ಕೈವಾಡ ಇರಬಹುದು ಎಂದು ವರದಿ ಆಗಿದೆ.
ಅಜಯ್ ಜಡೇಜಾ ರಾಜಮನೆತನಕ್ಕೆ ಸೇರಿದವರು. ಮಾಧುರಿ ಬ್ರಾಹ್ಮಣ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಹಾಗಾಗಿ ಅಜಯ್ ಮನೆಯವರು ಇವರಿಬ್ಬರ ಸಂಬಂಧವನ್ನು ಒಪ್ಪಿರಲಿಲ್ಲ. ಹೀಗಿರುವಾಗ ಮಾಧುರಿ ದೀಕ್ಷಿತ್ ಕುಟುಂಬ ಕೂಡ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿತ್ತು. ಈ ಸಂಬಂಧಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸುತ್ತಿರುವಾಗಲೇ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಅಜಯ್ ಹೆಸರು ಕೇಳಿ ಬಂದಿತ್ತು.
ಇದನ್ನೂ ಓದಿ: ರಾಜಕೀಯದ ಸಹವಾಸ ಬೇಡ ಎಂದ ಮಾಧುರಿ ದೀಕ್ಷಿತ್
ಮ್ಯಾಚ್ ಫಿಕ್ಸಿಂಗ್‌ನಲ್ಲಿ ಅಜಯ್ ಹೆಸರು ಕೇಳಿಬಂದ ನಂತರ ಮಾಧುರಿ ಅವರ ಕುಟುಂಬವು ಅಜಯ್ ಜಡೇಜಾ ಅವರೊಂದಿಗಿನ ಸಂಬಂಧವನ್ನು ವಿರೋಧಿಸಿತು. ಆ ನಂತರ ಮಾಧುರಿ ದೀಕ್ಷಿತ್ ಮತ್ತು ಅಜಯ್ ಜಡೇಜಾ ಬೇರ್ಪಟ್ಟರು. ನಂತರ ಮಾಧುರಿ ಅವರು ಡಾ. ಶ್ರೀರಾಮ್ ನೆನೆಯನ್ನು ಮದುವೆಯಾಗಿ ಅಮೆರಿಕಕ್ಕೆ ತೆರಳಿದರು. ಹಲವು ವರ್ಷಗಳ ನಂತರ ಮಾಧುರಿ ಮತ್ತೆ ಮುಂಬೈಗೆ ಬಂದಿದ್ದಾರೆ. ಮತ್ತೊಂದೆಡೆ, ಅಜಯ್ ಜಡೇಜಾ ಅವರು ಖ್ಯಾತ ರಾಜಕಾರಣಿ ಜಯಾ ಜೇಟ್ಲಿ ಅವರ ಪುತ್ರಿ ಅದಿತಿ ಜೇಟ್ಲಿ ಅವರನ್ನು ವಿವಾಹವಾದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ