ಬಾಲಿವುಡ್ನ ಖ್ಯಾತ ಫ್ಯಾಷನ್ ಡಿಸೈನರ್ ಆಗಿರುವ ಮನೀಶ್ ಮಲ್ಹೋತ್ರಾ (Manish Malhotra) ಅವರು ಸೋಮವಾರ (ಡಿ.5) ತಮ್ಮ 56ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಬಿ-ಟೌನ್ನ ದೊಡ್ಡ ದೊಡ್ಡ ಸ್ಟಾರ್ಗಳಿಗೆ ಇವರು ಡಿಸೈನರ್ ಆಗಿದ್ದು, ಹಾಗಾಗಿ ಇವರ ಬರ್ತ್ ಡೇಗೆ ಇಡೀ ಬಾಲಿವುಡ್ ಮಂದಿ ಆಗಮಿಸಿ ಶುಭಕೋರಿದ್ದಾರೆ. ನಟಿ ಕರೀನಾ ಕಪೂರ್ ಖಾನ್‌ನಿಂದ ಹಿಡಿದು ನಟಿ ಶಿಲ್ಪಾ ಶೆಟ್ಟಿ (Shilpa Shetty) ಕುಂದ್ರಾವರೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮಲ್ಹೋತ್ರಾ ಅವರ ಹುಟ್ಟುಹಬ್ಬದ ಪಾರ್ಟಿಗೆಂದು ಬಿ-ಟೌನ್ ಸ್ಟಾರ್ಗಳು ಮಸ್ತ್ಮಸ್ತ್ ಆಗಿ ತಮ್ಮ ಅತ್ಯುತ್ತಮ ಉಡುಗೆಯನ್ನು ತೊಟ್ಟು ಬಂದಿದ್ದರು. ಆದಾಗ್ಯೂ, ಕೆಲವರು ನೆಟ್ಟಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾ ಕೂಡ ಒಬ್ಬರು. ತಮ್ಮ ಬಟ್ಟೆಯಿಂದಾಗಿ ನಟಿ ಟ್ರೋಲ್ಗೆ ಒಳಗಾಗಿದ್ದು, ಉರ್ಫಿ ಜಾವೇದ್ ಅವರಿಂದ ಸ್ಪೂರ್ತಿ ಪಡೆದಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಮನೀಶ್ ಮಲ್ಹೋತ್ರಾ ಅವರ ಬರ್ತ್ ಡೇ ಪಾರ್ಟಿಗೆ ಸಹೋದರಿಯರಾದ ಶಿಲ್ಪಾ ಮತ್ತು ಶಮಿತಾ ಶೆಟ್ಟಿ ಇಬ್ಬರೂ ಭಾಗವಹಿಸಿದ್ದರು. ಶಮಿತಾ ಶೆಟ್ಟಿ ಕಪ್ಪು ಬಣ್ಣದ ಟಾಪ್ ಮತ್ತು ಲೆದರ್ ಸ್ಕರ್ಟ್ನ್ನು ಧರಿಸಿದ್ದರೆ, ಶಿಲ್ಪಾ ಶೆಟ್ಟಿ ಎರಡು ಬದಿಯಲ್ಲಿ ಬೇರೆ ಬೇರೆ ವಿನ್ಯಾಸವಿರುವ ಜಿನ್ಸ್ (two- toned denims) ಮತ್ತು ಬಾಡಿಸೂಟ್ ಟಾಪ್ ಧರಿಸಿದ್ದರು. ಶಿಲ್ಪಾ ಶೆಟ್ಟಿ ಅವರ ಈ ಬಟ್ಟೆ ಬಿಕಿನಿ ಬಾಟಮ್ ವಿನ್ಯಾಸದಂತೆ ಕಾಣುತ್ತಿದೆ ಎನ್ನಲಾಗುತ್ತಿದೆ. ಹಾಗಾಗಿ ಅನೇಕರು ಇವರನ್ನು ಟ್ರೋಲ್ ಮಾಡಿದ್ದಾರೆ. ಈ ಕುರಿತಾದ ಒಂದು ವಿಡಿಯೋ ವೈರಲ್ ಆಗಿದೆ.
ಶಿಲ್ಪಾ ಶೆಟ್ಟಿ ಅವರ ಬಟ್ಟೆಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದ್ದು, ಕೆಲವರು ಇವರು ಉರ್ಫಿ ಜಾವೇದ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದು, ‘ಇದು ಉರ್ಫಿ ಜಾವೇದ್ ಎಫೆಕ್ಟ್. ಈಗ ಅವರು ಉರ್ಫಿ ಜಾವೇದ್‌ನನ್ನು ಸೋಲಿಸಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಇಂತಹ ವಿಚಿತ್ರ ಪ್ಯಾಂಟ್ನ್ನು ಹಿಂದೆಂದೂ ನೋಡಿಲ್ಲ’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Kajol: ಮದುವೆ ಬಳಿಕ 2 ತಿಂಗಳಲ್ಲಿ 8 ಕೆಜಿ ತೂಕ ಜಾಸ್ತಿ ಆಗಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಕಾಜೋಲ್
ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರನ್ನು ಉರ್ಫಿ ಜಾವೇದ್ ಅವರಿಗೆ ಹೋಲಿಸುತ್ತಿರುವುದು ಇದೇ ಮೊದಲೇನಲ್ಲ. ಈ ಮುಂಚೆ ಶಿಲ್ಪಾ ಶೆಟ್ಟಿ ಅಭಿನಯದ ‘ನಿಕಮ್ಮ’ ಚಿತ್ರದ ಓಟಿಟಿ ಬಿಡುಗಡೆ ವೇಳೆಯೂ ಅವರು ಟ್ರೋಲ್ಗೆ ಒಳಗಾಗಿದ್ದರು. ಆ ವೇಳೆ ಅವರು ಧರಿಸಿದ್ದ ಬಟ್ಟೆಯಿಂದ ಉರ್ಫಿ ಜಾವೇದ್ರ ಪ್ರಭಾವಕ್ಕೆ ಒಳಗಾಗಿದ್ದಾರೆಂದು ನೆಟ್ಟಿಗರು ಆಡಿಕೊಂಡಿದ್ದರು. ಅನೇಕ ನಟ, ನಟಿಯರು ತಮ್ಮ ಚಿತ್ರ, ಬಟ್ಟೆ ಮತ್ತು ಹೇಳಿಕೆಗಳಿಂದ ಟ್ರೋಲ್ಗೆ ಒಳಗಾಗುತ್ತಾರೆ. ಕೆಲವರು ಸ್ಪಷ್ಟನೆ ನೀಡಿದರೆ ಮತ್ತೆ ಕೆಲವರು ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವ ಹಾಗಿರುತ್ತಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Wed, 7 December 22