AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಗೆಳೆತನ ಹಾಗೆಯೇ ಇದೆ; ಹಳೆಯ ಫೋಟೋ ಹಂಚಿಕೊಂಡ ಸುಧಾರಾಣಿ

ಸುಧಾರಾಣಿ ಅವರು ಬಾಲ ಕಲಾವಿದೆಯಾಗಿ ನಟಿಸಿದರು. 1986ರಲ್ಲಿ ರಿಲೀಸ್ ಆದ ‘ಆನಂದ್’ ಸಿನಿಮಾ ಮೂಲಕ ನಾಯಕಿ ಆದರು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. ಇವರ ಕಾಲಘಟ್ಟದಲ್ಲಿ ಹೀರೋಯಿನ್ ಆಗಿ ಮಿಂಚುತ್ತಿದ್ದ ವನಿತಾ ವಾಸು ಹಾಗೂ ಚಿತ್ರಾ ಶೆಣೋಯ್ ಜೊತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ.

ಆ ಗೆಳೆತನ ಹಾಗೆಯೇ ಇದೆ; ಹಳೆಯ ಫೋಟೋ ಹಂಚಿಕೊಂಡ ಸುಧಾರಾಣಿ
ಆ ಗೆಳೆತನ ಹಾಗೆಯೇ ಇದೆ; ಹಳೆಯ ಫೋಟೋ ಹಂಚಿಕೊಂಡ ಸುಧಾರಾಣಿ
ರಾಜೇಶ್ ದುಗ್ಗುಮನೆ
|

Updated on:Sep 26, 2024 | 1:36 PM

Share

ನಟಿ ಸುಧಾರಾಣಿ ಅವರು ಹಿರಿತೆರೆಯಲ್ಲಿ ಮಿಂಚಿದವರು. ಈಗ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಕಿರುತೆರೆ ಲೋಕದಲ್ಲಿ ಬೇಡಿಕೆ ಇದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಇತರ ಕಲಾವಿದರ ಜೊತೆ ಮೊದಲಿದ್ದ ಬಾಂಡಿಗ್ ಉಳಿಸಿಕೊಂಡಿದ್ದಾರೆ. ಹಳೆಯ ಫೋಟೋ ಹಾಗೂ ಈಗಿನ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಸುಧಾರಾಣಿ ಅವರು 80ರ ದಶಕದಲ್ಲಿ ಬಾಲ ಕಲಾವಿದೆಯಾಗಿ ಮಿಂಚಿದರು. 1986ರಲ್ಲಿ ರಿಲೀಸ್ ಆದ ‘ಆನಂದ್’ ಸಿನಿಮಾ ಮೂಲಕ ನಾಯಕಿ ಆದರು. ಶಿವರಾಜ್​ಕುಮಾರ್ ಜೊತೆ ಇವರು ತೆರೆ ಹಂಚಿಕೊಂಡಿದ್ದರು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. ಇವರ ಕಾಲಘಟ್ಟದಲ್ಲಿ ಹೀರೋಯಿನ್ ಆಗಿ ಮಿಂಚುತ್ತಿದ್ದ ವನಿತಾ ವಾಸು ಹಾಗೂ ಚಿತ್ರಾ ಶೆಣೋಯ್ ಜೊತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ.

ಸುಧಾರಾಣಿ, ಚಿತ್ರಾ ಶೆಣೋಯ್ ಹಾಗೂ ವನಿತಾ ವಾಸು ಒಟ್ಟಾಗಿ ನಿಂತು ತೆಗೆಸಿಕೊಂಡಿರುವ ಹಳೆಯ ಫೋಟೋನ ಹಂಚಿಕೊಂಡಿದ್ದಾರೆ. ಕೆಳಭಾಗದಲ್ಲಿ ಅವರ ಈಗಿನ ಫೋಟೋಗಳನ್ನು ಸೇರಿಸಿದ್ದಾರೆ. ವಿಶೇಷ ಎಂದರೆ ಈ ಮೂವರು ಜೀ ಕನ್ನಡದ ಧಾರಾವಾಹಿಗಳಲ್ಲಿಯೇ ನಟಿಸುತ್ತಿದ್ದಾರೆ.

ಸುಧಾರಾಣಿ ಅವರು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಾ ಹಾಗೂ ವನಿತಾ ವಾಸು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ತಮಗೆ ಹೊಂದಿಕೆ ಆಗುವ ಪಾತ್ರಗಳನ್ನು ಒಪ್ಪಿಕೊಂಡು ಇವರು ಬಣ್ಣ ಹಚ್ಚುತ್ತಾ ಇದ್ದಾರೆ.

ಇದನ್ನೂ ಓದಿ: ‘ಆ ವ್ಯಕ್ತಿಗೆ ಮಾನಸಿಕ ಸಮಸ್ಯೆಗಳಿದ್ದವು’; ವಿಚ್ಛೇದನದ ಬಗ್ಗೆ ಮಾತನಾಡಿದ ಸುಧಾರಾಣಿ

ಸುಧಾರಾಣಿ ಅವರಿಗೆ ಹಿರಿತೆರೆಯಲ್ಲಿ ಈಗಲೂ ಬೇಡಿಕೆ ಇದೆ. ಅವರು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಈ ವರ್ಷ ರಿಲೀಸ್ ಆದ ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು. ‘ಅವತಾರ ಪುರುಷ ಪಾರ್ಟ್ 2’ ಚಿತ್ರದಲ್ಲೂ ಅವರು ಬಣ್ಣ ಹಚ್ಚಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:14 am, Thu, 26 September 24