ಚಿತ್ರರಂಗದಲ್ಲಿ ನಟಿಯರಿಗೆ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ಒಂದೆರಡು ಹಿಟ್ ಕೊಟ್ಟ ಮೇಲೆ ಅವರ ಖ್ಯಾತಿ ಹೆಚ್ಚುತ್ತದೆ. ಡೇಟ್ಸ್ ಹೊಂದಾಣಿಕೆ ಕೂಡ ಕಷ್ಟ ಆಗಿ ಬಿಡುತ್ತದೆ. ಕೆಲವರು ಕಥೆ ಇಷ್ಟವಾದರೆ ಒಪ್ಪಿಕೊಳ್ಳುತ್ತಾರೆ. ಆದರೆ, ಬೇರೆ ಸಿನಿಮಾ ಕಮಿಟ್ಮೆಂಟ್ ಕಾರಣಕ್ಕೆ ಸಿನಿಮಾದಿಂದ ಹಿಂದೆ ಸರಿಯಬೇಕಾದ ಸ್ಥಿತಿ ಬಂದೊದಗುತ್ತದೆ. ಮೃಣಾಲ್ ಠಾಕೂರ್ಗೂ ಹಾಗೆಯೇ ಆಗಿತ್ತು. ಅವರು ಸೂರ್ಯ ಜೊತೆ ‘ಕಂಗುವ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅದು ಸಾಧ್ಯ ಆಗಿರಲಿಲ್ಲ. ಈಗ ಅವರಿಗೆ ಮತ್ತೊಮ್ಮೆ ಸೂರ್ಯ ಜೊತೆ ನಟಿಸೋ ಅವಕಾಶ ಸಿಕ್ಕಿದೆ.
‘ಕಂಗುವ’ ಸಿನಿಮಾ ಬಿಗ್ ಬಜೆಟ್ ಚಿತ್ರ. ಈ ಸಿನಿಮಾದಲ್ಲಿ ಸೂರ್ಯ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾಣಿ ನಾಯಕಿ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಆಫರ್ ಮೊದಲು ಹೋಗಿದ್ದು ಮೃಣಾಲ್ಗೆ ಆಗಿತ್ತಂತೆ. ಆದರೆ, ಅವರು ಬೇರೆ ಶೆಡ್ಯೂಲ್ನ ಕಾರಣಕ್ಕೆ ಈ ಆಫರ್ನ ಬಿಟ್ಟರು. ಈಗ ಅವರಿಗೆ ಸೂರ್ಯ ಜೊತೆ ನಟಿಸೋ ಅವಕಾಶ ಸಿಕ್ಕಿದೆ.
‘ಕಂಗುವ’ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ ಎನ್ನಲಾಗಿದೆ. ಕೇವಲ 20 ನಿಮಿಷ ಮಾತ್ರ ನಾಯಕಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ, ಮೃಣಾಲ್ ಈ ಆಫರ್ ಬಿಟ್ಟರೂ ಹೆಚ್ಚು ತೊಂದರೆ ಏನಿಲ್ಲ. ಈಗ ಸೂರ್ಯ ಅವರ ಮುಂದಿನ ಚಿತ್ರಕ್ಕೆ ಮೃಣಾಲ್ ನಾಯಕಿ ಆಗಿದ್ದಾರೆ. ಸೂರ್ಯ ಅವರ ಮುಂದಿನ ಚಿತ್ರ ಫ್ಯಾಂಟಸಿ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಆರ್ಜೆ ಬಾಲಾಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
ಇದನ್ನೂ ಓದಿ: ‘ಕಂಗುವ’ ಪ್ರಚಾರದಲ್ಲಿ ಗ್ಲಾಮರ್ನಿಂದ ಗಮನ ಸೆಳೆದ ದಿಶಾ ಪಟಾನಿ: ಚಿತ್ರಗಳು
‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಮೂಲಕ ಮೃಣಾಲ್ ಠಾಕೂರ್ ಸೋತರು. ‘ಪೂಜಾ ಮೇರಿ ಜಾನ್’, ‘ಹೇ ಜವಾನಿ ತೋ ಇಷ್ಟ ಹೋನಾ ಹಿ’, ‘ಸನ್ ಆಫ್ ಸರ್ದಾರ್ 2’ ‘ತುಮ್ ಓಹ್ ಹೋ’ ಚಿತ್ರಗಳಲ್ಲಿ ನಟಿಸಯತ್ತಿದ್ದಾರೆ. ಮೃಣಾಲ್ ನಟಿಸುತ್ತಿರುವ ಈ ಸಿನಿಮಾದಲ್ಲಿ ಕನ್ನಡದ ರುಕ್ಮಿಣಿ ವಸಂತ್ ಕೂಡ ನಟಿಸಯತ್ತಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.