Ragini Dwivedi: ಚಿತಾಗಾರದ ಸಿಬ್ಬಂದಿಗೆ ಆಸರೆಯಾದ ರಾಗಿಣಿ ದ್ವಿವೇದಿ; ನಟಿ ಕೆಲಸಕ್ಕೆ ಮೆಚ್ಚುಗೆ

|

Updated on: May 07, 2021 | 3:31 PM

ಕೊರೊನಾ ವೈರಸ್​ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹಬ್ಬಿದೆ. ಇದರಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ, ಚಿತಾಗಾರದಲ್ಲಿ ಕೆಲಸ ಮಾಡುವವರು ದಿನವಿಡೀ ಶ್ರಮಿಸುತ್ತಿದ್ದಾರೆ. ಇದು ರಾಗಿಣಿ ಗಮನಕ್ಕೆ ಬಂದಿದೆ.

Ragini Dwivedi: ಚಿತಾಗಾರದ ಸಿಬ್ಬಂದಿಗೆ ಆಸರೆಯಾದ ರಾಗಿಣಿ ದ್ವಿವೇದಿ; ನಟಿ ಕೆಲಸಕ್ಕೆ ಮೆಚ್ಚುಗೆ
ಚಿತಾಗಾರದಲ್ಲಿ ಸಹಾಯ ಮಾಡುತ್ತಿರುವ ರಾಗಿಣಿ
Follow us on

ಕೊರೊನಾ ವೈರಸ್​ ಮೊದಲನೇ ಅಲೆ ಕಾಣಿಸಿಕೊಂಡಾಗ ನಟಿ ರಾಗಿಣಿ ದ್ವಿವೇದಿ ಬಡವರಿಗೆ ಊಟ ಹಂಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಈಗಲೂ ಅವರು ಸುಮ್ಮನೆ ಕೂತಿಲ್ಲ. ಮನೆಯಿಂದ ಹೊರಬಂದು ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ.

ರಾಗಿಣಿ ಟ್ರಸ್ಟ್​ಗೆ ಆರ್​.ಡಿ. ವೆಲ್​ಫೇರ್​ ಎನ್ನುವ ಹೆಸರಿತ್ತು. ಇದನ್ನು ಅವರು ಜೆನ್​​ಟೆಕ್ಸ್ಟ್​ ಎಂದು ಮರು ನಾಮಕರಣ ಮಾಡಿದ್ದಾರೆ. ಈ ಟ್ರಸ್ಟ್​ ಅಡಿಯಲ್ಲಿ ರಾಗಿಣಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗ ರಾಗಿಣಿ ಚಿತಾಗಾರವೊಂದಕ್ಕೆ ತೆರಳಿ ಅಲ್ಲಿಯ ಸಿಬ್ಬಂದಿಗೆ ಊಟ ಹಂಚುವ ಕೆಲಸ ಮಾಡಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹಬ್ಬಿದೆ. ಇದರಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ, ಚಿತಾಗಾರದಲ್ಲಿ ಕೆಲಸ ಮಾಡುವವರು ದಿನವಿಡೀ ಶ್ರಮಿಸುತ್ತಿದ್ದಾರೆ. ಇದು ರಾಗಿಣಿ ಗಮನಕ್ಕೆ ಬಂದಿದೆ. ಇಂದು ಅವರು ಬೆಂಗಳೂರಿನ ಚಿತಾಗಾರವೊಂದಕ್ಕೆ ತೆರಳಿ ಊಟ ಹಂಚುವ ಕೆಲಸ ಮಾಡಿದ್ದಾರೆ. ಅಲ್ಲದೆ, ರೇಷನ್​ ಕೂಡ ನೀಡಿದ್ದಾರೆ.

ಅಲ್ಲಿಗೆ ಭೇಟಿ ನೀಡಿ ಊಟ ಹಂಚಿರುವ ಬಗ್ಗೆ ರಾಗಿಣಿ ಸಂತಸ ವ್ಯಕ್ತಪಡಿಸಿದ್ದಾರೆ. ಚಿತಾಗಾರದಲ್ಲಿ ಕೆಲಸ ಮಾಡುವ ಅನೇಕರಿಗೆ ಹೊರ ಜಗತ್ತಿನ ಪರಿಚಯವೇ ಇಲ್ಲ. ಅವರಿಗೆ ಊಟ ನೀಡಿದಾಗ ಸಂತೋಷವಾಗುತ್ತದೆ ಎಂದು ರಾಗಿಣಿ ಹೇಳಿದ್ದಾರೆ. ಇತ್ತೀಚೆಗೆ ರಾಗಿಣಿ ಬೆಂಗಳೂರು ನಗರದಲ್ಲಿರುವ ಪೊಲೀಸರಿಗೆ ಊಟ ಹಂಚಿದ್ದರು.

ರಾಗಿಣಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಗಿಣಿ ಕೆಲಸವನ್ನು ನೋಡಿ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲೂ ರಾಗಿಣಿ ತಮ್ಮ ಕಾರ್ಯವನ್ನು ಮುಂದುವರಿಸುವ ಭರವಸೆ ನೀಡಿದ್ದಾರೆ.

 

ಇದನ್ನೂ ಓದಿ: ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು

ತುಪ್ಪದ ಬೆಡಗಿಗೆ ಖುಲಾಯಿಸಿದ ಅದೃಷ್ಟ; ಖಡಕ್​ ತನಿಖಾಧಿಕಾರಿಯಾಗಿ ಬರಲು ಸಿದ್ಧರಾಗುತ್ತಿದ್ದಾರೆ ರಾಗಿಣಿ ದ್ವಿವೇದಿ

Published On - 7:07 pm, Wed, 5 May 21