
ಬಾಲಿವುಡ್ ನಟಿ ಮಂದಿರಾ ಬೇಡಿ ಪತಿ, ಸಿನಿಮಾ ನಿರ್ಮಾಪಕ ರಾಜ್ ಕೌಶಲ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಸುದ್ದಿಯನ್ನು ರಾಜ್ ಕೌಶಲ್ರೊಂದಿಗೆ ಕೆಲಸ ಮಾಡುತ್ತಿದ್ದ ನಿರ್ದೇಶಕ ಒನಿರ್ ದೃಢಪಡಿಸಿದ್ದಾರೆ. ರಾಜ್ ಕೌಶಲ್ಗೆ 49ವರ್ಷ ವಯಸ್ಸಾಗಿತ್ತು. ನಟನಾಗಿ ವೃತ್ತಿ ಜೀವನ ಶುರು ಮಾಡಿದ್ದ ಇವು, ಮೂರು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. 1999ರಲ್ಲಿ ಮಂದಿರಾ ಬೇಡಿಯನ್ನು ವಿವಾಹವಾಗಿದ್ದರು. ಈ ದಂಪತಿಗೆ ವೀರ್ ಮತ್ತು ತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಟ್ವೀಟ್ ಮಾಡಿರುವ ನಿರ್ದೇಶಕ ಒನಿರ್, ನಾವು ಸಿನಿಮಾ ನಿರ್ಮಾಪಕ, ನಿರ್ದೇಶಕ ರಾಜ್ಕೌಶಲ್ರನ್ನು ಇಂದು ಮುಂಜಾನೆ ಕಳೆದುಕೊಂಡಿದ್ದೇವೆ. ತುಂಬ ಬೇಗನೇ ಹೋಗಿಬಿಟ್ಟರು ಎಂದು ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಮೈ ಬ್ರದರ್ ನಿಖಿಲ್ ಸಿನಿಮಾದ ನಿರ್ಮಾಪಕರಲ್ಲಿ ರಾಜ್ ಕೌಶಲ್ ಕೂಡ ಒಬ್ಬರಾಗಿದ್ದರು. ನನ್ನನ್ನು ನಂಬಿ, ಬೆಂಬಲಿಸಿದ ಕೆಲವೇ ಮಂದಿಯಲ್ಲಿ ಇವರೂ ಒಬ್ಬರಾಗಿದ್ದರು ಎಂದು ಒನಿರ್ ಹೇಳಿದ್ದಾರೆ. ಮುಂಜಾನೆ 4.30ರ ಹೊತ್ತಲ್ಲಿ ಮನೆಯಲ್ಲೇ ಇದ್ದಾಗ ಹೃದಯಾಘಾತ ಆಗಿದ್ದಾಗಿ ಅವರ ಕುಟುಂಬದ ಸ್ನೇಹಿತರಾದ ರೋಹಿತ್ ರಾಯ್ ತಿಳಿಸಿದ್ದಾರೆ.
ರಾಜ್ಕೌಶಲ್ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡಿದವರು. ಪ್ಯಾರ್ ಮೇನ್ ಕಭಿ ಕಭಿ, ಶಾದಿ ಕಾ ಲಡ್ಡೂ ಮತ್ತು ಅಂಥೋನಿ ಕೌನ್ ಹೈ ಎಂಬ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 2006ರಲ್ಲಿ ಥ್ರಿಲ್ಲರ್ ಸಿನಿಮಾ ಅಂಥೋನಿ ಕೌನ್ ಹೈ ನಿರ್ದೇಶನ ಮಾಡಿದ ಬಳಿಕ ಮತ್ತೆ ಯಾವುದೇ ಸಿನಿಮಾವನ್ನೂ ನಿರ್ದೇಶನ ಮಾಡಲಿಲ್ಲ. ನಂತರ ಸಿನಿಮಾ ನಿರ್ಮಾಣ ಶುರು ಮಾಡಿದ್ದರು. ಕೌಶಲ್ ಮತ್ತು ಮಂದಿರಾ ಬೇಡಿ 1999ರಲ್ಲಿ ಮದುವೆಯಾಗಿದ್ದಾರೆ. 2011ರಲ್ಲಿ ಮೊದಲ ಮಗು ಹುಟ್ಟಿದ್ದು ಅವನಿಗೆ ವೀರ್ ಎಂದು ನಾಮಕರಣ ಮಾಡಲಾಗಿದೆ. ನಂತರ ಕಳೆದ ವರ್ಷ ಮಗಳನ್ನು ದತ್ತು ತೆಗೆದುಕೊಂಡಿದ್ದು, ಆಕೆಗೆ ತಾರಾ ಬೇಡಿ ಕೌಶಲ್ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: Dilip Kumar: ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಮತ್ತೆ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ
(Actress Mandira Bedis husband, producer Raj Kaushal dies In Mumbai)