‘ಕಂಗುವ’ ಪ್ರಚಾರದಲ್ಲಿ ಗ್ಲಾಮರ್ನಿಂದ ಗಮನ ಸೆಳೆದ ದಿಶಾ ಪಟಾನಿ: ಚಿತ್ರಗಳು
Disha Patani: ‘ಕಂಗುವ’ ಸಿನಿಮಾದಲ್ಲಿ ದಿಶಾ ಪಟಾನಿ ತಮ್ಮ ಗ್ಲಾಮರ್ನಿಂದ ಸಖತ್ ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ ಮಾತ್ರವೇ ಅಲ್ಲದೆ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಸಹ ದಿಶಾ ಪಟಾನಿಯ ಗ್ಲಾಮರ್ ಹೈಲೈಟ್ ಆಗುತ್ತಿದೆ.
Updated on: Oct 23, 2024 | 4:50 PM

ಬಾಲಿವುಡ್ನ ಗ್ಲಾಮರಸ್ ನಟಿ ದಿಶಾ ಪಟಾನಿ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಹ ಬೇಡಿಕೆಯ ನಟಿ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಗ್ಲಾಮರ್ನಿಂದ ಗಮನ ಸೆಳೆಯುತ್ತಾರೆ ಈ ನಟಿ.

ತಮಿಳಿನ ‘ಕಂಗುವ’ ಸಿನಿಮಾದಲ್ಲಿ ಸ್ಟಾರ್ ನಟ ಸೂರ್ಯ ಜೊತೆಗೆ ದಿಶಾ ಪಟಾನಿ ನಟಿಸಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಪ್ರಚಾರ ಕಾರ್ಯ ಜಾರಿಯಲ್ಲಿದೆ.

ಮುಂಬೈನಲ್ಲಿ ನಡೆದ ‘ಕಂಗುವ’ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಭಾಗವಹಿಸಿದ್ದ ದಿಶಾ ಪಟಾನಿ, ಮತ್ತೊಮ್ಮೆ ತಮ್ಮ ಗ್ಲಾಮರ್ನಿಂದ ಕಾರ್ಯಕ್ರಮದಲ್ಲಿ ಸಖತ್ ಗಮನ ಸೆಳೆದರು.

ಕಪ್ಪು ಬಣ್ಣದ ಉಡುಗೆ ತೊಟ್ಟಿದ್ದ ದಿಶಾ ಪಟಾನಿ, ಡೀಪ್ ನೆಕ್ ಮಾದರಿಯ ಡಿಸೈನ್ ಮೂಲಕ ಸಾಮಾನ್ಯ ಉಡುಗೆಗೂ ಗ್ಲಾಮರಸ್ ಟಚ್ ನೀಡಿದ್ದರು. ಎಲ್ಲ ಫೊಟೊಗ್ರಾಫರ್ಗಳ ಫೋಕಸ್ ದಿಶಾ ಮೇಲೆಯೇ ಇತ್ತು.

ದಿಶಾ ಪಟಾನಿ, ಸೂರ್ಯ ನಟಿಸಿರುವ ‘ಕಂಗುವ’ ಸಿನಿಮಾ ನವೆಂಬರ್ 14 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

‘ಕಂಗುವ’ ಸಿನಿಮಾ ದಿಶಾ ಪಟಾನಿಗೆ ಮೊದಲ ತಮಿಳು ಸಿನಿಮಾ. ದಿಶಾ ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಒಂದು ಪ್ರಭಾಸ್ ನಟಿಸಿರುವ ‘ಕಲ್ಕಿ’.

ದಿಶಾ ಪಟಾನಿ, ಸೂರ್ಯ, ಬಾಬಿ ಡಿಯೋಲ್ ನಟಿಸಿರುವ ‘ಕಂಗುವ’ ಸಿನಿಮಾ ನವೆಂಬರ್ 14 ರಂದು ತೆರೆಗೆ ಬರಲಿದೆ. ಸಿನಿಮಾವನ್ನು ಜ್ಞಾನವೇಲು ನಿರ್ಮಾಣ ಮಾಡಿದ್ದಾರೆ.



















