AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ಶ್ರೀದೇವಿಗೆ ಹೋಲಿಕೆ ಮಾಡುತ್ತಿರುವುದು ಖುಷಿ ಇದೆ; ಕಿರುತೆರೆ ನಟಿ ರೂಪಾಲಿ ಸಂತಸ

ಅನುಪಮಾ ಧಾರಾವಾಹಿಯಲ್ಲಿ ರೂಪಾಲಿ ನಟಿಸುತ್ತಿದ್ದಾರೆ. 2020ರಲ್ಲಿ ಈ ಧಾರಾವಾಹಿಯ ಪ್ರಸಾರ ಆರಂಭವಾಗಿತ್ತು. ಅಂದಿನಿಂದ ಇತ್ತೀಚೆವರೆಗೂ ಈ ಧಾರಾವಾಹಿ ಒಂದನೇ ಸ್ಥಾನದಲ್ಲೇ ಇತ್ತು. ಈ ಬಗ್ಗೆಯೂ ಅವರು ಸಂತಸ ಹೊರ ಹಾಕಿದ್ದಾರೆ.  

ನನ್ನನ್ನು ಶ್ರೀದೇವಿಗೆ ಹೋಲಿಕೆ ಮಾಡುತ್ತಿರುವುದು ಖುಷಿ ಇದೆ; ಕಿರುತೆರೆ ನಟಿ ರೂಪಾಲಿ ಸಂತಸ
ಶ್ರೀದೇವಿ-ರೂಪಾ ಗಂಗೂಲಿ
Follow us
ರಾಜೇಶ್ ದುಗ್ಗುಮನೆ
|

Updated on: May 19, 2021 | 6:16 PM

ಕಿರುತೆರೆ ನಟಿ ರೂಪಾಲಿ ಗಂಗೂಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಎಲ್ಲಾ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗಲೇ ಅನೇಕರು ರೂಪಾಲಿ ನಟನೆಯನ್ನು ಶ್ರೀದೇವಿಗೆ ಹೋಲಿಕೆ ಮಾಡಿದ್ದಾರೆ. ಇದಕ್ಕೆ ಅವರು ಸಾಕಷ್ಟು ಖುಷಿಯಾಗಿದ್ದಾರೆ. ಈ ಬಗ್ಗೆ ರೂಪಾಲಿ ಸಂತಸ ಹಂಚಿಕೊಂಡಿದ್ದಾರೆ.

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರೂಪಾಲಿ, ನನಗೆ ಶ್ರೀದೇವಿ ಮಾದರಿ. ಅವರ ಎಲ್ಲಾ ಚಲನಚಿತ್ರಗಳನ್ನು ನಾನು 25-30 ಬಾರಿ ನೋಡಿದ್ದೇನೆ. ಅನೇಕ ಚಿತ್ರಗಳನ್ನು ಥಿಯೇಟರ್‌ನಲ್ಲೇ ಕನಿಷ್ಠ 8-10 ಬಾರಿ ನೋಡಿದ್ದೇನೆ. ನಾನು ಶ್ರೀದೇವಿಯ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ ಎಂದಿದ್ದಾರೆ.

ನಾನು ಅವರ ಎಲ್ಲಾ ಚಲನಚಿತ್ರಗಳನ್ನು ನೋಡಿದ್ದೇನೆ. ಅವರ ಸಿನಿಮಾಗಳಲ್ಲಿನ ಪಾತ್ರಗಳು ತುಂಬಾನೇ ಇಷ್ಟವಾಗುತ್ತವೆ. ಅವರ ಪ್ರತಿ ಚಿತ್ರವೂ ನನಗೆ ಮಾದರಿ. ಹೀಗಿರುವಾಗ ನನ್ನ ನಟನೆಯನ್ನು ಶ್ರೀದೆವಿಗೆ ಹೋಲಿಕೆ ಮಾಡಿರೆ ಖಂಡಿತವಾಗಿಯೂ ಖುಷಿಯಾಗುತ್ತದೆ ಎಂದಿದ್ದಾರೆ ಅವರು.

ಅನುಪಮಾ ಧಾರಾವಾಹಿಯಲ್ಲಿ ರೂಪಾಲಿ ನಟಿಸುತ್ತಿದ್ದಾರೆ. 2020ರಲ್ಲಿ ಈ ಧಾರಾವಾಹಿಯ ಪ್ರಸಾರ ಆರಂಭವಾಗಿತ್ತು. ಅಂದಿನಿಂದ ಇತ್ತೀಚೆವರೆಗೂ ಈ ಧಾರಾವಾಹಿ ಒಂದನೇ ಸ್ಥಾನದಲ್ಲೇ ಇತ್ತು. ಈ ಬಗ್ಗೆಯೂ ಅವರು ಸಂತಸ ಹೊರ ಹಾಕಿದ್ದಾರೆ.

ರೂಪಾಲಿ Vs ಸಾರಾಭಾಯ್ ಎಂಬ ಕಾಮಿಕ್ ಸರಣಿಯಲ್ಲಿ ರೂಪಾಲಿ ತನ್ನ ಮೋನಿಷಾ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡರು. ಅವರು ಸಂಜೀವಿನಿ, ಕಹಾನಿ ಘರ್ ಘರ್ ಕಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಬಿಗ್ ಬಾಸ್ (2006), ಜರಾ ನಾಚ್ಕೆ ದಿಖಾ (2008), ಫಿಯರ್ ಫ್ಯಾಕ್ಟರ್: ಖತ್ರೋನ್ ಕಿ ಖಿಲಾಡಿ 2 (2009) ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

ಇದನ್ನೂ ಒದಿ: ಶ್ರೀದೇವಿ ಜೊತೆಗಿನ ಚಿತ್ರದ ಶೂಟಿಂಗ್​ಗೆ ಬರುವಾಗ ಐಷಾರಾಮಿ ಕಾರು ಬೇಡ ಎಂದಿದ್ದ ನಟ ಅಜಿತ್​

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್