Trisha Krishnan: ಜೀವನದಲ್ಲಿ ಮೊದಲ ಬಾರಿಗೆ ‘ನೆಗೆಟಿವ್’ ರಿಪೋರ್ಟ್ ನೋಡಿ ಖುಷಿಪಟ್ಟ ತ್ರಿಷಾ; 2022ಕ್ಕೆ ರೆಡಿ ಎಂದ ನಟಿ

Covid 19: ಬಹುಭಾಷಾ ನಟಿ ತ್ರಿಷಾ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇದೇ ವೇಳೆ ಅವರು ಕಷ್ಟಕಾಲದಲ್ಲಿ ಜತೆಯಾಗಿ ನಿಂತ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

Trisha Krishnan: ಜೀವನದಲ್ಲಿ ಮೊದಲ ಬಾರಿಗೆ ‘ನೆಗೆಟಿವ್’ ರಿಪೋರ್ಟ್ ನೋಡಿ ಖುಷಿಪಟ್ಟ ತ್ರಿಷಾ; 2022ಕ್ಕೆ ರೆಡಿ ಎಂದ ನಟಿ
ತ್ರಿಷಾ
Edited By:

Updated on: Jan 12, 2022 | 3:01 PM

ಬಹುಭಾಷಾ ನಟಿ ತ್ರಿಷಾ ಕೃಷ್ಣನ್ (Trisha Krishnan) ಇತ್ತೀಚೆಗೆ ಕೊರೊನಾ (Corona) ಸೋಂಕಿಗೆ ತುತ್ತಾಗಿದ್ದರು. ಜನವರಿ 7ರಂದು ನಟಿ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ಕೂಡ ಹೊಸ ವರ್ಷಕ್ಕೂ ಸ್ವಲ್ಪ ದಿನ ಮೊದಲು ಸೋಂಕು ತಗುಲಿತ್ತು. ಸೋಂಕಿನ ಗುಣಲಕ್ಷಣಗಳೂ ಕಾಣಿಸಿಕೊಂಡಿತ್ತು ಎಂದು ನಟಿ ಹೇಳಿದ್ದರು. ಇದರಿಂದ ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಅಲ್ಲದೇ ನಟಿಯ ಆರೋಗ್ಯ ಸುಧಾರಣೆಗೆ ಹಾರೈಸಿದ್ದರು. ಇದೀಗ ತ್ರಿಷಾ ಕೊವಿಡ್​ನಿಂದ ಚೇತರಿಸಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ಈ ಕುರಿತು ಇಂದು (ಬುಧವಾರ) ಬರೆದುಕೊಂಡಿರುವ ನಟಿ, ಕಷ್ಟಕಾಲದಲ್ಲಿ ಪ್ರಾರ್ಥಿಸಿ, ಹಾರೈಸಿ ಜತೆಯಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಜೀವನದಲ್ಲಿ ಮೊದಲ ಬಾರಿಗೆ ನೆಗೆಟಿವ್ ಎಂದು ರಿಪೋರ್ಟ್​​ನಲ್ಲಿ ಇರುವುದನ್ನು ಕಂಡು ಮೊದಲ ಬಾರಿಗೆ ಸಂತಸವಾಯಿತು.
ಮೊದಲೆಲ್ಲಾ ರಿಪೋರ್ಟ್​ನಲ್ಲಿ ನೆಗೆಟಿವ್ ಎಂದಿರುವುದನ್ನು ಓದುವುದಕ್ಕೆ ಖುಷಿಯಾಗುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ರಿಪೋರ್ಟ್​ನಲ್ಲಿ ‘ನೆಗೆಟಿವ್’ ಎಂದು ಬರೆದಿದ್ದು ಸಖತ್ ಖುಷಿ ನೀಡಿತು ಎಂದು ನಟಿ ಬರೆದುಕೊಂಡಿದ್ದಾರೆ. ಹೊಸ ವರ್ಷಕ್ಕೂ ಮುನ್ನವೇ ಸೋಂಕು ತಗುಲಿದ್ದರಿಂದ ನಟಿಗೆ 2022ನ್ನು ಸ್ವಾಗತಿಸಲು ಸಾಧ್ಯವಾಗಿರಲಿಲ್ಲ. ಇದೀಗ ‘2022ಕ್ಕೆ ಈಗ ನಾನು ರೆಡಿ’ ಎಂದು ತ್ರಿಷಾ ಸಂತಸದಿಂದ ಹೇಳಿದ್ದಾರೆ.

ತ್ರಿಷಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಕೊವಿಡ್ ಬಂದಿದ್ದ ಸಂದರ್ಭದಲ್ಲಿ ತ್ರಿಷಾ ಲಸಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಕೊರೊನಾ ಸೋಂಕಿಗೆ ತುತ್ತಾಗಿದ್ದರೂ ಕೂಡ ಲಸಿಕೆ ಪಡೆದಿದ್ದರಿಂದ ಸೋಂಕಿನ ಪರಿಣಾಮ ಕಡಿಮೆ ಇತ್ತು. ಎಲ್ಲರೂ ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಎಂದು ಅವರು ಅಭಿಮಾನಿಗಳಲ್ಲಿ ಕೋರಿಕೊಂಡಿದ್ದರು.

ತ್ರಿಷಾ ಚಿತ್ರರಂಗಕ್ಕೆ ಬಂದು 19 ವರ್ಷಗಳು ಕಳೆದಿವೆ. 2002ರಲ್ಲಿ ತಮಿಳು ಚಿತ್ರ ‘ಮೌನಮ್ ಪೇಸಿಯಾದೆ’ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಕನ್ನಡ ಚಿತ್ರಗಳೂ ಸೇರಿದಂತೆ ಹಲವು ಭಾಷೆಗಳ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಸದ್ಯ ತ್ರಿಷಾ ತಮಿಳಿನ ‘ರಾಂಗಿ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಚಿತ್ರದ ಬಿಡುಗಡೆ ಕುರಿತಂತೆ ಇನ್ನೂ ಚಿತ್ರತಂಡ ಮಾಹಿತಿ ಹಂಚಿಕೊಂಡಿಲ್ಲ. ಮಣಿರತ್ನಂ ಆಕ್ಷನ್ ಕಟ್ ಹೇಳುತ್ತಿರುವ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್​’ನಲ್ಲೂ ತ್ರಿಷಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ:

‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?

Viral Video: ಮಿನ್ನಲ್​ ಮುರಳಿ ಚಿತ್ರದ ಸೀನ್​ನಂತೆ ವಿಡಿಯೋ ಮಾಡಿ ಮದುವೆಗೆ ಆಮಂತ್ರಣ ನೀಡಿದ ಜೋಡಿ