ನೀಲಿ ಚಿತ್ರಕ್ಕೆ ಮಲಯಾಳಂ ನಟಿ ಫೋಟೋ ಅಂಟಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ ಶಾಕ್ ಆದ ರಮ್ಯಾ ಸುರೇಶ್
ಕೆಲ ಕಿಡಿಗೇಡಿಗಳು ಅಶ್ಲೀಲ ವಿಡಿಯೋಗೆ ರಮ್ಯಾ ಅವರ ಮುಖವನ್ನು ಎಡಿಟ್ ಮಾಡಿದ್ದಾರೆ. ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ರಮ್ಯಾ ಪರಿಚಯಸ್ಥರಿಗೆ ಸಿಕ್ಕಿದ್ದು, ಇವರ ಗಮನಕ್ಕೆ ತಂದಿದ್ದಾರೆ.
ನೀಲಿ ಚಿತ್ರವೊಂದಕ್ಕೆ ಮಲಯಾಳಂ ನಟಿ ರಮ್ಯಾ ಸುರೇಶ್ ಅವರ ಮುಖವನ್ನು ಎಡಿಟ್ ಮಾಡಿ ಆನ್ಲೈನ್ಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಚಾರ ನಟಿಯ ಗಮನಕ್ಕೆ ಬಂದಿದ್ದು, ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೆಲ ಕಿಡಿಗೇಡಿಗಳು ಅಶ್ಲೀಲ ವಿಡಿಯೋಗೆ ರಮ್ಯಾ ಅವರ ಮುಖವನ್ನು ಎಡಿಟ್ ಮಾಡಿದ್ದಾರೆ. ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ರಮ್ಯಾ ಪರಿಚಯಸ್ಥರಿಗೆ ಸಿಕ್ಕಿದ್ದು, ಇವರ ಗಮನಕ್ಕೆ ತಂದಿದ್ದಾರೆ. ಇದನ್ನು ನೋಡಿ ರಮ್ಯಾ ಶಾಕ್ಗೆ ಒಳಗಾದರು. ಅಲ್ಲದೆ, ತಕ್ಷಣ ಅವರು ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.
ವಾಟ್ಸ್ಆ್ಯಪ್ ಗ್ರೂಪ್ ಒಂದರಲ್ಲಿ ಈ ವಿಡಿಯೋ ಬಂದಿತ್ತು ಎನ್ನಲಾಗಿದೆ. ಸದ್ಯ, ಸೈಬರ್ ಪೊಲೀಸರು ಗ್ರೂಪ್ ಅಡ್ಮಿನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ರಮ್ಯಾ ಕೂಡ ಯಾರ ಬಗ್ಗೆಯೂ ಅನುಮಾನ ಹೊರ ಹಾಕಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ಈ ವಿಡಿಯೋವನ್ನು ಎಷ್ಟು ಜನ ನೋಡಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಈ ವೀಡಿಯೊ ನನ್ನ ಮಾನಸಿಕ ಶಾಂತಿಗೆ ಧಕ್ಕೆ ತರುತ್ತಿದೆ. ಆದರೆ, ಈ ವಿಡಿಯೋಗೂ ನನಗೂ ಸಂಬಂಧವಿಲ್ಲ. ಇಂತಹ ದುರುದ್ದೇಶಪೂರಿತ ವಿಷಯವನ್ನು ಶೇರ್ ಮಾಡುವುದರಿಂದ ಜನರಿಗೆ ಯಾವ ರೀತಿಯ ಆನಂದ ಸಿಗುತ್ತದೆಯೋ ಅದು ನನಗೆ ಗೊತ್ತಿಲ್ಲ. ನನ್ನ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸಾಧ್ಯವಾದಷ್ಟು ನನ್ನನ್ನು ಸಮಾಧಾನಪಡಿಸುತ್ತಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಲಿರುವ ರಮೇಶ್ ಜಾರಕಿಹೊಳಿ