ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರು ಕಾಟ ಕೊಡುವುದು ಹೊಸದೇನಲ್ಲ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಲೇಬೇಕು. ನೆಟ್ಟಿಗರ ಕಮೆಂಟ್ ಕೆಲವೊಮ್ಮೆ ಅಸಭ್ಯತೆಯ ಗಡಿ ಮೀರುತ್ತದೆ. ಆಗ ಯಾವ ಸೆಲೆಬ್ರಿಟಿಯೂ ಸುಮ್ಮನೆ ಕೂರುವುದಿಲ್ಲ. ಇತ್ತೀಚೆಗೆ ನಟಿ ಟೀನಾ ದತ್ತ ಅವರಿಗೆ ಅದೇ ರೀತಿ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಫಾಲೋ ಮಾಡುತ್ತಿರುವ ಒಬ್ಬ ವ್ಯಕ್ತಿಯ ಬಣ್ಣವನ್ನು ಅವರು ಬಯಲು ಮಾಡಿದ್ದಾರೆ. ಆತ ಮಾಡಿದ ಕೊಳಕು ಕಮೆಂಟ್ಗಳ ಸ್ಕ್ರೀನ್ಶಾಟ್ಗಳನ್ನು ಟೀನಾ ದತ್ತ ಬಹಿರಂಗ ಪಡಿಸಿದ್ದಾರೆ. ಇಷ್ಟೆಲ್ಲ ಆದ ಬಳಿಕ ಆತ ಹೊಸ ಡ್ರಾಮಾ ಶುರು ಮಾಡಿದ್ದಾನೆ.
ಹಿಂದಿ ಕಿರುತೆರೆಯ ಅನೇಕ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿರುವ ನಟಿ ಟೀನಾ ದತ್ತ ಅವರು ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಫೇಮಸ್ ಆಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಟಾಪ್ಲೆಸ್ ಆಗಿ ಪೋಸ್ ನೀಡಿ, ಮಾದಕ ನೋಟ ಬೀರಿದ್ದರು. ಅದನ್ನು ಕಂಡ ನೆಟ್ಟಿಗನೊಬ್ಬ ತೀರಾ ಅಸಭ್ಯ, ಅಶ್ಲೀಲ ಭಾಷೆಯಲ್ಲಿ ಕಮೆಂಟ್ ಮಾಡಿದ್ದಾನೆ. ಈ ಸುದ್ದಿಯಲ್ಲಿ ಆ ಪದಗಳನ್ನು ಬರೆಯಲು ಸಾಧ್ಯವೇ ಇಲ್ಲ. ಅಂತಹ ಕೀಳು ಪದಗಳನ್ನು ಬಳಸಿ ಆತ ಕಮೆಂಟ್ ಮಾಡಿರುವುದು ಟೀನಾ ದತ್ತ ಕೋಪಕ್ಕೆ ಕಾರಣ ಆಗಿದೆ. ಕೂಡಲೇ ಆತನ ಕಮೆಂಟ್ಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಟೀನಾ ದತ್ತ ಅವರು ಆ ಕಿಡಿಗೇಡಿಯ ಮರ್ಯಾದೆ ಹರಾಜು ಹಾಕಿದ್ದಾರೆ.
ಆತನ ಫೋಟೋ ಮತ್ತು ಗುರುತನ್ನು ಜಗಜ್ಜಾಹೀರು ಮಾಡುವ ಮೂಲಕ ಕೀಳು ಮನಸ್ಥಿತಿಯ ಆ ನೆಟ್ಟಿಗನಿಗೆ ಟೀನಾ ದತ್ತ ಪಾಠ ಕಲಿಸಿದ್ದಾರೆ. ಈಗ ಎಲ್ಲರೆದುರು ಮಾನ ಹರಾಜು ಆಗುತ್ತಿದ್ದಂತೆಯೇ ಆತ ಟೀನಾಗೆ ಮೆಸೇಜ್ ಮಾಡಿ ಕ್ಷಮೆ ಕೇಳಿದ್ದಾನೆ. ಅಚ್ಚರಿ ಎಂದರೆ, ಕೆಲವೇ ಕ್ಷಣಗಳ ಹಿಂದೆ ಅಶ್ಲೀಲ ಪದಗಳಿಂದ ಕಮೆಂಟ್ ಮಾಡಿದ್ದವನು ಈಗ ‘ಅಕ್ಕ.. ದಯವಿಟ್ಟು ಕ್ಷಮಿಸಿ’ ಎಂದು ಮೆಸೇಜ್ ಮಾಡಿರುವುದು ಕಂಡು ಟೀನಾಗೆ ಅಚ್ಚರಿ ಆಗಿದೆ. ‘ನೋಡಿ ಈಗ ಅಕ್ಕ ಎನ್ನುತ್ತಿದ್ದಾನೆ’ ಎಂದು ಆ ಮೆಸೇಜ್ನ ಸ್ಕ್ರೀನ್ಶಾಟ್ ಅನ್ನು ಕೂಡ ಟೀನಾ ಬಹಿರಂಗಪಡಿಸಿದ್ದಾರೆ.
ಇಷ್ಟೆಲ್ಲ ಆದ ಬಳಿಕ ಅವರು ಕಮೆಂಟ್ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ.
ಇದನ್ನೂ ಓದಿ:
ನೀಲಿ ಚಿತ್ರಕ್ಕೆ ಮಲಯಾಳಂ ನಟಿ ಫೋಟೋ ಅಂಟಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ ಶಾಕ್ ಆದ ರಮ್ಯಾ ಸುರೇಶ್
ನಿಮ್ಮ ಪರ್ಸನಲ್ ಮೆಸೇಜ್ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್ ಉಪಾಯ
Published On - 9:35 am, Fri, 4 June 21